‘ಈ’ ಮುದ್ದಾದ ಪ್ರಾಣಿ ಕೊಲ್ಲುಲು ಅಮೆರಿಕ ವಾರಂಟ್! ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಜನ.. ಅಷ್ಟಕ್ಕೂ ಆಗಿದ್ದು ಏನು?

‘ಈ’ ಮುದ್ದಾದ ಪ್ರಾಣಿ ಕೊಲ್ಲುಲು ಅಮೆರಿಕ ವಾರಂಟ್! ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಜನ.. ಅಷ್ಟಕ್ಕೂ ಆಗಿದ್ದು ಏನು?

ಆಕೆ ಏನು ತಪ್ಪು ಮಾಡದೇ ಇದ್ದರೂ ಆಕೆಗೆ ಮರಣ ದಂಡನೆ ವಿಧಿಸಲಾಗಿದೆ. ಏನ್ ತಪ್ಪು ಮಾಡದಿದ್ದ ಮೇಲೆ ಆಕೆಗೆ ಯಾಕೆ ಮರಣ ದಂಡನೆ ವಿಧಿಸಲಾಗಿದೆ ಅಂತಾ ನಿಮ್ಮಲ್ಲಿ ಪ್ರಶ್ನೆ ಮೂಡಿರಬಹುದು. ಅದಕ್ಕೊಂದು ಕಾರಣ ಇದೆ. ಏನು ಅಪರಾಧ ಮಾಡದ ಆಕೆಗೆ ವಿಧಿಸಿರೋ ಮರಣ ದಂಡನೆ ವಿರೋಧಿಸಿ ಸದ್ಯ ದೇಶವೇ ತಿರುಗಿ ಬಿದ್ದಿದೆ. ಹಾಗಾದ್ರೆ ಆಕೆ ಯಾರು? ಮರಣ ದಂಡನೆ ವಿಧಿಸಿದ್ದು ಯಾವ ಕಾರಣಕ್ಕೆ? ಆಕೆ ಪರ ಸದ್ಯ ಇಡೀ ದೇಶವೆ ನಿಲ್ಲೋದಕ್ಕೆ ಕರೆ ಕೊಡುತ್ತಿರೋದು ಯಾಕೆ?

ಇಲ್ಲಿನ ಮಂದಿ ಕೈಯಲ್ಲಿ ಪ್ಲಕಾರ್ಡ್ಗಳನ್ನ ಹಿಡಿದುಕೊಂಡು ಸಾಲಾಗಿ ಱಲಿ ಹೋಗ್ತಿದ್ದಾರೆ. ಜೊತೆಗೆ ಜಸ್ಟೀಸ್ ಫಾರ್ ಜೆರೋಮಿನ್ ಅಂತಾ ಬರೆದುಕೊಂಡು ಸ್ಲೋಗನ್ ಹಿಡಿದು ಕೂಗ್ತಿದ್ದಾರೆ. ಇವರೆಲ್ಲ ಹೀಗೆ ಮಾಡ್ತಿರೋದಕ್ಕೆ ಒಂದು ಕಾರಣವಿದೆ. ಅದು ಒಬ್ಬಾಕೆಯ ಪ್ರಾಣವನ್ನ ಉಳಿಸೋ ಸಲುವಾಗಿ.. ಆಕೆ ಯಾರು ಅಂತಾ ನಿಮಗೆ ಕಾತುರ ಇರಬೋದು..

ಹೌದು.. ಮರಣ ದಂಡನೆ ವಿಧಿಸಿರೋದು ಈಕೆಯ ಮೇಲೆ.. ಇದರ ಹೆಸರು ಜೆರೋನಿಮೊ ಎಂದು.. ಇದು ಯಾವ ಪ್ರಾಣ ಅನ್ನೋದು ಹೇಳಬೇಕಿಲ್ಲ. ಅದು ಎಲ್ಲರಿಗೂ ಗೊತ್ತಿರೋ ವಿಚಾರನೇ. ಇದನ್ನ ಆಲ್ಪಕಾ ಎಂದು ಕರೆಯುತ್ತಾರೆ.. ಇದು ಈಕ್ವೆಡರ್ ಮತ್ತು ಪೆರು ದೇಶಗಳಿಂದ ಪೆಟಗೋನಿಯ ಬಯಲುಗಳವರೆಗೆ ಹಬ್ಬಿರುವ ದಕ್ಷಿಣ ಅಮೆರಿಕಾ ಕಾಡಿನಲ್ಲಿ ನೆಲಿಸಿರುವ ಗ್ವಾನಾಕೋ ಎಂಬ ಮೃಗಸಂತತಿಗೆ ಸೇರಿದ ಪ್ರಾಣಿ.. ಇದಕ್ಕೆ ಮತ್ತೊಂದು ಹೆಸರಿನಿಂದಲೂ ಕೂಡ ಕರೆಯುತ್ತಾರೆ. ಅದೇ ಲಾಮ ಪಕೋಸ್..

