ಆಫ್ಘಾನ್​​ನಲ್ಲಿ ಮುಂದುವರಿದ ತಾಲಿಬಾನಿಗಳ ವಿಕೃತಿ; ಕಂದಹಾರ್ ಆಯ್ತು.. ಕಾಬೂಲ್​ ಮೇಲೆ ಕಣ್ಣಿಟ್ಟ ಉಗ್ರರು

ಆಫ್ಘಾನ್​​ನಲ್ಲಿ ಮುಂದುವರಿದ ತಾಲಿಬಾನಿಗಳ ವಿಕೃತಿ; ಕಂದಹಾರ್ ಆಯ್ತು.. ಕಾಬೂಲ್​ ಮೇಲೆ ಕಣ್ಣಿಟ್ಟ ಉಗ್ರರು

ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರ ಪಾರುಪತ್ಯ ಮುಂದುವರೆದಿದೆ. ಅಮೆರಿಕಾ ಸೇನೆ ವಾಪಸ್ಸಾದ ನಂತರ ತಾಲಿಬಾನ್ ಉಗ್ರರು ಬಹುತೇಕ ಅಫ್ಘಾನಿಸ್ತಾನವನ್ನ ಹಾಗೂ ಅಲ್ಲಿನ ಸರ್ಕಾರಿ ಸಂಸ್ಥೆಗಳನ್ನು ವಶಕ್ಕೆ ಪಡೆದುಕೊಂಡ ಬೆನ್ನಲ್ಲೇ, ಅಫ್ಘಾನಿಸ್ತಾನದ 2ನೇ ಅತಿದೊಡ್ಡ ನಗರ ಕಂದಹಾರ್​ನ್ನು ಕೂಡ ವಶಕ್ಕೆ ಪಡೆದು ವಿಕೃತಿ ಮೆರೆದಿದ್ದಾರೆ.

ಅಫ್ಘಾನಿಸ್ತಾನ ಸೈನಿಕರು ಹಾಗೂ ತಾಲಿಬಾನ್ ಉಗ್ರರ ನಡುವೆ ಅಂತರ್ಯುದ್ಧವೇ ಏರ್ಪಟ್ಟಿದ್ದು ನಿತ್ಯವೂ ಸಾವು ನೋವಿನ ಬಗ್ಗೆ ಸಾವಿರಾರು ವರದಿಗಳಾಗುತ್ತಿವೆ. ಕಂದಹಾರ್‌ ವಶಕ್ಕೆ ಪಡೆದಿರೋದಾಗಿ ತಾಲಿಬಾನಿಗಳು ಘೋಷಣೆ ಮಾಡಿದ್ದು, ಅಫ್ಘಾನಿಸ್ತಾನದ ರಾಜಧಾನಿ ಮೇಲೂ ತಾಲಿಬಾನಿ ಉಗ್ರರು ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

blank

ಇದನ್ನೂ ಓದಿ: ತಾಲಿಬಾನಿಗಳ ಅಟ್ಟಹಾಸ; ಭಾರತೀಯರಿಗೆ ತತ್​ಕ್ಷಣವೇ ಅಫ್ಘಾನ್​ ತೊರೆಯುವಂತೆ ರಾಯಭಾರಿ ಕಚೇರಿ ಸೂಚನೆ

ಕಂದಹಾರ್‌ ವಶಪಡೆದಿರೋದಾಗಿ ತಾಲಿಬಾನ್ ಉಗ್ರರ ವಕ್ತಾರ ಟ್ವೀಟ್​ ಮಾಡಿ ಕಂದಹಾರ್​ ನಗರವನ್ನ ಸಂಪೂರ್ಣವಾಗಿ ವಶಕ್ಕೆ ಪಡೆಯಲಾಗಿದೆ. ಉಗ್ರರ ನಡೆ ಮುಜಾಹಿದೀನ್ ನಗರದ ಹುತಾತ್ಮರ ಚೌಕ ತಲುಪಿದೆ ಎಂದು ಟ್ವೀಟ್ ಮಾಡಿದ್ದಾನೆ.

ಈಶಾನ್ಯ ಭಾಗದ ಬದಖ್‌ಷಾನ್‌ ಮತ್ತು ಪಶ್ಚಿಮ ಭಾಗದ ಬಘ್ಲಾನ್‌, ಫರಾಹ್‌ ಪ್ರಾಂತ್ಯದ ರಾಜಧಾನಿಗಳನ್ನ ವಶಪಡಿಸಿಕೊಂಡಿದ್ದ ಉಗ್ರರು ಇದೀಗ ಕಾಬೂಲ್​ ವಶಪಡಿಸಿಕೊಳ್ಳಲೂ ತಾಲಿಬಾನಿ ಉಗ್ರರ ಸಂಚು ರೂಪಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕಾಬೂಲ್‌ ಕೈವಶವಾಗುವ ಸಾಧ್ಯತೆಯಿದೆ ಎಂದು ಅಮೆರಿಕ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮುಂದಿನ 30 ದಿನಗಳಲ್ಲಿ ಕಾಬೂಲ್​ ತಾಲಿಬಾನಿಗಳ ವಶವಾಗುವ ಸಾಧ್ಯತೆಯಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಆಫ್ಘಾನ್​​ನಲ್ಲಿ ತಾಲಿಬಾನಿಗಳ ಹೇಯ ಕೃತ್ಯ; ಟೈಟ್​ ಆಗಿರೋ ಬಟ್ಟೆ ಧರಿಸಿದ್ಕೆ ಯುವತಿಗೆ ಗುಂಡಿಟ್ಟ ಉಗ್ರರು

ಇನ್ನು ತಾಲಿಬಾನಿ ಉಗ್ರರ ಆಟಾಟೋಪದ ಮುಂದೆ ಅಫ್ಘಾನಿಸ್ತಾನ ಸರ್ಕಾರದ ಆಡಳಿತ ಮಂಡಳಿ ಅಹಾಯಕ ಸ್ಥಿತ ತಲುಪಿದಂತಾಗಿದೆ. ಕಾಬೂಲ್​ನಲ್ಲಿ ಅಮೆರಿಕ 3 ಸಾವಿರ ಸಾಮರ್ಥ್ಯದ ಸೇನೆ ನಿಯೋಜನೆಗೆ ತಯಾರಿ ನಡೆಸಿದ್ದು, ಕಾಬೂಲ್​ನಲ್ಲಿ ಸೇನೆ ನಿಯೋಜಿಸುವದಾಗಿ ಅಮೆರಿಕ ಘೋಷಣೆ ಮಾಡಿದೆ. ಮುಂದಿನ 24-48 ಗಂಟೆಯಲ್ಲಿ ಸೇನೆ ನಿಯೋಜನೆ ಮಾಡೋದಾಗಿ ಪೆಂಟಗಾನ್ ಹೇಳಿದೆ.

Source: newsfirstlive.com Source link