ಕೊನೆಗೂ ಕೆಟ್ಟ ಸಂಪ್ರದಾಯ ಕೈಬಿಟ್ಟ ಇಂಡೋನೇಷ್ಯಾ: ಸೇನೆ ಸೇರುವ ಯುವತಿಯರಿಗೆ ‘ಆ’ ಪರೀಕ್ಷೆ ಮಾಡುವಂತಿಲ್ಲ

ಕೊನೆಗೂ ಕೆಟ್ಟ ಸಂಪ್ರದಾಯ ಕೈಬಿಟ್ಟ ಇಂಡೋನೇಷ್ಯಾ: ಸೇನೆ ಸೇರುವ ಯುವತಿಯರಿಗೆ ‘ಆ’ ಪರೀಕ್ಷೆ ಮಾಡುವಂತಿಲ್ಲ

ಈ ದೇಶದಲ್ಲಿ ಯುವತಿಯರು ಆರ್ಮಿ ಸೇರಬೇಕೆಂದರೆ ಕನ್ಯೆಯಾಗೆ ಇರಬೇಕಿತ್ತು. ಇದಕ್ಕೆ ಅವರ ಶೀಲ ಪರೀಕ್ಷೆ ಎನ್ನುವ ಅಭ್ಯಾಸ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿತ್ತು. ಅದ್ಯಾವ ದೇವರು ಬುದ್ಧಿ ಕೊಟ್ಟನೋ ಏನೋ ಕೊನೆಗೂ ಆ ಅಭ್ಯಾಸಕ್ಕೆ ಬ್ರೇಕ್ ಬಿದ್ದಿದೆ. ಮಹಿಳೆಯರು ಆರ್ಮಿ ಸೇರಬೇಕೆಂದರೇ ಈಗ ಕನ್ಯತ್ವ ಪರಿಕ್ಷೇಗೆ ಭಾಗಿಯಾಗ ಬೇಕಿಲ್ಲ.

ಹೆಣ್ಣನ್ನು ಸುಲಭವಾಗಿ ಆಕೆಯ ಕನ್ಯತ್ವದ ಆಧಾರದ ಮೇಲೆ ಲೆಕ್ಕಿಸಿ ಬಿಡ್ತಾರೆ. ಕನ್ಯೆಯಾಗಿದ್ದರೆ, ಅವಳು ಹೆಚ್ಚು ಸಮರ್ಥಳು., ಹೆಚ್ಚು ಫೋಕಸ್ಡ್ ಆಗಿ ಇರ್ತಾಳೆ.. ಹೀಗೆ ಒಂದಷ್ಟು ನಂಬಿಕೆಗಳು ಅಪನಂಬಿಕೆಗಳು ಕಾಲಕಾಲದಿಂದ ವಿಶ್ವದೆಲ್ಲಡೆ ಇತ್ತು. ಹೆಣ್ಣಿನಲ್ಲಿರುವ ಕನ್ಯತ್ವ ಅನ್ನೋದು ಹೈಮನ್ ಎನ್ನುವ ಒಂದು ಪೊರೆ ಅಷ್ಟೆ. ಅದು ಬ್ರೇಕ್ ಆಗೋದು ಮಿಲನ ಕ್ರಿಯೆಯಿಂದ ಮಾತ್ರವಲ್ಲ. ಬೇರೆ ಬೇರೆ ಚಟುವಟಿಕೆಯಿಂದಲೂ ಸುಲಭವಾಗಿ ಅದು ಹೆಣ್ಣಿನ ದೇಹದಿಂದ ಹೊರ ಹೋಗಬಹುದು. ಆದರೆ ಆ ಒಂದು ಹನಿ ರಕ್ತದಲ್ಲಿ ಅವಳ ಶೀಲಕ್ಕೆ ಸರ್ಟಿಫಿಕೇಟ್ ನೀಡಲಾಗುತ್ತದೆ. ಈಕೆ ಕನ್ಯೇಯೇ ಅಲ್ಲ ಅನ್ನೋ ರೀತಿ ವಿಂಗಡಿಸಿ ಬಿಡ್ತಾರೆ. ಇದೇ ತತ್ವವನ್ನು ಈ 21 ನೇ ಶತಮಾನದಲ್ಲೂ ಇಂಡೋನೇಷಿಯಾದಲ್ಲಿ ಹೆಚ್ಚು ಮಹತ್ವ ನೀಡಿ ಪಾಲಿಸಲಾಗುತ್ತಿತ್ತು.

