ಕಮ್​​ಬ್ಯಾಕ್​ಗೆ ಮುಂಬೈಕರ್ ಸಜ್ಜು​! ಶ್ರೇಯಸ್ ಎದುರಿಗಿದೆ ಬೆಟ್ಟದಷ್ಟು ಸವಾಲು

ಕಮ್​​ಬ್ಯಾಕ್​ಗೆ ಮುಂಬೈಕರ್ ಸಜ್ಜು​! ಶ್ರೇಯಸ್ ಎದುರಿಗಿದೆ ಬೆಟ್ಟದಷ್ಟು ಸವಾಲು

ಇಂಜುರಿಗೆ ತುತ್ತಾಗಿದ್ದ ಶ್ರೇಯಸ್ ಅಯ್ಯರ್ ಕಂಪ್ಲೀಟ್​ ಫಿಟ್ ಆಗಿದ್ದು​ ಅಂಗಳದಲ್ಲಿ ಬ್ಯಾಟ್ ಬೀಸಲು ಎನ್​ಸಿಎ ಗ್ರೀನ್ ಸಿಗ್ನಲ್​ ಕೊಟ್ಟಿದೆ. ಇದು ಟೀಮ್ ಇಂಡಿಯಾ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ಗೆ ಗುಡ್​ನ್ಯೂಸ್​ ಆಗಿದೆ. ಆದ್ರೆ, ಇದರ ಜೊತೆಗೆ ಮ್ಯಾನೇಜ್​ಮೆಂಟ್​ಗಳಿಗೆ ಹೊಸ ಪೀಕಲಾಟ ಶುರುವಾಗಿದೆ.

ಭುಜದ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಶ್ರೇಯಸ್​ ಅಯ್ಯರ್ ಫಿಟ್ ಆಗಿದ್ದಾರೆ. 4 ತಿಂಗಳಿಂದ ಕ್ರಿಕೆಟ್​ನಿಂದ ದೂರವಾಗಿದ್ದ ಶ್ರೇಯಸ್​ಗೆ ಎನ್​ಸಿಎ ರನ್​​​ಭೂಮಿಗಳಿಯಲು ಗ್ರೀನ್ ಸಿಗ್ನಲ್ ನೀಡಿದೆ. ಇದರ ಬೆನ್ನಲ್ಲೇ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಗ್ರ್ಯಾಂಡ್ ಎಂಟ್ರಿ ನೀಡಲು ಮುಂಬೈಕರ್ ರೆಡಿಯಾಗಿದ್ದು, ಐಪಿಎಲ್​ ಸೆಕೆಂಡ್ ಫೇಸ್​ನಲ್ಲಿ ಶ್ರೇಯಸ್​ ಕಣಕ್ಕಿಳಿಯೋದು ಬಹುತೇಕ ಕನ್ಫರ್ಮ್ ಆಗಿದೆ. ಇದು ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್​​ಗೆ ಮತ್ತಷ್ಟು ಬಲ ತುಂಬೊದ್ರೊಂದಿಗೆ ಹೊಸ ತಲೆನೋವಾಗಿಯೂ ಪರಿಣಮಿಸಿದೆ.

blank

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಇಂಜುರಿಗೆ ತುತ್ತಾಗಿದ್ದ ಶ್ರೇಯಸ್, 14ನೇ ಆವೃತ್ತಿಯ ಐಪಿಎಲ್​ನ ಮೊದಲಾರ್ಧಕ್ಕೆ ಅಲಭ್ಯರಾಗಿದ್ದರು. ಈ ವೇಳೆ ಯುವ ರಿಷಭ್ ಪಂತ್​ಗೆ ಪಟ್ಟ ಕಟ್ಟಿ ಫ್ರಾಂಚೈಸಿ ಯಶಸ್ಸು ಕಂಡಿದೆ. ಇದೀಗ ಶ್ರೇಯಸ್​ ಕಮ್​ಬ್ಯಾಮ್​ ಮಾಡ್ತಿರೋದ್ರಿಂದ ಸೆಕೆಂಡ್​ ಹಾಫ್​ನಲ್ಲಿ ಯಾರಿಗೆ ಸಾರಥ್ಯ ನೀಡಬೇಕು ಅನ್ನೋ ಗೊಂದಲಕ್ಕೆ ಫ್ರಾಂಚೈಸಿ ಸಿಲುಕಿದೆ.

blank

ಶ್ರೇಯಸ್​ ಇಂಜುರಿ ಕಾರಣ ಅನಿವಾರ್ಯವಾಗಿ ಪಂತ್ ನಾಯಕನಾಗಿ ನೇಮಕವಾಗಿದ್ರು. ಸಿಕ್ಕ ಅವಕಾಶವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ ಪಂತ್​, ತಂಡವನ್ನ ಅಂಕಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರಿದ್ದಾರೆ. ಈ ಹಿಂದೆ 13ನೇ ಆವೃತ್ತಿಯಲ್ಲಿ ತಂಡವನ್ನ ಮುನ್ನಡೆಸಿದ್ದ ಶ್ರೇಯಸ್​, ಇತಿಹಾಸದಲ್ಲೇ ಮೊದಲ ಬಾರಿಗೆ ತಂಡವನ್ನ ಫೈನಲ್​ಗೇರಿಸಿದ್ರು. ಹೀಗಾಗಿ ಇಬ್ಬರು ಉತ್ತಮರ ನಡುವೆ ಬೆಸ್ಟ್​ ಆಯ್ಕೆ ಯಾವುದು ಅನ್ನೋದು ತಲೆಬಿಸಿ ಹೆಚ್ಚಿಸಿದೆ.

ಐಪಿಎಲ್​ಗೆ​​​​​​​​ ಶ್ರೇಯಸ್​ ಸಜ್ಜು, ಮಿಷನ್ ಟಿ20 ವಿಶ್ವಕಪ್​..!

ಐಪಿಎಲ್​ ಟೂರ್ನಿಯನ್ನ ಮೇನ್ ಟಾರ್ಗೆಟ್​ ಮಾಡಿರುವ ಶ್ರೇಯಸ್​, ಇಲ್ಲಿ ಅಬ್ಬರಿಸಿ ಟಿ20 ವಿಶ್ವಕಪ್ ಟಿಕೆಟ್ ಗಿಟ್ಟಿಸಿಕೊಳ್ಳೋ ಲೆಕ್ಕಾಚಾರದಲ್ಲಿದ್ದಾರೆ. ಆದ್ರೆ, ಈಗಾಗಲೇ ಶ್ರೇಯಸ್​​ ಸ್ಥಾನದಲ್ಲಿ ತಂಡಕ್ಕೆ ಆಗಮಿಸಿರುವ ಸೂರ್ಯ ಮ್ಯಾಚ್​ ವಿನ್ನಿಂಗ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಹೀಗಾಗಿ ಐಪಿಎಲ್​ ಟೂರ್ನಿ ವಿಶ್ವಕಪ್ ಟಿಕೆಟ್​ಗಾಗಿ​ ಮುಂಬೈಕರ್​ಗಳ ನಡುವಿನ ಫೈಟ್​ಗೆ ವೇದಿಕೆ ಆಗ್ತಿದೆ.. ಟಿಕೆಟ್​ ಬೇಕಂದ್ರೆ ಮಿಂಚಲೇಬೇಕಾದ ಸವಾಲು ಶ್ರೇಯಸ್​ಗೆ ಎದುರಾಗಿದೆ.

 

Source: newsfirstlive.com Source link