ಸಿದ್ದರಾಮಯ್ಯರ ಹುಟ್ಟುಹಬ್ಬ ಜಮೀರ್​ ಪಾಲಿಗೆ ಹ್ಯಾಪಿ ಟೈಂ; ಗುರು-ಶಿಷ್ಯರ ಹೊಸ ಬೆಸುಗೆ

ಸಿದ್ದರಾಮಯ್ಯರ ಹುಟ್ಟುಹಬ್ಬ ಜಮೀರ್​ ಪಾಲಿಗೆ ಹ್ಯಾಪಿ ಟೈಂ; ಗುರು-ಶಿಷ್ಯರ ಹೊಸ ಬೆಸುಗೆ

ಬೆಂಗಳೂರು: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇತ್ತೀಚೆಗೆ ಜಮೀರ್ ಅಹಮ್ಮದ್ ಖಾನ್ ನಿವಾಸದ ಮೇಲೆ ದಾಳಿ ಮಾಡಿದ್ದರು. ಈ ದಾಳಿ ಬಳಿಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಜಮೀರ್ ಅಹಮ್ಮದ್ ಖಾನ್ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಜಮೀರ್ ಹಾಗೂ ಸಿದ್ದರಾಮಯ್ಯರ ಮಧ್ಯೆ ಏನೋ ಆಗಿದೆ ಅನ್ನೋ ಮಾತುಗಳು ಕೇಳಿಬಂದಿದ್ದವು.

Image

ಆದರೆ ನಿನ್ನೆ ಸಿದ್ದರಾಮಯ್ಯ ತಮ್ಮ 74ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ಈ ವೇಳೆ ಸಿದ್ದರಾಮಯ್ಯಗೆ ಜಮೀರ್ ಅಹಮ್ಮದ್ ಖಾನ್ ಸ್ಪೆಷಲ್​ ಆಗಿ ಟ್ವಿಟರ್​​ನಲ್ಲಿ ವಿಶ್ ಮಾಡಿದ್ದರು. ಅದಾದ ಕೆಲವೇ ಹೊತ್ತಿನಲ್ಲಿ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ಜಮೀರ್ ಅವರ ಫೋನ್ ಕರೆ ಬಂದಿತ್ತು. ಈ ವೇಳೆ ಜಮೀರ್ ಜೊತೆ ಮಾತನಾಡಿದ ಸಿದ್ದರಾಮಯ್ಯ. ಎಲ್ಲಿದಿಯಪ್ಪ ನೀನು, ಆಯ್ತು ಬಾ ಪಾ ಮಾತನಾಡ್ತೇನೆ. ನಾನೇಕೆ ಅನುಮಾನ ಬೀಳಲಿ, ಮನೆಗೆ ಬಾ ಮಾತನಾಡೋಣ, ಇಲ್ಲಿ ಮಾಧ್ಯಮದವರು ಇದ್ದಾರೆ ಅಂತ ಹೇಳಿ ಚಟಾಕಿ ಹಾರಿಸಿದ್ದರು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಒಮ್ಮೆ ‌ಪ್ರೀತಿ ಹುಟ್ಟಿದ್ರೆ ಕಡಿಮೆಯಾಗಲ್ಲ, ಜಮೀರ್ ಮೇಲೆ ಪ್ರೀತಿ ಕಡಿಮೆಯಾಗಿಲ್ಲ ಎಂದಿದ್ದರು.