blank

ಹುಡುಗಿಯರು ಆರ್ಮಿ ಸೇರಬೇಕೆಂದರ ಈ ಪರೀಕ್ಷೆ ಕಡ್ಡಾಯ
ಅವಮಾನ ಸಹಿಸಲಾಗದೆ ಅದೆಷ್ಟೊ ಮಹಿಳೆಯರು ಸೇನೆಯಿಂದ ದೂರ

ಈ ರಾಷ್ಟ್ರ ನೋಡಲು ಆಧುನಿಕತೆಯನ್ನು ಅಪ್ಪಿಕೊಂಡಿರುವ ರಾಷ್ಟ್ರದಂತೆ ಕಾಣುತ್ತೆ. ಅಲ್ಲಿನ ಜನರು ವ್ಯಾವಹಾರಿಕವಾಗಲೀ., ಬುದ್ಧಿವಂತಿಕೆಯಲ್ಲಾಗಲಿ ಯಾರಿಗೂ ಕಡಿಮೆ ಇಲ್ಲದವರಂತೆ ವರ್ತಿಸುತ್ತಾರೆ. ಆದ್ರೆ ಈ ಜನಗಳಿಗೆ ಇಲ್ಲಿಯವರೆಗೂ ಹೆಣ್ಣು, ಕನ್ಯತ್ವ ಅನ್ನೋ ವಿಚಾರದಲ್ಲಿ ಅದೆಷ್ಟು ಹಿಂದುಳಿದಿದ್ದಾರೊ ಅನ್ನುವ ರೀತಿ ಅವರ ನಿರ್ಧಾರಗಳು, ಹಾಗೂ ನಿರ್ಭಂದಗಳು ಕಾಣಿಸುತ್ತಿತ್ತು. ಕಾರಣ ಅಲ್ಲಿನ ಯುವತಿಯರು ಆರ್ಮಿ ಸೇರಲು ಕನ್ಯತ್ವದ ಪರಿಕ್ಷೆಯಲ್ಲಿ ಪಾಸ್ ಆಗಲೇ ಬೇಕಿತ್ತು.

ಒಂದು ವೇಳೆ ಆ ಪರಿಕ್ಷೆಯನ್ನು ಕ್ಲಿಯರ್ ಮಾಡದಿದ್ದರೆ., ಸೇನೆಯಲ್ಲಿ ಆಕೆಗೆ ಜಾಗವೇ ಇರಲಿಲ್ಲ. ಇಷ್ಟೆ ಅಲ್ಲ, ಪರಿಕ್ಷೆಗೆ ಒಳಗಾಗಿ, ಅದರಲ್ಲಿ ಪಾಸ್ ಆಗದೆ ಹೊರ ನಡೆದರೆ, ಕುಹಕದಿಂದ ನಗುವವರು ಅದೆಷ್ಟೊ ಜನರಿದ್ದರು. ಇದರಿಂದ ಆ ಹೆಣ್ಣಿನ ಪರಿಸ್ಥಿತಿ ಹೇಗಾಗಿರಬಹುದು ಯೋಚಿಸಿ ನೋಡಿ. ಈ ಕಾರಣದಿಂದ ಮಹಿಳೆಯರು ಸೇನೆಗೆ ಕಡೆ ಹೆಚ್ಚು ತಲೆ ಹಾಕುತ್ತಲೆ ಇರಲಿಲ್ಲ,.

ಪುರುಷರಿಗಿಲ್ಲದ ಪರೀಕ್ಷೆ ಮಹಿಳೆಯರಿಗೆ ಯಾಕೆ ?

