ಚಾ.ನಗರದಲ್ಲಿ ಆರಂಭವಾದ ಜಿಪ್​ಲೈನ್​..ಹಸಿರಿನ ಮಧ್ಯ ಮೈ ಝುಮ್ಮೆನಿಸುವ ಸವಾರಿ

ಚಾ.ನಗರದಲ್ಲಿ ಆರಂಭವಾದ ಜಿಪ್​ಲೈನ್​..ಹಸಿರಿನ ಮಧ್ಯ ಮೈ ಝುಮ್ಮೆನಿಸುವ ಸವಾರಿ

ಚಾಮರಾಜನಗರ: ಜಿಲ್ಲೆಯ ಸಾಹಸಪ್ರಿಯರಿಗೊಂದು ಖುಷಿ ಸುದ್ದಿ. ಜಿಪ್ ಲೈನ್ ಸಾಹಸ ಕ್ರೀಡೆ ಕೊಳ್ಳೇಗಾಲ ತಾಲೂಕಿನ ಮರಡಿಗುಡ್ಡದ ವೃಕ್ಷವನದಲ್ಲಿ ಆರಂಭಗೊಂಡಿದೆ.  ವೃಕ್ಷವನಕ್ಕೆ ಪ್ರವಾಸಿಗರನ್ನ ಅಕರ್ಷಿಸಲು ಅರಣ್ಯ ಇಲಾಖೆ ಮಾಸ್ಟರ್ ಪ್ಲಾನ್ ಮಾಡಿದ್ದು, 200 ಮೀ ದೂರದ ಜಿಪಲೈನ್ ಸವಾರಿಯನ್ನು ಆರಂಭಿಸಿದೆ. 20 ಲಕ್ಷ ವೆಚ್ಚದಲ್ಲಿ ಜಿಪ್ ಲೈನ್ ಕ್ರೀಡೆ ಕಾಮಗಾರಿ ಪೂರ್ಣಗೊಂಡಿದ್ದು, ಸದ್ಯ ಪ್ರವಾಸಿಗರಿಗೆ ಲಭ್ಯವಾಗಿದೆ.

ಇನ್ನು ಜಿಪ್​ಲೈನ್​ ಸವಾರಿ ಮಾಡಿದ ಪ್ರವಾಸಿಗರೊಬ್ಬರು ನ್ಯೂಸ್​ಫಸ್ಟ್​ನ ಜೊತೆ ಮಾತನಾಡಿ ಜಿಪ್​ಲೈನ್​ ಸವಾರಿ ಹಸಿರು ಗಿಡಗಳ ಮಧ್ಯ ಸಾಗುವದರಿಂದ ತುಂಬು ರೋಮಾಂಚನಕಾರಿಯಾಗಿದ್ದು, ಹೊಸದೊಂದು ಅನುಭವವನ್ನು ನೀಡುತ್ತಿದೆ, ಇಂತಹ ಕ್ರೀಡೆಯನ್ನು ವೃಕ್ಷವನದಲ್ಲಿ ಪರಿಚಯಿಸಿದ ಅರಣ್ಯ ಇಲಾಖೆಗೆ ಧನ್ಯವಾದಗಳು ಎಂದಿದ್ದಾರೆ.

blank

ಹಲವು ಸುರಕ್ಷತಾ ಕ್ರಮಗಳೊಂದಿಗೆ ಜಿಪ್ ಲೈನ್ ಕ್ರೀಡೆ ಆರಂಭ ಮಾಡಲಾಗಿದ್ದು, ಮೊದಲ ದಿನವೇ ಪ್ರವಾಸಿಗರಿಂದ ಉತ್ತಮ ರೆಸ್ಪಾನ್ಸ್ ದೊರಕಿದೆ ಎನ್ನಲಾಗಿದೆ. ರೋಚಕ ಸವಾರಿಯ ದೃಶ್ಯಗಳನ್ನು ಸೆರೆ ಹಿಡಿಯಲು ಜಿಪ್ ಲೈನ್ ಗೋ ಪ್ರೋ ಕ್ಯಾಮರಾ ವ್ಯವಸ್ಥೆ ಕೂಡ ಮಾಡಿದ್ದು, ವಯಸ್ಕರಿಗೆ 50 ರೂ, ಮಕ್ಕಳಿಗೆ 30 ರೂ ದರ ನಿಗದಿ ಮಾಡಲಾಗಿದೆ.

blank

ಏನಿದು ಜಿಪ್ ಲೈನ್?
ತಂತಿಯ ಮೂಲಕ ಒಂದು ತುದಿಯಿಂದ ಇನ್ನೊಂದು ತುದಿಗೆ ತಲುಪುವುದಕ್ಕೆ ಜಿಪ್‍ಲೈನ್ ಎನ್ನುತ್ತಾರೆ. ಈಶಾನ್ಯ ಭಾರತದಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ, ಗಣಿಗಾರಿಕೆಗಳಲ್ಲಿ ಸರಕುಗಳನ್ನ ಸಾಗಿಸಲು ಈ ಜಿಪ್‍ಲೈನ್ ಬಳಸುತ್ತಿದ್ದರು. ಈಗ ಇದು ಯುವಕರ ಮನ ಸೆಳೆಯುವ ಮನರಂಜನಾ ಕ್ರೀಡೆಯಾಗಿ ಮಾರ್ಪಟ್ಟಿದೆ.

Source: newsfirstlive.com Source link