blank

ತಿಳಿದಿರುವವರು ಹೇಳುವಂತೆ ಇದು ಒಂಟೆಯ ವಂಶಕ್ಕೆ ಸೇರಿದೆ. ನೋಡೋದಕ್ಕೆ ಒಂಟೆ ಜಾತಿಗಳಿಗಿರುವಂತೆಯೇ ನೀಳವಾದ ಕತ್ತಿದೆ. ಆದ್ರೆ ಒಂಟೆಗಳಿಗೆ ಇರುವ ಕುತ್ತಿಗೆಯಂತೆ ಕೊಂಕಾಗಿಲ್ಲ. ಅಲ್ಲದೇ ಡುಬ್ಬವೂ ಇಲ್ಲ. ಇವು ಲಾಮಗಳಿಗಿಂತಲೂ ಸಣ್ಣದಾಗಿರುತ್ತೆ. ನಾವು ಕೂರುವ ಕುರ್ಚಿಗೆ ಕಂಬಳಿ ಹೊದಿಸಿ ಅದಕ್ಕೆ ಒಂಟೆಯಂಥ ಉದ್ದನೆಯ ಕತ್ತನ್ನು ಜೋಡಿಸಿಂದತೆ ಇದರ ಆಕಾರವಿದೆ.. ಇನ್ನು ಏಷ್ಯಾ ಖಂಡದಲ್ಲಿ ಕಂಡು ಬರುವ ಒಂಟೆಗಳು ಹಿಂದಿನಿಂದ ಉಪಯುಕ್ತವಾಗಿರುವಂತೆಯೇ ಬಹು ಪ್ರಾಚೀನ ಕಾಲದಿಂದ ದಕ್ಷಿಣ ಅಮೆರಿಕದ ಜನರಿಗೆ ಆಲ್ಪಾಕಗಳು ಬಹಳ ಉಪಯುಕ್ತವಾಗಿದೆ.

ಈ ಆಲ್ಪಾಕ ಮತ್ಯಾವ ಮೃಗವೂ ಏರಲಾರದ ಎತ್ತರದಲ್ಲಿ ನೂರು ಪೌಂಡುಗಳಿಗೂ ಹೆಚ್ಚಿನ ತೂಕವನ್ನ ಇವು ಹೊರಬಲ್ಲವು. ಇನ್ನು ಇದರ ಹಾಲನ್ನು ಕುಡಿಯಬಹುದು ಅಂತಾರೆ. ಆದರೆ ಹಸುವಿನ ಹಾಲಿನಷ್ಟು ರುಚಿಯಾಗಿರೋದಿಲ್ಲ. ವಿಶೇಷ ಅಂದ್ರೆ ಹೆಣ್ಣು ಅಲ್ಪಾಕಗಳು 11 ತಿಂಗಳಿಗೆ ಗರ್ಭಧರಿಸಿ ಒಂದೇ ಒಂದು ಕರುವಿಗೆ ಜನ್ಮ ನೀಡುತ್ತೆ. ಇನ್ನು ಇದರ ನವಿರಾಗಿಯೂ ಬಲವಾಗಿಯೂ ಇರುವ ಉಣ್ಣೆಗಾಗಿ ಆಲ್ಪಾಕಗಳು ಪ್ರಖ್ಯಾತವನ್ನ ಪಡೆದುಕೊಂಡಿದೆ. ಎಲ್ಲರಿಗೂ ಗೊತ್ತಿರೋ ಹಾಗೆ ಪೆರುವಿಯನ್ ಜನ ಇವುಗಳನ್ನ ಸಹಸ್ರಾರು ವರ್ಷಗಳಿಂದ ತಮಗೇ ಬೇಕಾದ ಹಾಗೆ ಪಳಗಿಸಿಕೊಂಡು ಬರುತ್ತಾ ಸಾಕು ಪ್ರಾಣಿಯನ್ನಾಗಿಸಿಕೊಂಡಿದ್ದಾರೆ.