ಹೌದು, ಇದು ಇಂಡೋನೇಷಿಯಾದಲ್ಲಿ ನಡೆಯುತ್ತಿದ್ದ ಈ ಹೀನ ಟೆಸ್ಟ್ ಗಳನ್ನು ಪ್ರಶ್ನಿಸಿ ಮಾನವ ಹಕ್ಕುಗಳ ಸಂಸ್ಥೆ ಕೇಳುತ್ತಿದ್ದದ್ದು. ಮಹಿಳೆಯರ ವರ್ಜಿನಿಟಿ., ಅಂದ್ರೆ ಕನ್ಯತ್ವ ಪರಿಕ್ಷೆಯನ್ನು ನಡೆಸುವುದನ್ನು ವಿರೋಧಿಸಿ ವಿಶ್ವಾದ್ಯಂತ ಪ್ರಶ್ನೆಗಳು ಕೇಳಿಸುತ್ತಿದ್ದವು. ಎಲ್ಲ ರೀತಿಯ ಫಿಟ್ ನೆಸ್ ಪರೀಕ್ಷೆಯನ್ನು ಪಾಸ್ ಮಾಡಿದ ಮಹಿಳೆಯರು ಕೊನೆಯಲ್ಲಿ 2 ಫಿಂಗರ್ ಟೆಸ್ಟ್ ಎನ್ನುವ 3 ನಿಮಿಷಗಳ ಪರೀಕ್ಷೆಗೆ ಭಾಗಿಯಾಗಲೇ ಬೇಕಿತ್ತು. ಆರ್ಮಿ ವೈದ್ಯರು ಈಕೆಯನ್ನು.. ಸೇನೆಗೆ ಸೇರಲು ಆ ಮಹಿಳೆ ಫಿಟ್ ಇದ್ದಾಳೊ ಇಲ್ಲವೋ ಅನ್ನುವುದರ ಜೊತೆಗೆ ಈಕೆ ಕನ್ಯೆನಾ ಅಥವಾ ಅಲ್ಲವಾ ಎನ್ನುವ ಸರ್ಟಿಫಿಕೇಟ್ ಅನ್ನು ಸಹ ನೀಡುತ್ತಿದ್ದರು. ಆದರೆ ಪುರುಷರು ಈ ಒಂದು ಪರೀಕ್ಷೆ ಇಲ್ಲದೆ ಪಾಸ್ ಆಗಿ ಬಿಡ್ತಾರೆ., ಈ ಒಂದು ವಿಷಯಕ್ಕೆ ಯಾಕೆ ಅಂತರ ಎನ್ನುವ ರೀತಿಯಲ್ಲಿ ಪ್ರಶ್ನೆಗಳು ವಿಶ್ವಾದ್ಯಂತ ಕೇಳಿ ಬರ್ತಾ ಇತ್ತು.

ದೇಶ ಕಾಯಲು ಕನ್ಯತ್ವದ ವರದಿಯ ಅವಶ್ಯಕತೆ ಏನು ?
ಮಿಲಿಟರಿ ಮಾತ್ರವಲ್ಲದೆ ಪೊಲೀಸ್ ಆಗಲು ಇದು ಅಗತ್ಯ

