ಸುಶಾಂತ್ ಸಾವಿನ ನಂತರ ಫಸ್ಟ್​ ಟೈಂ ಬಿಗ್​ ಸ್ಕ್ರೀನ್​ನಲ್ಲಿ ರಿಯಾ ಚಕ್ರವರ್ತಿ..!

ಸುಶಾಂತ್ ಸಾವಿನ ನಂತರ ಫಸ್ಟ್​ ಟೈಂ ಬಿಗ್​ ಸ್ಕ್ರೀನ್​ನಲ್ಲಿ ರಿಯಾ ಚಕ್ರವರ್ತಿ..!

ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜ​ಪೂತ್​ ಸಾವಿನ ಬಳಿಕ ಸಾಕಷ್ಟು ನೆಗೆಟಿವ್ ವಿಚಾರಗಳಿಂದಲೇ ಸುದ್ದಿಯಾಗಿದ್ದ ಪ್ರೇಯಸಿ ನಟಿ ರಿಯಾ ಚಕ್ರವರ್ತಿ,ಇದೀಗ ಬಿಗ್‌ ಸ್ಕ್ರೀನ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

blank

ರಿಯಾ ಚಕ್ರವರ್ತಿ ನಟಿಸಿರುವ ‘ಚೆಹ್ರೆ’ ಸಿನಿಮಾ ಇದೇ ಆಗಸ್ಟ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ರಿಲೀಸ್​ ಡೇಟ್​ ಅನೌನ್ಸ್​ ಮಾಡಿದೆ. ಇನ್ನು ‘ಚೆಹ್ರೆ’ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಇಮ್ರಾನ್ ಹಶ್ಮಿ ಹಾಗೂ ರಿಯಾ ಚಕ್ರವರ್ತಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇನ್ನು ಈ ಕುರಿತು ರಿಯಾ ಚಕ್ರವರ್ತಿ ತಮ್ಮ ಇನ್​​ಸ್ಟಾಗ್ರಾಮ್​​ ಸ್ಟೋರಿಯಲ್ಲಿ ಚೆಹ್ರೆದ ಚಿತ್ರ ಬಿಡುಗಡೆಯಾಗುತ್ತಿರುವ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ರಿಯಾ ಚಕ್ರವರ್ತಿ ಕಾಣಿಸಿಕೊಂಡಿರುವ ಮೊದಲ ಸಿನಿಮಾ ಇದಾಗಿದೆ ಅನ್ನೋದು ವಿಶೇಷ. ಕೊನೆಯದಾಗಿ 2018ರಲ್ಲಿ ‘ಜಲೇಬಿ’ ಸಿನಿಮಾದಲ್ಲಿ ರಿಯಾ ನಟಿಸಿದ್ದರು. ಅದಾದ ಮೇಲೆ ಚೆಹ್ರೆ ಸಿನಿಮಾ ಆರಂಭಗೊಂಡಿತ್ತು. ಈ ಚಿತ್ರದಲ್ಲಿ ನಟಿಸುತ್ತಿರುವಾಗಲೇ ಸುಶಾಂತ್ ಸಿಂಗ್ ಸಾವನ್ನಪ್ಪಿದರು. ನಂತರ ಸುಶಾಂತ್​ ಸಾವಿನ ಕೇಸ್‌ನಲ್ಲಿ ರಿಯಾ ಚಕ್ರವರ್ತಿ ಹೆಸರು ತಳುಕು ಹಾಕಿಕೊಂಡಿತು. ಡ್ರಗ್ಸ್ ಆರೋಪದಲ್ಲಿ ಎನ್‌ಸಿಬಿ ಪೊಲೀಸರು ನಟಿಯನ್ನು ಬಂಧಿಸಿದರು. ಸುಮಾರು ಒಂದು ತಿಂಗಳು ಜೈಲಿನಲ್ಲಿರಬೇಕಾಯಿತು. ನಂತರ ಜಾಮೀನು ಪಡೆದು ರಿಯಾ ಬಿಡುಗಡೆಯಾಗಿದ್ದರು.

Source: newsfirstlive.com Source link