ಇದರ ಉಣ್ಣೆ ಹೊಳೆಗೆಂಪಿನಿಂದ ಪಕ್ಕಿನವರೆಗೆ, ಬಿಳುಪಿನಿಂದ ಬಲು ಬಗೆಯ ಕಂದು ಬಣ್ಣಗಳವರೆಗೆ ಅನೇಕ ತರದ ಬಣ್ಣಗಳಲ್ಲಿ ದೊರೆಯುತ್ತದೆ. ಇದರ ಉಣ್ಣೆ ತುಂಬ ಉದ್ದವಾಗಿ ಜಡೆಗಟ್ಟಿರುತ್ತದೆ. ಬೊಲಿವಿಯ ಮತ್ತು ದಕ್ಷಿಣ ಪೆರುವಿನ ಪ್ರಸ್ಥಭೂಮಿಗಳಲ್ಲಿ 15 ಸಾವಿರಕ್ಕಿಂದ ಹೆಚ್ಚಿನ ಎತ್ತರ ಪ್ರದೇಶಗಳಲ್ಲಿ ಇವುಗಳನ್ನ ವರ್ಷಾದ್ಯಂತ ದೊಡ್ಡ ದೊಡ್ಡ ದೊಡ್ಡಿಗಳಲ್ಲಿ ಇದನ್ನ ಸಾಕಬಹುದಾಗಿದೆ. ಉಣ್ಣೆಯಿಳಿಸುವ ಕಾಲದಲ್ಲಿ ಪ್ರತಿವರ್ಷವೂ ಇವುಗಳನ್ನು ಹಳ್ಳಿಗಳಿಗೆ ತರತ್ತಾರೆ. ಹೀಗೆ ತಂದು ಉಣ್ಣೆಯನ್ನ ಹೊಡೆಯುತ್ತಾರೆ. ಇದರಲ್ಲಿ ಎರಡು ಬಗೆಯ ಉಣ್ಣೆಯಿದೆ. ಹವಾಸ್ಕ ಅನ್ನುವ ಉದ್ದವಾಗಿರೋ ಹಾಗು ಒರಟಾಗಿರುವ ಉಣ್ಣೆ, ಅದಕ್ಕಿಂತ ನಿವರಾಗಿಯೂ ಸಣ್ಣದಾಗಿಯೂ ಇರುವ ಉಣ್ಣೆಗೆ ಕುಂಬಿ ಎಂದು ಹೆಸರು.

ಈ ಪ್ರಾಣಿಯ ಉಣ್ಣೆಯನ್ನ ಇಂಗ್ಲೆಂಡ್ ದೇಶ 1808 ರಿಂದಲೂ ತರಿಸಿಕೊಂಡು ಅದರಿಂದ ದಾರವನ್ನ ತೆಗೆಯಲು ಪ್ರಾರಂಭಿಸಿ ಈಗಲೂ ದಾರವನ್ನ ಇದರ ಉಣ್ಣೆಯಿಂದ ತೆಗೆಯುವ ಬಿಸಿನೆಸ್ ಮಾಡಿಕೊಂಡಿದ್ದಾರೆ. ಅದರಿಂದ ಹಲವು ತರಹದ ನೂಲನ್ನ ಕೂಡ ತಯಾರಿಸಲಾಗುತ್ತದೆ. ಇದೆಲ್ಲದಕ್ಕಿಂತ ಇದು ನೋಡೋದಕ್ಕೆ ಅಷ್ಟೇ ಕ್ಯೂಟ್ ಕ್ಯೂಟ್ ಆಗಿದೆ. ಇದನ್ನ ನೋಡುತ್ತಿದ್ದರೆ ಎಂಥವರಿಗೂ ಮುದ್ದಾಡಬೇಕು ಅನ್ನಿಸದೇ ಇರೋದಿಲ್ಲ.