ಸೇನೆಗೆ ಸೇರುವುದು ಅಂದರೆ, ದೇಶದ ಕಟ್ಟಾಳಾಗಿ ದುಡಿಯುವ ಸಾಮರ್ಥ್ಯ ಇರುವುದನ್ನು ಪರೀಕ್ಷಿಸುವುದು ಸಾಮಾನ್ಯ. ಅದರ ಅಗತ್ಯವೂ ಇದೆ. ಬಿಸಿಲಿನಲ್ಲಿ, ಶಿಸ್ತಿನ ಉಡುಪು ಧರಿಸಿ, ಭಾರವಾದ ವೆಪನ್ಸ್ ಹಿಡಿದು, ಗಡಿ ಕಾಯಬೇಕೆಂದರೆ ದೇಹದ ಶಕ್ತಿ ಹಾಗೂ ಸಾಮರ್ಥ್ಯವನ್ನು ಪರೀಕ್ಷಿಸುವುದು ಬಹಳ ಮುಖ್ಯವಾಗಿರುತ್ತದೆ. ಯಾವುದೆ ಕಾರಣಕ್ಕೂ ಕನ್ಯತ್ವದ ಪೊರೆಯಾದ ಹೈಮನ್ ಇದಕ್ಕೆ ಸಹಾಯಕವಾಗಿರುವುದಿಲ್ಲ. ಇದರಿಂದ ಆಕೆಯ ಮನಸ್ಥಿತಿಯಲ್ಲಾಗಲಿ, ಅಥವಾ ದೈಹಿಕ ಶಕ್ತಿಯಲ್ಲಾಗಲಿ ಯಾವುದೆ ಬದಲಾವಣೆಗಳು ಇರುವುದಿಲ್ಲ. ಇದರಿಂದ ದೇಶ ಕಾಯಲು ಕನ್ಯತ್ವದ ಸರ್ಟಿಫಿಕೇಟ್ ಅವಶ್ಯಕತೆ ಏನು, ಅನ್ನೋದು ಎಲ್ಲೆಡೆ ಕೇಳಿ ಬರುತ್ತಿದ್ದ ಪ್ರಶ್ನಿ. ಇಂಡೋನೇಷಿಯಾದಲ್ಲಿ ಕೇವಲ ಮಿಲಿಟರಿ ಸೇರಲು ಅಲ್ಲ, ಅಲ್ಲಿನ ಪೊಲೀಸ್ ಪಡೆಯನ್ನು ಸೇರಲು ಈ ಪರೀಕ್ಷೆಗೆ ಒಳಗಾಗ ಬೇಕು ಅನ್ನೋದು ಒಂದು ನಿರ್ಭಂದವಾಗಿತ್ತು.

blank

ವಿಶ್ವದ ಹಲವು ಮಹಿಳೆಯರು, ಹಾಗೂ ಮಾನವ ಹಕ್ಕು ಹೋರಾಟಗಾರರ ಪ್ರಶ್ನೆಗಳನ್ನು ಆಲಿಸಿದ ಸರ್ಕಾರ ಈ ಪದ್ಧತಿಯಿಂದ ಹಿಂದೆ ಸರಿದಿದೆ. ಇದರಿಂದಾಗಿ ಇದುವರೆಗೂ ಎತ್ತಿದ್ದ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದಂತಾಗಿದೆ. ಆದರೆ ಯಾವಾಗ ? 21ನೇ ಶತಮಾನದಲ್ಲಿದ್ದು, ಈ ಮನಸ್ಥಿತಿಗೆ ಇನ್ನು ಅಲ್ಲಿ ಬೆಂಬಲವಿತ್ತು ಅಂದರೆ ಅವರ ಯೋಚನೆಗಳು ಎಲ್ಲಿದೆ ಅನ್ನೋದರ ಬಗ್ಗೆ ಬೇಸರವಾಗುತ್ತದೆ. ಈ ಹಿಂದೆ, 2015ರಲ್ಲಿ ಆರ್ಮಿ ಚೀಫ್ ಗೆ ಕನ್ಯತ್ವ ಪರಿಕ್ಷೆಯ ಬಗ್ಗೆ ಅನಿಸಿಕೆ ಕೇಳಿದಾಗ.. ಅವರ ಉತ್ತರ ಹೀಗಿತ್ತು..

ಈ ಪದ್ಧತಿಯನ್ನು, ಪರೀಕ್ಷೆಯನ್ನು ಅನುಸರಿಸದಿದ್ದರೆ, ಕೆಟ್ಟ ಹವ್ಯಾಸವಿರುವ ಒಬ್ಬರನ್ನು ಮಿಲಿಟರಿಯ ಮುಖ್ಯಸ್ಥರನ್ನಾಗಿ ಮಾಡಿ ಬಿಟ್ಟ ಹಾಗಾಗುತ್ತದೆ. ಸೈನಿಕರು, ದೇಶದ ಕಾವಲುಗಾರರು. ದೇಶದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುತ್ತಾರೆ. ಅದಕ್ಕಾಗೆ ಈ ಪರೀಕ್ಷೆ ಅಗತ್ಯ.
-ಮೇಜರ್ ಜನರಲ್. ಫೌದ್ ಭಸ್ಯ. ಆರ್ಮಿ ಚೀಫ್ (BBC: 2015)

