ರಾಹುಲ್​ ಗಾಂಧಿ ಟ್ವಿಟರ್ ಅಮಾನತು: ‘ನಮ್ಮ ನಾಯಕ ರಾಹುಲ್​’ ಹೆಸರಿನಲ್ಲಿ ಅಭಿಯಾನ ಶುರು

ರಾಹುಲ್​ ಗಾಂಧಿ ಟ್ವಿಟರ್ ಅಮಾನತು: ‘ನಮ್ಮ ನಾಯಕ ರಾಹುಲ್​’ ಹೆಸರಿನಲ್ಲಿ ಅಭಿಯಾನ ಶುರು

ನವದೆಹಲಿ: ದೆಹಲಿಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿಯ ಮನೆಗೆ ಕಾಂಗ್ರೆಸ್​​ ವರಿಷ್ಠ ರಾಹುಲ್​​ ಗಾಂಧಿ ಭೇಟಿ ನೀಡಿ, ಈ ಕುರಿತು ಬಾಲಕಿಯ ಪೋಷಕರ ಜತೆಗಿನ ಚಿತ್ರವೊಂದನ್ನು ಹಂಚಿಕೊಂಡು ಟ್ವೀಟ್​​ ಮಾಡಿದ್ದರು. ಇದರ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಟ್ವಿಟರ್​​ಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿತ್ತು.

ಆಯೋಗದ ಮನವಿಯನ್ನ ಪುರಸ್ಕರಿಸಿದ ಟ್ವಿಟರ್​​ ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ ಬಾಲಕಿಯ ಕುರಿತು ಮಾಹಿತಿ ನೀಡಿ ಪೋಕ್ಸೋ ಕಾಯ್ದೆ ಉಲ್ಲಂಘಿಸಿ ಟ್ವೀಟ್​​ ಮಾಡಿದ್ದಾರೆ ಎಂದು ರಾಹುಲ್​​ ಗಾಂಧಿ ಖಾತೆಯನ್ನು ಸಸ್ಪೆಂಡ್​​ ಮಾಡಿದ್ದಾಗಿ ಟ್ವಿಟರ್ ತಿಳಿಸಿತ್ತು.

blank

ಇದನ್ನೂ ಓದಿ: ಧಂ ಇದ್ರೆ ನಮ್​​ ಅಕೌಂಟೂ​ ಲಾಕ್ ಮಾಡಿ ಎಂದ ‘ಕೈ’ ನಾಯಕರ ಟ್ವಿಟರ್ ಅಕೌಂಟ್ ಲಾಕ್; ಮುಂದ?

ರಾಹುಲ್​​​ ಬೆನ್ನಲ್ಲೀಗ ಕಾಂಗ್ರೆಸ್​ ಅಧಿಕೃತ ಟ್ವಿಟ್ಟರ್​​ ಖಾತೆಯೂ ಲಾಕ್​​ ಆಗುವದರ ಜೊತೆಗೆ ಕಾಂಗ್ರೆಸ್​ ಹಲವು ನಾಯಕರ ಖಾತೆಗಳನ್ನು ಟ್ವಿಟರ್​ ತೆಗೆದುಹಾಕಿತ್ತು. ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್​ನ ರಾಷ್ಟ್ರೀಯ ನಾಯಕರು ತಮ್ಮ ಟ್ವೀಟರ್​ ಖಾತೆಗಳಲ್ಲಿ ರಾಹುಲ್​ ಗಾಂಧಿ ಅವರ ಭಾವಚಿತ್ರವನ್ನು ಪ್ರೊಫೈಲ್​ ಫೋಟೊವಾಗಿ ಇರಿಸಿ ಟ್ವಿಟರ್​ ವಿರುದ್ಧ ಸಮರ ಸಾರಿದ್ದು ನಮ್ಮ ನಾಯಕ ರಾಹುಲ್​ ಗಾಂಧಿ (MyLeaderRahulGandhi) ಹೆಸರಿನೊಂದಿಗೆ ಅಭಿಯಾನ ಶುರು ಮಾಡಿದೆ. ಇದರ ಮುಂಚೂಣಿಯಲ್ಲಿ ಸ್ವತಃ ರಾಹುಲ್ ಗಾಂಧಿ ಅವರ ತಂಗಿ ಪ್ರಿಯಾಂಕಾ ವಾದ್ರಾರೇ ನಿಂತಿದ್ದಾರೆ.

blank

ಮೇ ಭೀ ಚೌಕಿದಾರ್.. ಮಾದರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ.

