ತೆರೆ ಮೇಲೆ ಬರಲಿದೆ ಚಿನ್ನದ ಹುಡುಗನ ಸಿನಿಮಾ.. ನೀರಜ್ ಪಾತ್ರ ಯಾರು ಮಾಡಬೇಕಂತೆ ಗೊತ್ತಾ..?

ತೆರೆ ಮೇಲೆ ಬರಲಿದೆ ಚಿನ್ನದ ಹುಡುಗನ ಸಿನಿಮಾ.. ನೀರಜ್ ಪಾತ್ರ ಯಾರು ಮಾಡಬೇಕಂತೆ ಗೊತ್ತಾ..?

ಟೋಕಿಯೊ 2020 ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತದ ಮೂಲಕ ಭಾರತಕ್ಕೆ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಚಿನ್ನದ ಪದಕ ತಂದುಕೊಟ್ಟ ನೀರಜ್ ಚೋಪ್ರಾ ಸಾಧನೆ ದೇಶದೆಲ್ಲೆಡೆ ಮನೆ ಮಾತಾಗಿದೆ. ಅಲ್ಲದೆ ನೀರಜ್​ ಚೋಪ್ರಾ ಕುರಿತು ಸಿನಿಮಾ‌ ಮಾಡಲು ನಿರ್ಮಾಪಕ, ದಕ್ಷಿಣ ಕನ್ನಡ ಜಿಲ್ಲೆಯ ಅರುಣ್‌ ರೈ ತೋಡಾರ್ ಮುಂದಾಗಿದ್ದಾರೆ.

blank

ಈಗಾಗಲೇ ಕಂಬಳದ ಬಗ್ಗೆ ‘ಬಿರ್ದ್‌ದ ಕಂಬುಲ’ ಸಿನಿಮಾ ನಿರ್ಮಾಣ ಮಾಡುತ್ತಿರುವ ಅರುಣ್ ರೈ ತೋಡಾರ್, ಈ ಮೂಲಕ ಮತ್ತೊಂದು ಸಾಹಸಕ್ಕೆ ಅಣಿಯಾಗಿದ್ದಾರೆ. ಇನ್ನು 2018ರ ಸಂದರ್ಶನವೊಂದರಲ್ಲಿ ತಮ್ಮ ಕುರಿತ ಚಿತ್ರ ತಯಾರಾದರೆ ಯಾರು ಮಾಡಬೇಕು ಅನ್ನೋ ಪ್ರಶ್ನೆಗೆ ಉತ್ತರಿಸಿದ್ದ ನೀರಜ್ ಚೋಪ್ರಾ, ನನ್ನ ಬಗ್ಗೆ ಚಿತ್ರ ನಿರ್ಮಾಣವಾದ್ರೆ ಅದ್ಭುತವಾಗಿರುತ್ತದೆ. ಅಕ್ಷಯ್ ಕುಮಾರ್​ ಅಥವಾ ರಣದೀಪ್ ಹೂಡಾ ಅವರು ನಟಿಸಬೇಕು ಎಂದಿದ್ದರು.

ಇದನ್ನೂ ಓದಿ: ತಾಯಿಗೆ ಒಲಿಂಪಿಕ್ ಪದಕ ತೊಡಿಸಿದ ಕ್ಯಾಪ್ಟನ್; ಮಡಿಲಲ್ಲಿ ಮಗುವಾದ ಮನ್​ಪ್ರೀತ್..!

blank

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ್‌ ಥ್ರೋ ಫೈನಲ್​​ನಲ್ಲಿ ಎದುರಾಳಿಯನ್ನು ಸೋಲಿಸುವ ಮೂಲಕ ನೀರಜ್‌ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತಕ್ಕೆ ಟೋಕಿಯೋ ಒಲಿಂಪಿಕ್​ನಲ್ಲಿ ಚಿನ್ನದ ಪದಕವನ್ನ ತಂದುಕೊಟ್ಟಿದ್ದಾರೆ. ಫೈನಲ್​​​ನಲ್ಲಿ 87.58 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಅಗ್ರಸ್ಥಾನ ಪಡೆದುಕೊಳ್ಳುವ ಮೂಲಕ ನೀರಜ್​​ ಗೆದ್ದು ಬೀಗಿದರು.

ಇದನ್ನೂ ಓದಿ: ನೀರಜ್ ಚೋಪ್ರಾ ಚಿನ್ನ ಗೆದ್ದ ದಿನಕ್ಕೆ ವಿಶೇಷ ಮಾನ್ಯತೆ; ‘ರಾಷ್ಟ್ರೀಯ ಭರ್ಜಿ ಎಸೆತ ದಿನ’ವೆಂದು ಘೋಷಣೆ

Source: newsfirstlive.com Source link