ನಿರೂಪ್​ ಭಂಡಾರಿಯ ಬರ್ತ್​ಡೇ ಗೆ ವಿಕ್ರಾಂತ್ ರೋಣನ ಸರ್ಪ್ರೈಸ್ ಗಿಫ್ಟ್​

ನಿರೂಪ್​ ಭಂಡಾರಿಯ ಬರ್ತ್​ಡೇ ಗೆ ವಿಕ್ರಾಂತ್ ರೋಣನ ಸರ್ಪ್ರೈಸ್ ಗಿಫ್ಟ್​

“ವಿಕ್ರಾಂತ್​ ರೋಣ” ಕಿಚ್ಚ ಸುದೀಪ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ. ಹಾಗೊಂದು ಈಗೊಂದು ಅಂತಾ ಯಾವಗಲು ಸುದ್ದಿಯಾಲಿರೋ ವಿಕ್ರಾಂತ್​ ರೋಣ ಚಿತ್ರ ತಂಡ ಚಿತ್ರದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಒಂದಾದ ಸಂಜೀವ್​ ಗಾಂಭೀರ ಅಲಿಯಾಸ್​ ಸಂಜು ಪಾತ್ರದ ಪೋಸ್ಟರ್​ ಒಂದನ್ನ ರಿಲೀಸ್​ ಮಾಡಿದೆ.

ಡಿಫರೆಂಟ್ ಪೋಸ್ಟರ್ಸ್​ಗಳಿಂದ ಗಮನ ಸೇಳೆಯುತ್ತಿದ್ದ ಅನೂಪ್ ಭಂಡಾರಿ ಫಿಲ್ಮ್ ಟೀಮ್​ ನಿರೂಪ್​ ಭಂಡಾರಿ ಬರ್ತ್​ಡೇ ಸಲುವಾಗಿ ಮತ್ತೊಂದು ಕುತೂಹಲದ ಪೊಸ್ಟರ್​ವೊಂದನ್ನ ರಿಲೀಸ್​ ಮಾಡಿದೆ. ಇನ್ನು ಮೊನೆಮೊನ್ನೆಯಷ್ಟೆ ಜಾಕ್ವೆಲಿನ್ ಫರ್ನಾಂಡಿಸ್ ಬರ್ತ್​ಡೇ ಸಲುವಾಗಿ ಗಂಡಗ್​ ರಕ್ಕಮ್ಮನ ಪೊಸ್ಟರ್ ರಿಲೀಸ್​ ಮಾಡಿದ್ದ ಅನೂಪ್​ ಭಂಡಾರಿ ಫಿಲ್ಮ್​ ಟೀಮ್​ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿದ್ರು ಈಗ ಮತ್ತೆ ಅದೇ ರೀತಿ ನಿರೂಪ್​ ಭಂಡಾರಿಯವರ ಸಂಜು ಪಾತ್ರದ ಪೋಸ್ಟರ್ ಬಿಟ್ಟು ಎಲ್ಲ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ.

Source: newsfirstlive.com Source link