ಭೀಕರ ಗುಡ್ಡ ಕುಸಿತ: ಮನೆ, ಬೆಳೆ ಮಣ್ಣುಪಾಲು.. ಊರು ತೊರೆದ ಸಿದ್ಧಿ ಜನಾಂಗ

ಭೀಕರ ಗುಡ್ಡ ಕುಸಿತ: ಮನೆ, ಬೆಳೆ ಮಣ್ಣುಪಾಲು.. ಊರು ತೊರೆದ ಸಿದ್ಧಿ ಜನಾಂಗ

ಉತ್ತರ ಕನ್ನಡ: ಅದೊಂದು ನೂರಾರು ವರ್ಷಗಳಿಂದ ಅರಣ್ಯದಂಚಿನಲ್ಲಿ ಬದುಕು ಕಟ್ಟಿಕೊಂಡ ಬುಡಕಟ್ಟು ಸಮುದಾಯ. ಕಾಡಂಚಿನಲ್ಲಿ ತಾವಾಯ್ತು ತಮ್ಮ ಕೆಲಸ ಆಯ್ತು ಅಂತಿದ್ದವರ ನೆಮ್ಮದಿಯನ್ನು ಕೆಲ ದಿನಗಳ ಹಿಂದೆ ಸುರಿದ ಮಳೆ ಹಾಗೂ ಪ್ರವಾಹ ಕಸಿದು ಬೀದಿಗೆ ತಳ್ಳಿದೆ.

blank

ಕಳೆದ ಕೆಲವು ದಿನಗಳ ಹಿಂದೆ ಯಲ್ಲಾಪುರದ ಕೆಳಾಸೆ ಗ್ರಾಮದಲ್ಲಿ ಸುರಿದ ಧಾರಕಾರ ಮಳೆಗೆ ಗುಡ್ಡವೊಂದು ಕುಸಿದು ಬಿದ್ದ ಪರಿಣಾಮ, ಮಳೆಯಬ್ಬರಕ್ಕೆ ರಸ್ತೆಗಳು ಬಾಯ್ತೆರೆದಿದ್ದು, ಪ್ರವಾಹದ ಅಬ್ಬರಕ್ಕೆ ತೋಟಗಳಿಗೆ ನೀರು ಹೊಕ್ಕು ಬೆಳೆಯೆಲ್ಲ ನಾಶವಾಗಿ ಜನರ ಬದುಕನ್ನು ಬರ್ಭರವಾಗಿಸಿಬಿಟ್ಟಿದೆ.

blank

ಜುಲೈ 22ರ ತಡ ರಾತ್ರಿ ಸುರಿದ ಭಾರೀ ಮಳೆಗೆ ಗ್ರಾಮದ ಸಮೀಪದ ಗುಡ್ಡ ಕುಸಿದಿದ್ದು ಬೆಳಗ್ಗೆ ಎದ್ದು ನೋಡುವಾಗ ಮನೆ ಬಾಗಿಲಿಗೆ ಮಣ್ಣು-ಕಲ್ಲುಗಳ ಜೊತೆಗೆ ಭಾರಿ ಪ್ರಮಾಣದ ನೀರು ಹರಿದು ಬಂದಿದೆ. ಜೀವ ಉಳಿದ್ರೆ ಸಾಕು ಅಂತ ಜನರು ವಸ್ತುಗಳನ್ನೆಲ್ಲ ಅಲ್ಲೇ ಬಿಟ್ಟು ಮನೆಯಲ್ಲಿದ್ದ ಮಹಿಳೆಯರು, ಮಕ್ಕಳನ್ನು ರಕ್ಷಿಸಿದ್ದರು. ಇದೀಗ ಪ್ರವಾಹ ಇಳಿದಿದ್ರೂ ಮನೆ ಗೋಡೆಗಳು ನೆಲಸಮವಾಗಿದ್ದು ಇದ್ದ ಗೋಡೆಗಳು ನೆನೆದಿದ್ದು ಆಗಲೋ ಈಗಲೋ ಅಂತಿವೆ.