blank

ಮತ್ತೆ ಮರಣ ದಂಡನೆ ವಿಚಾರಕ್ಕೆ ಬರೋಣಾ.. ಈ ಜೆರೋನಿಮಾ ಗೆ ಆರು ವರ್ಷ.. ಇದಕ್ಕೆ ಈಗ ಮರಣ ದಂಡನೆ ವಿಧಿಸಿರೋದು.. ಅದಕ್ಕಾಗಿಯೇ ಇಂದು ದಕ್ಷಿಣ ಆಮೇರಿಕಾದಲ್ಲಿ ಇದನ್ನ ಹಿಂಪಡೆಯಬೇಕು ಅಂತಾ ಪಟ್ಟನ್ನ ಹಿಡಿದುಕೊಂಡು ಕೂತಿದ್ದಾರೆ. ಹಾಗಾದ್ರೆ ಜೆರೋನಿಮಾಗೆ ಮರಣ ದಂಡನೆ ವಿಧಿಸಿರೋದು ಯಾಕೆ ಅನ್ನೋದನ್ನ ನೋಡೋದಾದ್ರೆ..

ಜಿರೋನಿಮಾ ಮಾಡಿರೋ ಮಹಾ ಅಪರಾಧವೇನು?

ಈಗ ಎಲ್ಲರಲ್ಲು ಕಾಡುತ್ತಿರೋದು ಒಂದೇ ಪ್ರೆಶ್ನೆ.. ಈ ಮುದ್ದಾದ ಪ್ರಾಣಿಗೆ ಮರಣ ದಂಡನೇ ವಿಧಿಸಿದ್ದು ಯಾಕೆ. ಜೆರೋನಿಮಾ ಅದೆಂಥಾ ಮಹಾಪರಾಧ ಮಾಡಿದೆ ಅಂತಾ ಮರಣ ದಂಡನೆ ವಿಧಿಸಿದ್ದಾರೆ ಅಂತಾ ನಿಮಗೆ ಅನ್ನಿಸುತ್ತಿರಬಹುದು. ಅದಕ್ಕೆಲ್ಲಾ ಉತ್ತರ ಒಂದೆ ಅದೇನು ಅಂದ್ರೆ ಜೆರೋನಿಮಾದಲ್ಲಿ ಕಾಣಿಸಿಕೊಂಡಿದ್ದ ಆ ಒಂದು ಮಾರಕ ರೋಗದಿಂದಾಗಿಯೇ ಮರಣ ದಂಡನೆ ವಿಧಿಸಿದ್ದಾರೆ.

ಜಿರೋನಿಮಾಗೆ ಕಾಣಿಸಿಕೊಂಡಿರೋ ಆ ರೋಗ ಯಾವುದು?

ಜೆರೋನಿಮಾಗೆ ಇತ್ತಿಚಿನ ಕೆಲ ದಿನಗಳ ಹಿಂದೆ ಒಂದು ಮಾರಕ ರೋಗ ಕಾಣಿಸಿಕೊಂಡಿತ್ತು. ಅದೇ ಹಸುವಿನಲ್ಲಿ ಕಾಣಿಸಿಕೊಳ್ಳುವ ಕ್ಷಯರೋಗ. ಈ ರೋಗ ಕಾಣಿಸಿಕೊಂಡಾಗ ಬ್ರಿಟನ್ ಕಂಟ್ರಿಸೈಡ್ನಲ್ಲಿ ಪ್ರಾಣಿಗಳ ಉಸಿರಾಟದ ಸಮಸ್ಯೆ ಮಾರಕವಾಗಿರುತ್ತೆ. ಅದೇ ರೀತಿ ಪ್ರಾಣಿಗಳ ಜೀವನಕ್ಕೆ ಕುತ್ತ ತರುವ ಬಿಟಿಬಿ ಸಮಸ್ಯಯಿಂದ ಜೆರೊನಿಮಾ ಬಳಲುತ್ತಿದೆ. ಇದೇ ಕಾರಣಕ್ಕೆ ಇದಕ್ಕೆ ಮರಣ ದಂಡನೆಯನ್ನ ವಿಧಿಸಿಲಾಗಿದೆ.