ಇದು ಅವರ ಮನಸ್ಥಿತಿಯ ಜೊತೆಗೆ ಆ ದೇಶದ ಮನಸ್ಥಿತಿಯನ್ನು ಎತ್ತಿ ಹಿಡಿಯುವು ಹಾಗಿದೆ. ಅವರ ಪ್ರಕಾರ ಹೆಣ್ಣು ಕನ್ಯತ್ವ ಕಳೆದುಕೊಂಡರೇ, ಅವಳು ಕೆಟ್ಟ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದಾಳೆ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಒಂದು ವೇಳೆ ಅದು ಕೆಟ್ಟ ಹವ್ಯಾಸವೇ ಆಗಿದ್ದರೆ, ಅದು ಕೇವಲ ಮಹಿಳೆಯರಿಗೇಕೆ. ಆಕೆಯ ಶೀಲವನ್ನು ಮುಂದಿಟ್ಟುಕೊಂಡು ದೇಶದ ಸಾರ್ವಭೌಮತ್ವದವರೆಗೂ ಮಾತನಾಡುತ್ತಾರೆ.

ಇಲ್ಲಿಂದ ಇಂಡೋನೇಷಿಯಾ ವಿರುದ್ಧ ಹಲವು ಕೂಗು ಕೇಳಿಸ ತೊಡಗಿತು. ಅವರು ಮಾಡುತ್ತಿರುವ ಕೆಲಸವಾಗಲೀ.. ಅವರ ಯೋಚನೆಯಾಗಲೀ.. ತಪ್ಪು ಅನ್ನೋದನ್ನು ಸಾರಿ ಸಾರಿ ಹೇಳ ತೊಡಗಿದರು. ಅಷ್ಟು ಹೋರಾಟಗಳಿಗೆ ಉತ್ತರ ಸಿಗಲು ಇಂಡೋನೇಷಿಯಾಗೆ 6 ವರ್ಷಗಳು ಬೇಕಾಗಿತ್ತು. ಈಗ ಈ ಪರೀಕ್ಷೆ ಅಗತ್ಯವಿಲ್ಲ ಎನ್ನುವಂತ ಹೇಳಿಕೆಗಳನ್ನು ನೀಡುತ್ತಾ ಆ ವಿವಾದದಿಂದ ಹೊರಗುಳಿಯುವ ಪ್ರಯತ್ನ ಮಾಡಿದೆ ಇಂಡೋನೇಷಿಯಾ. ಇಷ್ಟು ವರ್ಷಗಳಾದ ಮೇಲೆ, ಇಂಡೋನೇಷಿಯಾದ ಆರ್ಮಿ ಮುಖ್ಯಸ್ಥ ಇನ್ನೊಂದು ಸಕಾರತ್ಮಕ ಹೇಳಿಕೆಯನ್ನೆ ನೀಡಿದ್ದಾರೆ. ಆದರೆ ಆ ಹೇಳಿಕೆ ಕೂಡ ಹೊಸ ವಿವಾದವನ್ನು ಸೃಷ್ಟಿ ಮಾಡಿದೆ.

ಆ ಒಂದು ವಿಷಯಕ್ಕಾಗಿ, ಇನ್ಮುಂದೆ ಯಾವುದೇ ಪರೀಕ್ಷೆಗಳಿರುವುದಿಲ್ಲ. ಆ ವಿಚಾರ ಸೈನ್ಯಕ್ಕೆ ಸೇರಲು ಅನಾವಶ್ಯಕ. ಇನ್ಮುಂದೆ ಆ ಒಂದು ಪರೀಕ್ಷೆಯನ್ನು ನಾವು ಯುವತಿಯರ ಮೇಲೆ ಪ್ರಯೋಗಿಸುವುದಿಲ್ಲ. ಹುಡುಗರು ಒಳಗಾಗುವ ಎಲ್ಲ ಪರೀಕ್ಷೆಗಳನ್ನು ಮಾತ್ರ ಹುಡಿಗಿಯರಿಗೆ ನೀಡಲಾಗುತ್ತದೆ.
ಜನರಲ್. ಅಂದಿಕ ಪರ್ಕಾಸ, ಆರ್ಮಿ ಚೀಫ್