blank

ಕೆಳಾಸೆ ಗ್ರಾಮದಲ್ಲಿ ಒಟ್ಟು 40 ಮನೆಗಳಿದ್ದು, ಸಿದ್ದಿ ಸಮುದಾಯದವರೇ ವಾಸಿಸುವ ಗೌಳಿಪಾಲ ಪ್ರದೇಶದಲ್ಲಿ 8 ಮನೆಗಳಿವೆ. ಮೊನ್ನೆ ಸುರಿದ ಭಾರೀ ಮಳೆಗೆ ಗುಡ್ಡದ ಮಣ್ಣು ಇಲ್ಲಿನ ಮನೆ, ತೋಟಗಳತ್ತ ಹರಿದು ಬಂದಿದೆ. ಹೀಗಾಗಿ ಇಲ್ಲಿನ ಮೂರು ಕುಟುಂಬಗಳು ಮನೆ ತೊರೆದು ಸಮೀಪದಲ್ಲಿರುವ ಭಟ್ಟರೊಬ್ಬರ ಬಿಡಾರದಲ್ಲಿ ಬೀಡುಬಿಟ್ಟಿರುವದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪವಾಡ; ಕೊರೊನಾ ವಿರುದ್ಧ 50 ದಿನ ಹೋರಾಡಿ ಇವರು ಬದುಕಿದ್ದೇ ರೋಚಕ

ಮಳೆಯಿಂದಾಗಿ ರಸ್ತೆ ಕುಸಿದಿದ್ರೆ, ತೋಟಕ್ಕೆ ಹರಿದುಬಂದ ಭಾರೀ ಪ್ರಮಾಣದ ಮಣ್ಣಿನಿಂದ ಬಾಳೆ, ಅಡಿಕೆ, ತೆಂಗಿನ ತೋಟಗಳು ನಾಶವಾಗಿದೆ. ಸುಮಾರು ಅರ್ಧ ಕಿಲೋಮೀಟರ್ ಅಂತರದಲ್ಲೇ 2 ಕಡೆ ಗುಡ್ಡ ಕುಸಿದಿದ್ದು ಮತ್ತೆ ಯಾವಾಗ ಕುಸಿಯುತ್ತೋ ಅನ್ನೋ ಆತಂಕ ಶುರುವಾಗಿದೆ.  ಆದ್ರೆ ಇಷ್ಟು ಅನಾಹುತ ಸಂಭವಿಸಿದರೂ ಯಾವುದೇ ಜನಪ್ರತಿನಿಧಿಗಳು ಸ್ಥಳಕ್ಕಾಗಮಿಸಿಲ್ಲ. ಅಷ್ಟೆ ಏಕೆ ಇದು ಸ್ವತಃ ಸಚಿವ ಶಿವರಾಮ್ ಹೆಬ್ಬಾರ್ ಊರಾದರೂ ಇಲ್ಲಿನ ಜನ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದು ಕೂಡಲೇ ಪರಿಹಾರ ಒದಗಿಸಬೇಕು ಅಂತ ಜನ ಆಗ್ರಹಿಸಿದ್ದಾರೆ.

blank

ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಸಾಕಷ್ಟು ಹಾನಿಯಾಗಿದೆ. ಆದರೆ ಕೆಲವೆಡೆ ಸದ್ಯ ಕಾಳಜಿ ಕೇಂದ್ರ ತೆರೆಯಲಾಗಿದೆ. ಆದರೆ ಭೂಕುಸಿತವಾದ ಕೆಳಾಸೆ ಗ್ರಾಮವನ್ನ ನಿರ್ಲಕ್ಷಿಸಲಾಗಿದ್ದು, ಬೇರೆಯವರ ಮನೆಯೇ ಆಶ್ರಯವಾಗಿದೆ. ಕೂಡಲೇ ಅಧಿಕಾರಿಗಳು ಸೂರು ಕಳೆದುಕೊಂಡು ಬೀದಿಗೆ ಬಿದ್ದವರಿಗೆ ಸೂರಿನ ವ್ಯವಸ್ಥೆ ಮಾಡಿಕೊಡಬೇಕಿದೆ.

Source: newsfirstlive.com Source link