ಕ್ಷಯ ರೋಗಕ್ಕೂ ಮರಣ ದಂಡನೆಗೂ ಏನ್ ಸಂಬಂಧ

ಇಲ್ಲೇ ಇರೋದು ನೋಡಿ ಅಸಲಿ ವಿಚಾರ.. ನಿಮಗೆ ಅನ್ನಿಸುತ್ತಿರಬೋದು.. ಜೆರೋನಿಮಾಗೆ ಕ್ಷಯರೋಗ ಬರೋದಕ್ಕು ಅದೇ ಕಾರಣ ನೀಡಿ ಮರಣ ದಂಡನೇ ವಿಧಿಸೋದಕ್ಕು ಏನ್ ಕಾರಣ ಅಂತಾ.. ಅದಕ್ಕೆ ಒಂದು ಕಾರಣ ಇದೆ.. ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ, ಅದಕ್ಕೆ ಕುತ್ತು ತರುವಂತಹ ಬಿಟಿಬಿ ಸಮಸ್ಯೆ ಮತ್ತಷ್ಟು ಪ್ರಾಣಿ ಸಂಕುಲಕ್ಕೆ ಕಾಡುವ ಆತಂಕ ಇರುತ್ತದೆ. ಅದೇ ರೀತಿ ಜೆರೋನಿಮಾಗೆ ಬಂದಿರೋ ಕ್ಷಯರೋಗದಿಂದಲೇ ಅದನ್ನ ಕೊಲ್ಲುವಂತೆ ಮಹತ್ವದ ಆದೇಶ ನೀಡಲಾಗಿದೆ.

ಯಾವಾಗ ಜಿರೋನಿಮಾಗೆ ಕೊಲ್ಲಬೇಕು ಎಂದು ಆದೇಶ ಹೊರಬಿತ್ತೋ ಆಗಿನಿಂದಲೇ ಜೆರೋನಿಮಾ ಮಾಲಿಕ ಹೆಲೆನ್ ಮ್ಯಾಕ್ ಡೋನಾಲ್ಡ್ ತೀರ್ವವಾಗಿ ಅದನ್ನ ಖಂಡಿಸೋಕೆ ಶುರು ಮಾಡಿಕೊಂಡಿದ್ದರು. ಆರಂಭದಲ್ಲಿ ಹೆಲೆನ್ ಏಕಾಂಗಿಯಾಗಿ ಹೋರಾಟವನ್ನ ನಡೆಸೋದು ಶುರು ಮಾಡಿಕೊಂಡಿದ್ದರು. ಆದ್ರೆ ಇವತ್ತು ಅವರ ಬೆನ್ನಿಗೆ ದೇಶವೆ ನಿಲ್ಲುವಂತ ಪರಿಸ್ಥಿತಿ ನಿರ್ಮಾಣ ಆಗಿದೆ.

blank

ಹೆಲೆನ್ ಮ್ಯಾಕ್ಡೋನಾಲ್ಡ್ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಆಲ್ಪಲಾ ಪ್ರಾಣಿ ಸಂಕುಲ ಸಾಕುದಾರರು ಸಾತ್ ಕೊಟ್ಟಿದ್ದು, ಅವರು ಪ್ರತಿಭಟನೆಗೆ ಮುಂದಾಗಿದ್ದಾರೆ. ಅವರ ಜೊತೆಯಲ್ಲಿ ದೇಶದ ಬಹುತೇಕ ಮಂದಿ ಹಾಗು ಪ್ರಾಣಿಪ್ರಿಯರು ಕೂಡ ಪ್ರತಿಭಟನೆ ನಡೆಸೋದಕ್ಕೆ ಮುಂದಾಗಿದ್ದಾರೆ.

24 ಗಂಟೆಯಲ್ಲಿ ಕೊಲ್ಲುವಂತೆ ವಾರೆಂಟ್ ಜಾರಿ

ಇನ್ನು ಈಗಾಗಲೇ ಜೆರೋನಿಮಾಗೆ ಸಂಪೂರ್ಣವಾಗಿ ಈಗಾಗಲೇ ಗುಣಮುಖವಾಗಿದ್ದು ಆಕೆಯ ಆರೋಗ್ಯವನ್ನ ಕಾಪಾಡಲಾಗಿದೆ, ಅಲ್ಲದೇ ಆಕೆಯಲ್ಲಿ ಪತ್ತೆಯಾಗಿರೋ ಕ್ಷಯ ರೋಗದ ವರದಿ ದೋಷಪೂರಿತವಾಗಿದೆ ಎಂದು ಆಕೆಯ ಮಾಲಿಕ ಹೆಲೆನ್ ವಾದವನ್ನ ಮಾಡುತ್ತಿದ್ದಾರೆ. ಆದ್ರೆ ಬ್ರಿಟನ್ ಅಧಿಕಾರಿಗಳು ಮಾತ್ರ ಮುಂದಿನ 24 ಗಂಟೆಗಳಲ್ಲಿ ಜೆರೋನಿಮಾನನ್ನು ಕೊಲ್ಲುವಂತೆ ವಾರೆಂಟ್ ಜಾರಿ ಮಾಡಿದ್ದಾರೆ ಎಂದು ಮಾಲೀಕ ಹೆಲೆನ್ ಮ್ಯಾಕ್ಡೊನಾಲ್ಡ್ ಹೇಳಿದ್ದಾರೆ.