2019ರಲ್ಲಿ ರಫೇಲ್​ ಹಗರಣಕ್ಕೆ ಸಂಬಂಧಿಸಿ ಮೋದಿ ವಿರುದ್ಧ ರಾಹುಲ್ ಗಾಂಧಿ ಅವರು ಚೌಕಿದಾರ್ ಚೋರ್ ಹೈ ಎಂಬ ಟೀಕಾಸ್ತ್ರಕ್ಕೆ ಪ್ರತಿಯಾಗಿ ಮೈ ಭೀ ಚೌಕಿದಾರ್(ನಾನೂ ಕೂಡ ಕಾವಲುಗಾರ) ಎಂಬ ಅಭಿಯಾನವನ್ನು ಬಿಜೆಪಿಗರು ಆರಂಭಿಸಿ ಕಾಂಗ್ರೆಸ್ಸಿಗರಿಗೆ ಠಕ್ಕರ್​ ನೀಡಿದ್ದರು. ಟ್ವಿಟ್ಟರ್​ನಲ್ಲಿರುವ ಬಿಜೆಪಿಯ ಬಹುತೇಕ ಸಂಸದರು ಮತ್ತು ಶಾಸಕರೂ, ಬೆಂಬಲಿಗರೂ ಸೇರಿದಂತೆ ಎಲ್ಲರು ಕೂಡ ತಮ್ಮ ಹೆಸರಿನ ಮುಂದೆ ಚೌಕಿದಾರ್ ಎಂದು ಸೇರಿಸಿಕೊಂಡು ಸೋಷಿಯಲ್​ ಮೀಡಿಯಾದಲ್ಲಿ ಜೋರು ಸದ್ದು ಮಾಡಿದ್ದರು.

ಇನ್ನು ಅದೇ ಮಾದರಿಯಲ್ಲಿ ತಿರುಗೇಟು ನೀಡಲು ಸಜ್ಜಾಗಿರುವ ಕಾಂಗ್ರೆಸ್​ ‘ನನ್ನ ನಾಯಕ ರಾಹುಲ್​ ಗಾಂಧಿ’ ಎಂದು ಬರೆದುಕೊಂಡು ಅಭಿಯಾನ ಶುರು ಹಚ್ಚಿಕೊಂಡಿದ್ದಾರೆ. ಈ ಅಭಿಯಾನಕ್ಕೆ ಕಾಂಗ್ರೆಸ್​ ಪಾಳಯದಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್​ನ ಪ್ರಮುಖ ನಾಯಕರು ಸೇರಿದಂತೆ ಪಕ್ಷದ ಬೆಂಬಲಿಗರು ಅಭಿಯಾನಕ್ಕೆ ಕೈ ಜೋಡಿಸುತ್ತಿದ್ದಾರೆ..

 

blank

blank

blank

ರಾಷ್ಟ್ರೀಯ ಯುವ ಕಾಂಗ್ರೆಸ್​ನ ಅಧ್ಯಕ್ಷರಾದ ಬಿ.ವಿ. ಶ್ರೀನಿವಾಸ, ಪ್ರಿಯಾಂಕಾ ಗಾಂಧಿ ವಾದ್ರಾ, ಮಹಾರಾಷ್ಟ್ರ,ಉತ್ತರಾಕಾಂಡ್, ಮಧ್ಯಪ್ರದೇಶ, ಕರ್ನಾಟಕ ಸೇರಿದಂತೆ ಇತರೆ ರಾಜ್ಯದ ಪಕ್ಷದ ಟ್ವಿಟರ್​ ಖಾತೆಗಳು ಮತ್ತು  ಹಲವು ನಾಯಕರು ತಮ್ಮ ಖಾತೆಗಳಿಗೆ ರಾಹುಲ್​ ಗಾಂಧಿ ಭಾವಚಿತ್ರ ಇರಿಸಿ ಟ್ವಿಟರ್​ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದು ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದೆ.

ವಿಶೇಷ ವರದಿ: ಮಾಲತೇಶ್ ಅಗಸರ, ಡಿಜಿಟಲ್ ಡೆಸ್ಕ್​

Source: newsfirstlive.com Source link