ತಮ್ಮ ಗುರುವಿನ ಈ ಹೇಳಿಕೆ ಬೆನ್ನಲ್ಲೇ ಜಮೀರ್, ಸಿದ್ದರಾಮಯ್ಯರೊಂದಿಗೆ ರಿ-ಅಡ್ಜೆಸ್ಟ್​ಮೆಂಟ್ ಆಗಿದ್ದಾರೆ. ಹೊಸ ನೀರು ಬಂದರೂ ಹಳೇ ಗುರುವಿನ ಜೊತೆಗಿನ ಪೊಲಿಟಿಕಲ್ ಕಮೀಟ್​ಮೆಂಟ್ ಮುಂದುವರಿಸಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ. ಯಾಕಂದ್ರೆ ಇ.ಡಿ. ದಾಳಿಯ ನಂತರ ಗುರುವಿನ ಮನೆಗೆ ಹೋಗಲಾಗದೇ ಜಮೀರ್ ಅಹಮ್ಮದ್ ಸಂಕಷ್ಟದಲ್ಲಿದ್ದರು. ಇದೀಗ ಜಮೀರ್ ಪಾಲಿಗೆ ಗುರುವಿನ ಬರ್ತ್ ಡೇ ಹ್ಯಾಪಿ ಮೂಮೆಂಟ್ ಆಗಿದೆ ಅಂತಾ ವಿಶ್ಲೇಷಣೆ ಮಾಡಲಾಗ್ತಿದೆ.

Image

ಖುಷಿಯಲ್ಲಿ ತೆಲಾಡಿದ ಜಮೀರ್
ಜಮೀರ್ ಮೊದಲು ಸಿದ್ದರಾಮಯ್ಯಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನ ಕೋರಿದ್ದರು. ನಂತರ ಫೋನ್​​ನಲ್ಲಿ ವಿಶ್ ಮಾಡಿದ್ದರು. ಆಗ ಸಿದ್ದರಾಮಯ್ಯ ತಮ್ಮ ಮನೆಗೆ ಬರುವಂತೆ ಆಹ್ವಾನ ನೀಡಿದರು. ಡಿ.ಕೆ.ಶಿವಕುಮಾರ್ ಮನೆಗೆ ಬಂದರೂ ಸಮಾಧಾನಗೊಳ್ಳದೇ ಗುರುವಿನ ಆಹ್ವಾನದ ನಿರೀಕ್ಷೆಯಲ್ಲಿ ಜಮೀರ್ ಇದ್ದರು. ಫೋನಿನಲ್ಲಿ ನಾನ್ಯಾಕೆ ನಿನ್ಮೇಲೆ ಡೌಟ್ ಮಾಡಲಿ ಎನ್ನುತ್ತಿದ್ದಂತೆ ಜಮೀರ್ ಖುಷಿಯಲ್ಲಿ ತೇಲಾಡಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯರ ಆಹ್ವಾನದಂತೆ ಇಂದು ಗುರು-ಶಿಷ್ಯರು ಭೇಟಿಯಾಗುವ ಸಾಧ್ಯತೆ ಇದೆ. ಹೊಸ ನೀರು‌ ಮನೆಗೆ ಬಂದರೂ ಹಳೇ ಗುರುವಿನ ಕಮಿಟ್ಮೆಂಟ್ ಜಮೀರ್ ಮರೆಯಲಿಲ್ಲ. ಹುಟ್ಟುಹಬ್ಬದ ಶುಭಕೋರುವ ನೆಪದಲ್ಲಿ ಗುರುವಿನ ಜೊತೆ ರೀ ಅಡ್ಜಸ್ಟ್​ಮೆಂಟ್ ಮಾಡಿಕೊಂಡ ರೀತಿಯೇ ತುಂಬಾ ನಾಜೂಕಾಗಿದೆ. ಇದರೊಂದಿಗೆ ಜಮೀರ್, ಚಾಮರಾಜಪೇಟೆಗೆ ಸಿದ್ದರಾಮಯ್ಯ ಎಂಬ ಹಳೇ ಕಮಿಟ್ಮೆಂಟ್ ಮುಂದುವರಿಸುತ್ತಾರಾ? ಅನ್ನೋ ಚರ್ಚೆ ರಾಜಕೀಯವ ವಲಯದಲ್ಲಿ ಶುರುವಾಗಿದೆ.
ವಿಶೇಷ ವರದಿ: ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ

Source: newsfirstlive.com Source link