10 ಸಾವಿರಕ್ಕೂ ಹೆಚ್ಚು ಪಿಟಿಷನ್ಗೆ ಸಹಿ ಹಾಕಿದ ಮಂದಿ

ಜೆರೋನಿಮೋನನ್ನ ರಕ್ಷಿಸುವ ಪಣ ತೊಟ್ಟಿರುವ ಸಾಕುದಾರರು, ಮತ್ತು ಪ್ರಾಣಿ ಪ್ರೀಯರು ಈಗಾಗಲೇ ಪಿಟಿಷನ್ಗೆ ಸಹಿ ಯನ್ನ ಮಾಡಿದ್ದಾರೆ. ಅದು ಬರೋಬ್ಬರಿ 10 ಸಾವಿರಕ್ಕು ಹೆಚ್ಚು ಮಂದಿ ಪಿಟಿಷನ್ಗೆ ಸಹಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಆ ಮೂಲಕ ಒಂಟೆ ತಳಿಯ ಈ ಪ್ರಾಣಿಯ ಉಳಿವಿಗೆ ಕೈ ಜೋಡಿಸಿದ್ದಾರೆ. ಅಷ್ಟೇ ಅಲ್ಲದೇ ಜೆರೋನಿಮೊ ಉಳಿವಿಗಾಗಿ ಅನೇಕರು ತಮ್ಮ ಆಲ್ಪಕಾ ಉಳಿವಿಗಾಗಿ ತಮ್ಮ ಹೋರಾಟದಲ್ಲಿ ಭಾಗಿಯಾಗುತ್ತಿದ್ದಾರೆ.

ಆ ಮೂಲಕ ಆಲ್ಪಾಕ ಪ್ರಾಣಿಯನ್ನು ಕೂಡ ಪ್ರತಿಭಟನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಜನರ ನಡುವೆ ಈ ಆಲ್ಪಕಾ ಪ್ರಾಣಿಗಳನ್ನ ನಿಲ್ಲಿಸಿಕೊಂಡು ವೆಸ್ಟ್ ಮಿನಿಸ್ಟರ್ನ ಡೆಫ್ರಾ ಪ್ರಧಾನ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಯಾಕೆ ಹೀಗೆ ಮಾಡಿದ್ದಾರೆ ಅನ್ನೋದಕ್ಕೆ ಒಂದು ಕಾರಣವಿದೆ. ಅದು ಜನರ ಮಧ್ಯೆ ಯಾವುದೇ ಅಂಜಿಕೆ ಇಲ್ಲದಂತೆ ಪ್ರತಿಭಟನೆಯಲ್ಲಿ ಕೈಗೊಳ್ಳಲು ಇದಕ್ಕೆ ತರಬೇತಿಯನ್ನು ನೀಡಲಾಗಿದೆ. ಈ ಪ್ರತಿಭಟನೆ ಡೌನಿಂಗ್ ಸ್ಟ್ರಿಟ್ ಗೇಟ್ಗಳಿಂದ ಬ್ರಾಡ್ ಕಾಸ್ಟರ್ವರೆಗೂ ಮುಂದುವರೆಯುತ್ತಿದೆ.

