ವಿಶ್ವಕಪ್ ಬಳಿಕ ರವಿ ಶಾಸ್ತ್ರಿ ವಿದಾಯ? -ಟೀಂ ಇಂಡಿಯಾ ಕೋಚ್​​ ಸ್ಥಾನಕ್ಕೆ 6 ಮಂದಿ ಕ್ಯೂ..!

ವಿಶ್ವಕಪ್ ಬಳಿಕ ರವಿ ಶಾಸ್ತ್ರಿ ವಿದಾಯ? -ಟೀಂ ಇಂಡಿಯಾ ಕೋಚ್​​ ಸ್ಥಾನಕ್ಕೆ 6 ಮಂದಿ ಕ್ಯೂ..!

ಇಷ್ಟು ದಿನ ರವಿಶಾಸ್ತ್ರಿ ಕೋಚ್​ ಸ್ಥಾನ ತೊರೆದ ಬಳಿಕ ಅವರ ಜಾಗಕ್ಕೆ ರಾಹುಲ್​ ದ್ರಾವಿಡ್​​​ ಬರ್ತಾರೆ ಅಂತಾನೇ ಹೇಳಲಾಗಿತ್ತು. ಆದರೀಗ ಟೀಮ್​ ಇಂಡಿಯಾ ಕೋಚ್​​ ಸ್ಥಾನಕ್ಕೆ ದ್ರಾವಿಡ್​ ಸೇರಿ ಬರೋಬ್ಬರಿ 6 ಮಂದಿ ಕ್ಯೂನಲ್ಲಿದ್ದಾರೆ. ಯಾರೆಲ್ಲಾ ಕೋಚ್​ ರೇಸ್​​ನಲ್ಲಿದ್ದಾರೆ.

ಟೀಮ್​ ಇಂಡಿಯಾವನ್ನ ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ ಕೋಚ್​ ಅಂದರೆ ಅದು ರವಿಶಾಸ್ತ್ರಿ. ಇದೀಗ ಶಾಸ್ತ್ರಿ ಸೇವೆ, ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಟಿ20 ವಿಶ್ವಕಪ್​​ ಬಳಿಕ ಟೀಮ್​ ಇಂಡಿಯಾ ಕೋಚ್​ ರವಿಶಾಸ್ತ್ರಿ ವಿದಾಯ ಹೇಳಲಿದ್ದಾರೆ ಎಂಬ ಮಾತಿದೆ. ಹೀಗಾಗಿ ನೂತನ ಕೋಚ್ ಯಾರಾಗಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.

blank

ಇಷ್ಟು ದಿನ.. ರವಿಶಾಸ್ತ್ರಿ ಸ್ಥಾನ ತೊರೆದರೆ ರಾಹುಲ್​ ದ್ರಾವಿಡ್​ ಕೋಚ್​ ಎಂಬ ಮಾತಿತ್ತು. ಈಗ ದ್ರಾವಿಡ್​​ ಮಾತ್ರವಲ್ಲ ಅವರ ಜೊತೆಗೆ ಇನ್ನೂ 5 ಮಂದಿ ಕ್ಯೂನಲ್ಲಿದ್ದಾರೆ. ಶ್ರೀಲಂಕಾದ ಮಹೇಲಾ ಜಯವರ್ಧನೆ, ಭಾರತದ ವಿವಿಎಸ್​ ಲಕ್ಷ್ಮಣ್​, ವಿರೇಂದ್ರ ಸೆಹ್ವಾಗ್​, ನ್ಯೂಜಿಲೆಂಡ್​​ನ ಮೈಕ್​ ಹಸನ್​, ಆಸಿಸ್​​ನ ಟಾಮ್​ ಮೂಡಿ ಈ ಐದು ಮಂದಿ ಕೂಡ ರೇಸ್​​ನಲ್ಲಿದ್ದಾರೆ.

ಶ್ರೀಲಂಕಾದ ನಾಯಕ, ಬ್ಯಾಟ್ಸ್​ಮನ್​ ಆಗಿ ಯಶಸ್ಸು ಕಂಡ ಜಯವರ್ಧನೆ, ಕೋಚ್​ ಆಗಿಯೂ ಸಕ್ಸಸ್​ ಕಂಡಿದ್ದಾರೆ. ಭಾರತದ ಲಕ್ಷ್ಮಣ್​ IPLನ ಸನ್​ರೈಸರ್ಸ್​ ತಂಡದ ಮೆಂಟರ್​ ಆಗಿ ಕೆಲಸ ಮಾಡಿದ್ರೆ, ಟಾಮ್​ ಮೂಡಿ SRHನ ಕೋಚ್​ ಆಗಿಯೇ ಕೆಲಸ ಮಾಡಿದ್ದಾರೆ. ಅವರಲ್ಲಿ ಕೋಚಿಂಗ್​ ಅನುಭವ ಕೂಡ ಎದ್ದು ಕಾಣ್ತಿದೆ. ಇನ್ನು ಈ ಕಳೆದ ಬಾರಿಯೇ ಕೋಚ್​ ಹುದ್ದೆಯ ಟಫ್​ ಕಾಂಪಿಟೇಟರ್​ ಆಗಿದ್ದ ಸೆಹ್ವಾಗ್​ ಕೂಡ ರೇಸ್​ನಲ್ಲಿದ್ದಾರೆ.

blank

ಮೈಕ್ ಹೆಸನ್ ನ್ಯೂಜಿಲೆಂಡ್​​ ತಂಡದ ಅತ್ಯಂತ ಯಶಸ್ವಿ ಕೋಚ್​​. ಇವರು ಕೋಚ್​ ಸ್ಥಾನಕ್ಕೆ ಅದ್ಭುತ ಆಯ್ಕೆ ಎನ್ನಲಾಗ್ತಿದೆ. ಅವರು ಪ್ರಸ್ತುತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಿರ್ದೇಶಕರಾಗಿದ್ದಾರೆ. ಒಟ್ನಲ್ಲಿ ರಾಹುಲ್​ ದ್ರಾವಿಡ್​ ಮುಂದಿನ ಕೋಚ್​ ಎಂದು ಆರಂಭವಾದ ಚರ್ಚೆ ಇದೀಗ ಇದೀಗ 6 ಮಂದಿಯ ನಡುವಿನ ರೇಸ್​ ಆಗಿ ಬದಲಾಗಿದೆ. ಮುಂದಿನ ದಿನದಲ್ಲಿ ಈ ಪಟ್ಟಿ ಇನ್ನಷ್ಟು ಉದ್ದ ಬೆಳೆದರೂ ಅಚ್ಚರಿಯಿಲ್ಲ.

Source: newsfirstlive.com Source link