ಬಿಜೆಪಿ ಕಾರ್ಯಕರ್ತನ ಮನೆ ಮೇಲೆ ಗ್ರೆನೇಡ್ ದಾಳಿ: 4 ವರ್ಷದ ಕಂದಮ್ಮ ಸಾವು, 7 ಮಂದಿಗೆ ಗಾಯ

ಬಿಜೆಪಿ ಕಾರ್ಯಕರ್ತನ ಮನೆ ಮೇಲೆ ಗ್ರೆನೇಡ್ ದಾಳಿ: 4 ವರ್ಷದ ಕಂದಮ್ಮ ಸಾವು, 7 ಮಂದಿಗೆ ಗಾಯ

ಶ್ರೀನಗರ: ಜಮ್ಮು-ಕಾಶ್ಮೀರದ ರಜೌರಿಯಲ್ಲಿರುವ ಬಿಜೆಪಿ ಕಾರ್ಯಕರ್ತನ ನಿವಾಸದಲ್ಲಿ ಸ್ಫೋಟ ಸಂಭವಿಸಿದ್ದು 4 ವರ್ಷದ ಬಾಲಕ ಸಾವನ್ನಪ್ಪಿದ್ದು, 6 ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ರಜೌರಿಯ ಜಿಲ್ಲಾಧಿಕಾರಿ ರಾಜೇಶ್ ಕುಮಾರ್..ಮೇಲ್ನೋಟಕ್ಕೆ ಗ್ರೆನೇಡ್ ಎಸೆದು ಸ್ಫೋಟ ಮಾಡಿದಂತೆ ಕಾಣ್ತಿದೆ. ಈ ಸಂಬಂಧ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡು ಎಫ್​​ಐಆರ್ ಹಾಕಿದ್ದಾರೆ. ದುರ್ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ.

blank

ಗಾಯಗೊಂಡವರೆಲ್ಲರೂ ಕುಟುಂಬಸ್ಥರೇ ಆಗಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ಇನ್ನು ಬಿಜೆಪಿ ಕಾರ್ಯಕರ್ತ ಜಸ್​ಬಿರ್​ ಸಿಂಗ್ ಅವರ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಈ ದಾಳಿಯ ಹೊಣೆಯಲ್ಲಿ ಲಷ್ಕರ್​ ಸಂಘಟನೆ ಹೊತ್ತುಕೊಂಡಿದೆ ಅಂತಾ ವರದಿಯಾಗಿದೆ. ಇನ್ನು ಬಿಜೆಪಿ ಮನೆ ಮೇಲಿನ ದಾಳಿ ಪ್ರಕರಣವನ್ನ ಜಮ್ಮು-ಕಾಶ್ಮೀರದ ರಾಜ್ಯಪಾಲರು ಖಂಡಿಸಿದ್ದಾರೆ.

Source: newsfirstlive.com Source link