ಬ್ರೀಟನ್ ಯಾಕೆ ಇಂಥಾ ದೃಢ ನಿರ್ಧಾರವನ್ನ ತೆಗೆದುಕೊಂಡಿದೆ ಅಂತಾ ನೋಡೋದಾದ್ರೆ ಅದಕ್ಕೊಂದು ಕಾರಣವಿದೆ. ಅದು ಜಾನುವಾರುಗಳಲ್ಲಿ ಮಾರಕ ರೋಗಗಳು ಕಂಡು ಬಂದರೆ ಅವುಗಳನ್ನ ಆ ಪ್ರಾಣಿಗಳ ಹಿಂಡಿನಿಂದ ತೆಗೆದು ಹಾಕೋ ಮೂಲಕ ಉಳಿದ ಪ್ರಾಣಿಗಳ ರಕ್ಷಣೆಯ ಪದ್ದತಿಯನ್ನು ಈ ಹಿಂದಿನಿಂದಲೂ ರೂಢಿ ಮಾಡಿಕೊಂಡು ಬರಲಾಗಿದೆ. ಇದೇ ಕಾರಣಕ್ಕಾಗಿ ಹೀಗೆ ದೃಢ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ ಅಂತಾ ಹೇಳಲಾಗುತ್ತಿದೆ.

ಇನ್ನು ಇದರ ಮಾಲಿಕ ಹೆಲೆನ್ ಹೇಳುವಂತೆ, ಜೆರೋನಿಮಾ ನೋಡೋದಕ್ಕೆ ತುಂಬಾ ದಪ್ಪಾಗಿದ್ದಾಳೆ, ಮತ್ತು ಆರೋಗ್ಯವಾಗಿದ್ದಾಳೆ, ಅದರ ಜೊತೆಗೆ ಉತ್ತಮವಾದ ಉಣ್ಣೆ ಹೊಂದಿದ್ದಾಳೆ. ಇದೆಲ್ಲವನ್ನು ನೋಡುತ್ತಿದ್ದರೆ ಆಕೆ ಸೋಂಕಿಗೆ ಗುರಿಯಾಗಿದ್ದಾರೆ, ಇಷ್ಟು ಚೆನ್ನಾಗಿ ಇರಲು ಸಾಧ್ಯ ಇಲ್ಲ ಎಂದು ವಾದಿಸಿದ್ದಾರೆ. ಇದೇ ಹಿನ್ನಲೆ ಜಿರೋನಿಮಾಳಿಗೆ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸುವಂತೆ ಬ್ರಿನಟ್ ಪ್ರಧಾನ ಮಂತ್ರಿ ತಂದೆ ಸ್ಟನ್ಲಿ ಜಾನ್ಸನ್ ಕೂಡ ಪತ್ರದ ಮೂಲಕ ಮನವಿಯನ್ನ ಮಾಡಿಕೊಂಡಿದ್ದಾರೆ.

blank

ಒಟ್ಟಿನಲ್ಲಿ ಒಂದು ಕಡೆ ಎಲ್ಲರು ಕಾನೂನನ್ನ ಪಾಲನೆ ಮಾಡಲೇಬೇಕಾದ ಪರಿಸ್ಥಿತಿ ಮತ್ತೊಂದು ಕಡೆ ಪ್ರಾಣಿ ಮೇಲಿನ ಪ್ರೇಮ.. ಇದೆರಡರ ಮಧ್ಯೆ ಉಳಿದ 24 ಗಂಟೆಯಲ್ಲಿ ಅದನ್ನ ಕೊಲ್ಲುತ್ತಾರೆಯೇ ಅಥವಾ ಹಾಗೆ ಬಿಟ್ಟು ಬಿಡುತ್ತಾರೆಯೆ ಅನ್ನೋ ಕುತೂಹಲ ಎಲ್ಲರಲ್ಲಿ ಕಾಡುತ್ತಿದೆ. ಆದ್ರೆ ಮುಂದೆ ಏನಾಗುತ್ತೋ ಗೊತ್ತಿಲ್ಲ.. ಇವತ್ತು ಜಗತ್ತಿನಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ ಬಹಳ ಮುಂದೆ ಇರೋ ನಾವು ಈ ಪ್ರಾಣಿ ಉಳಿಯುವತೆ ಏನಾದ್ರು ಮಾಡಲಿ ಅನ್ನೋದೇ ಎಲ್ಲರ ಆಶಯ.. ಆಕೆಯನ್ನ ಕೊಲ್ಲದೇ ಬೇರೆ ಏನಾದ್ರು ಪರ್ಯಾಯ ಮಾರ್ಗ ಹುಡಕಬೇಕು, ಆ ಮೂಲಕ ಈ ಮುದ್ದಾದ ಜೆರೋನಿಮಾ ಬದುಕಬೇಕು ಅನ್ನೋದು ನಮ್ಮ ಆಶಯ ಕೂಡ..

Source: newsfirstlive.com Source link