ಈ ಹೇಳಿಕೆ ಸ್ವಾಗತಾರ್ಹ, ಆದರೆ ಪ್ರಶಂಸಾತ್ಮಕವಾಗಿಲ್ಲ ಅನ್ನುತ್ತಿದ್ದಾರೆ ವಿಶ್ವದ ಮಹಿಳೆಯರು. ಇಲ್ಲಿ ಆರ್ಮಿ ಚೀಫ್ ಕನ್ಯತ್ವ ಎನ್ನುವ ಹೆಸರು ಹೇಳಲು ಯಾಕಿಷ್ಟು ಸಂಕೋಚ ಎನ್ನುವುದರ ಜೊತೆಗೆ, ಇಷ್ಟು ವರ್ಷ ಈ ಪುರಾತನ ಪದ್ಧತಿಯಿಂದ ಅದೆಷ್ಟೊ ಮಹಿಳೆಯರು ಅನುಭವಿಸಿದ ನೋವಿಗೆ , ನಿಮ್ಮಿಂದ ಕ್ಷಮೆ ಕೇಳುವ ಮನಸ್ಥಿತಿಯಲ್ಲಿಲ್ಲ.. ಕೇವಲ ಒತ್ತಡಕ್ಕೆ ಮಣಿದು ಈ ನಿರ್ಧಾರ ತೆಗೆದುಕೊಂಡಿದ್ದಿರ. ಇನ್ನು ನಿಮ್ಮ ಮನಸ್ಥಿತಿ ಬದಲಾಗಿಲ್ಲ. ಎಂದು ಎಲ್ಲೆಲ್ಲೂ ಹೊಸ ವಿವಾದದ ಮಾತುಕತೆಗಳು ಕೇಳಿ ಬರ್ತಾ ಇದೆ.

ಒಟ್ಟಿನಲ್ಲಿ ಇಂಡೋನೇಷಿಯಾ.. ತನ್ನ ಸಾಮರ್ಥ್ಯವನ್ನು., ತನ್ನ ದೇಶದ ಬೆಳವಣೆಗೆಯನ್ನು ಹಾಗೂ ಅಲ್ಲಿರುವ ಜನರ ಮನಸ್ಥಿತಿಯನ್ನು ಒಂದೊಂದೆ ಬಿಚ್ಚಿ ಜಗತ್ತಿನ ಮುಂದೆ ಇಡ್ತಾ ಇದೆ. ಈಗಲಾದರೂ ಈ ಒಂದು ಹೀನ ಪರೀಕ್ಷೆಯಿಂದ ಇಂಡೋನೇಷಿಯಾದ ಮಹಿಳೆಯರು ದೂರ ಉಳಿದರು ಎನ್ನುವ ಸಮಾಧಾನವಷ್ಟೆ. ಆದರೆ ಈಗಲೂ ಅಲ್ಲಿನ ಹಿರಿಯರಾಗಲಿ, ನಾಗರೀಕರಾಗಲಿ.. ಪುರಾತನ ಕಾಲದ ಕೆಲವು ಅರ್ಥವಿಲ್ಲದ ಆಚರಣೆಗೆ ಸಿಕ್ಕಿ ಬಿದ್ದಿದ್ದಾರೆ. ಅವುಗಳೂ ಕೂಡ ಸುಧಾರಣೆ ಕಾಣಬೇಕಿವೆ.

ಹೆಣ್ಣಿನ ಕನ್ಯತ್ವದ ಪ್ರಶ್ನೆ, ದೇಶ ಕಾಯುವ ಕೆಲಸಕ್ಕೆ ಮಾತ್ರವಲ್ಲ. ಯಾವುದೇ ಕೆಲಸವಾಗಲಿ ಈ ಒಂದು ಮಾತು ಕೇಳಿ ಬರ ಬಾರದು. ಕನ್ಯತ್ವವೂ ಆಕೆಯ ಹಕ್ಕು. ಇದನ್ನು ಪ್ರಶ್ನಿಸುವುದಾಗಲಿ, ಕಡೆಗಣಿಸುವುದಾಗಲಿ., ಮಾಡಬಾರದು.

Source: newsfirstlive.com Source link