ಬಿಲ್ಡಿಂಗ್​​ನಲ್ಲಿ ಅಡಗಿದ್ದ ಉಗ್ರರಿಗಾಗಿ ಮಿಡ್​ನೈಟ್ ಕೂಂಬಿಂಗ್; ಓರ್ವ ಉಗ್ರನ ಸದೆಬಡೆದ ಸೇನೆ

ಬಿಲ್ಡಿಂಗ್​​ನಲ್ಲಿ ಅಡಗಿದ್ದ ಉಗ್ರರಿಗಾಗಿ ಮಿಡ್​ನೈಟ್ ಕೂಂಬಿಂಗ್; ಓರ್ವ ಉಗ್ರನ ಸದೆಬಡೆದ ಸೇನೆ

ನವದೆಹಲಿ: ಕುಲ್ಗಾಮ್​​ನಲ್ಲಿ ಉಗ್ರರ ವಿರುದ್ಧ ಬಿಎಸ್​ಎಫ್​ ಯೋಧರು ನಡೆಸುತ್ತಿರುವ ಕಾರ್ಯಾಚರಣೆಯು ಮುಂದುವರಿದಿದ್ದು, ಓರ್ವ ಉಗ್ರನನ್ನ ಹೊಡೆದುರುಳಿಸಲಾಗಿದೆ. ಇನ್ನು ಉಗ್ರರು ನಡೆಸಿದ ದಾಳಿಗೆ ಇಬ್ಬರು ಸೈನಿಕರು, ಇಬ್ಬರು ನಾಗರಿಕರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಭಯೋತ್ಪಾದಕರು ಬಿಎಸ್‌ಎಫ್ ಬೆಂಗಾವಲಿನ ಮೇಲೆ ದಾಳಿ ನಡೆಸಿದ್ದರು. ಆ ಬಳಿಕ ಬಿಲ್ಡಿಂಗ್ ಒಂದರಲ್ಲಿ ಅಡಗಿ ಕೂತಿದ್ದ ಇಬ್ಬರು ಲಷ್ಕರ್ ಭಯೋತ್ಪಾದಕರನ್ನು ನಮ್ಮ ಯೋಧರು ಸುತ್ತುವರಿದಿದ್ದರು. ರಾತ್ರೀ ಇಡೀ ಉಗ್ರರ ಬೇಟೆಗಾಗಿ ಕಾರ್ಯಾಚರಣೆ ನಡೆದಿತ್ತು. ಈ ಎನ್​ಕೌಂಟರ್​ನಲ್ಲಿ ಓರ್ವ ಉಗ್ರ ಹತನಾಗಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಮುಂಜಾಗೃತ ಕ್ರಮವಾಗಿ ಯೋಧರು ಅಲ್ಲಿ ನೆಲೆಸಿದ್ದ ಸುಮಾರು 22 ನಿವಾಸಿಗಳನ್ನ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಇನ್ನು ಬಿಎಸ್ಎಫ್ ಬೆಂಗಾವಲು ಜಮ್ಮುವಿನಿಂದ ಶ್ರೀನಗರಕ್ಕೆ ಹೋಗುತ್ತಿದ್ದಾಗ ಭಯೋತ್ಪಾದಕರು ದಾಳಿ ನಡೆಸಿದ್ದರು.

ಈ ಬಗ್ಗೆ ಮಾಹಿತಿ ನೀಡಿರುವ ಕಾಶ್ಮಿರದ ಐಜಿಪಿ ವಿಜಯ್ ಕುಮಾರ್, ಓರ್ವ ಉಗ್ರನನ್ನ ಕೊಲ್ಲಲಾಗಿದೆ. ಬಿಲ್ಡಿಂಗ್​ ಸಂಪೂರ್ಣ ಶೋಧ ಮಾಡಲಾಗಿದೆ. ನಿನ್ನೆ ಭಯೋತ್ಪಾದಕರು ಮನಬಂದಂತೆ ಗುಂಡು ಹಾರಿಸಿದ ಕಾರಣ ಸಿಆರ್‌ಪಿಎಫ್, ಒಬ್ಬ ಸೇನಾ ಸಿಬ್ಬಂದಿ ಗುಂಡೇಟಿಗೆ ಗಾಯಗೊಂಡಿದ್ದಾರೆ. ಮಾತ್ರವಲ್ಲ ಇಬ್ಬರು ನಾಗರಿಕರು ಸಹ ಗಾಯಗೊಂಡಿದ್ದಾರೆ ಅಂತಾ ತಿಳಿಸಿದ್ದಾರೆ.

Source: newsfirstlive.com Source link