ಇಂದಿರಾ ಕ್ಯಾಂಟೀನ್ ಮರುನಾಮಕರಣಕ್ಕೆ ಆಗ್ರಹಿಸಿದ ಮತ್ತೊಬ್ಬ ನಾಯಕ

ಇಂದಿರಾ ಕ್ಯಾಂಟೀನ್ ಮರುನಾಮಕರಣಕ್ಕೆ ಆಗ್ರಹಿಸಿದ ಮತ್ತೊಬ್ಬ ನಾಯಕ

ಬೆಂಗಳೂರು: ಇಂದಿರಾ ಕ್ಯಾಂಟೀನ್ ಹೆಸರು ಮರುನಾಮಕರಣ ವಿಚಾರವನ್ನ ಜನರೇ ತೀರ್ಮಾನಿಸಲಿ ಅಂತಾ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ‌ಸುನೀಲ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್​​ನಲ್ಲಿ ಊಟ ಮಾಡಲು ಗುರುತಿನ ಪುರಾವೆ ಬೇಕಿಲ್ಲ

blank

ಇಂದಿರಾ ಕ್ಯಾಂಟೀನ್ ಮರುನಾಮಕರಣ ವಿಚಾರಕ್ಕೆ ಮಾತನಾಡಿದ ಅವರು.. ಸರ್ಕಾರದಿಂದ ಕೊಡುವ ಅನ್ನದಾನ ಯೋಜನೆಯನ್ನ ಯಾವ ಸರ್ಕಾರ ಬೇಕಾದರೂ ಕೊಡಲಿ. ಅನ್ನ ಸ್ವೀಕರಿಸುವ ವ್ಯಕ್ತಿ ಇಂದಿರಾ ಹೆಸರು ಹೇಳಿ ಸ್ವೀಕರಿಸಿದರೆ ಒಳ್ಳೆಯದಾಗುತ್ತೋ? ಅನ್ನಪೂರ್ಣೇಶ್ವರಿ ಹೆಸರು ಹೇಳಿ ಸ್ವೀಕರಿಸಿದರೆ ಉತ್ತಮವಾಗಿರುತ್ತೋ? ಅಂತಾ ಸಾರ್ವಜನಿಕವಾಗಿ ‌ಚರ್ಚೆಗೆ ಆಗಲಿ ಎಂದಿದ್ದಾರೆ.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್​​​ಗೆ ‘ಅನ್ನಪೂರ್ಣೇಶ್ವರಿ ಕ್ಯಾಂಟೀನ್’ ಎಂದು ಹೆಸರಿಡಿ; ಸಿಎಂಗೆ ಸಿ.ಟಿ ರವಿ ಮನವಿ

ಸಾರ್ವಜನಿಕರು ಮುಕ್ತವಾಗಿರುವ ‌ಚರ್ಚೆ ಬರಲಿ. ಬದಲಾವಣೆ ಆಗಬೇಕೋ ಬೇಡವೋ ಜನರು ತೀರ್ಮಾನ ಮಾಡಲಿ. ಬದಲಾಯಿಸದ್ರೆ ದೊಡ್ಡ ದೊಡ್ಡ ಹೋರಾಟ ಮಾಡುವುದಾಗಿ ಕಾಂಗ್ರೆಸ್ ‌ಹೇಳುತ್ತದೆ. ಹಿಂದೆ ವಾಜಪೇಯಿ ಸರ್ಕಾರದಲ್ಲಿ ಚತುಸ್ಪಥ ರಸ್ತೆ ಬೋರ್ಡ್ ಅನುದಾನ ಕೊಟ್ಟು ಹೆಸರು ಚೇಂಜ್ ಮಾಡಿದ್ದೀರ. ಇದನ್ನು ರಾಜ್ಯದ ಜನರು, ದೇಶದ ಜನರು ಮರೆತಿಲ್ಲ. ಹೀಗಾಗಿ ಹೆಸರು ಬದಲಾವಣೆ ಮಾಡಿ ಅಂತ ನಾವ್ ಹೇಳಲ್ಲ. ರಾಜ್ಯದ ಜನರು ತೀರ್ಮಾನ ಮಾಡಲಿ ಎಂದಿದ್ದಾರೆ.

ಇದನ್ನೂ ಓದಿ:‘ನಾವ್ಯಾರೂ ಕೈಗೆ ಬಳೆ ತೊಟ್ಟುಕೊಂಡಿಲ್ಲ.. ಇಂದಿರಾ ಕ್ಯಾಂಟೀನ್ ಹೆಸರು ಮುಟ್ಟಲಿ ಗೊತ್ತಾಗುತ್ತೆ’

Source: newsfirstlive.com Source link