ಹಾರ್ದಿಕ್​ ಪಾಂಡ್ಯರ ಹೇರ್​ಸ್ಟೈಲ್​ಗೆ ಅಭಿಮಾನಿಗಳು ಫಿದಾ; ‘ನನಗೂ ಬೇಕು’ ಅಂತಿದ್ದಾರೆ ಫ್ಯಾನ್ಸ್​

ಹಾರ್ದಿಕ್​ ಪಾಂಡ್ಯರ ಹೇರ್​ಸ್ಟೈಲ್​ಗೆ ಅಭಿಮಾನಿಗಳು ಫಿದಾ; ‘ನನಗೂ ಬೇಕು’ ಅಂತಿದ್ದಾರೆ ಫ್ಯಾನ್ಸ್​

ಅದ್ಯಾಕೋ ಏನೋ ಮೊನ್ನೆಯಿಂದ ಭಾರತ ತಂಡದ ಕ್ರಿಕೆಟಿಗರು ಹೊಸ ಹೊಸ ಹೇರ್​ ಸ್ಟೈಲ್ಸ್​ ಮಾಡ್ಕೊಳೋದ್ರಲ್ಲಿ ಫುಲ್​ ಬ್ಯುಝಿಯಾಗಿದ್ದಾರೆ. ಇತ್ತೀಚಿಗೆ ಕ್ಯಾಪ್ಟನ್​ ಕೂಲ್​ ಧೋನಿ ಹೊಸಾ ಹೇರ್​ಸ್ಟೈಲ್​ ಮಾಡ್ಕೊಂಡು ಅಭಿಮಾನಿಗಳ ಕಣ್ಣಿಗೆ ಬಿದ್ದಿದ್ದರು.. ಇದೀಗ, ಈ ಕೆಲಸವನ್ನ ಆಲ್​ ರೌಂಡರ್ ಹಾರ್ದಿಕ್​ ಪಾಂಡ್ಯ ಹೊಸಾ ಹೇರ್​ ಕಟ್​ ಮಾಡಿಕೊಂಡು ಅಭಿಮಾನಿಗಳು ‘ನನಗೂ ಇದೇ ಹೇರ್​ ಕಟ್​ ಬೇಕು’ ಅಂತ ಕುಣಿತಿದ್ದಾರೆ.

blank

ನಿನ್ನೆ, ಹಾರ್ದಿಕ್​ ಪಾಂಡ್ಯ, ಮುಂಬೈನ ಸೆಲಬ್ರಿಟಿ ಹೇರ್​ಸ್ಟೈಲಿಸ್ಟ್​ ಆಲೀಮ್​ ಹಕಿಮ್​ ಎನ್ನುವವರ ಬಳಿ, ಸೂಪರ್​ ಆಗಿರೋ ಹೇರ್​ಸ್ಟೈಲ್​ ಮಾಡಿಸಿಕೊಂಡು, ಅದನ್ನ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಾಕಿಕೊಂಡೊದ್ದಾರೆ. ‘‘ಯಾವಾಗ್ಲೂ ನೀವೇ ಬೆಸ್ಟ್​’ ಅಂತ ಬರೆದುಕೊಂಡು, ತಮ್ಮ ಹೇರ್​ಸ್ಟೈಲ್​ನ ಫೋಟೋಗಳನ್ನ ಹಾಕಿದ್ದಾರೆ. ಇನ್ನೂ, ಈ ಫೋಟೋಗೆ ಹಾರ್ದಿಕ್​ರ ಪತ್ನಿ ನತಾಶ ಕೂಡ, ‘ಬೆಂಕಿ’ ಅಂತ ಕಮೆಂಟ್​ ಮಾಡಿದ್ದಾರೆ.

 

 

Source: newsfirstlive.com Source link