ರಾಯಭಾರಿ ಮಗಳನ್ನೇ ಹೊತ್ತೊಯ್ದು ಚಿತ್ರಹಿಂಸೆ; ಆ ವಿಡಿಯೋದಿಂದ ಬಯಲಾಯ್ತು ಪಾಕ್​ ಕೃತ್ಯ

ರಾಯಭಾರಿ ಮಗಳನ್ನೇ ಹೊತ್ತೊಯ್ದು ಚಿತ್ರಹಿಂಸೆ; ಆ ವಿಡಿಯೋದಿಂದ ಬಯಲಾಯ್ತು ಪಾಕ್​ ಕೃತ್ಯ

ಇದು ಪಾಕ್‌ನ ಇನ್ನೊಂದು ಮುಖ. ಅಲ್ಲಿನ ಜನರ ಸಣ್ಣತನಕ್ಕೆ ಸರ್ಕಾರವೇ ಸಾಥ್ ನೀಡುತ್ತಿದೆ. ಅಲ್ಲಿ ನಡೆದಿದ್ದು ಒಂದು ಯುವತಿಯ ಕಿಡ್ನಾಪ್. ಅದು ಸಾಮಾನ್ಯ ಹುಡುಗಿಯನ್ನಲ್ಲ.. ಬದಲಿಗೆ ಒಂದು ದೇಶದ ರಾಯಭಾರಿಯ ಮಗಳನ್ನ. ಆದರೆ ಪಾಕ್ ನ ಸಮರ್ಥನೆ ಬೇರೆನೇ ಇತ್ತು. ಪಾಕ್ ನಡೆಸಿದ ಈ ಹೀನ ಕೃತ್ಯದ ಬಗ್ಗೆ ವಿವರವಾಗಿ ಆ ಯುವತಿಯೇ ತಿಳಿಸಿದ್ದಾಳೆ..

ಪಾಕಿಸ್ತಾನ ಎಂದರೇ ಸಾಕು ಸಾಲು ಸಾಲು ರಕ್ತ ಪಿಪಾಸು ಘಟನೆಗಳು ಕಣ್ಣ ಮುಂದೆ ಬಂದು ಹೋಗುತ್ತೆ. ಅಲ್ಲಿ ಬೇರೆ ದೇಶದವರಿಗೆ ಇರಲಿ, ತಮ್ಮ ದೇಶದ ಪ್ರಜೆಗಳಿಗೆ ಸುರಕ್ಷತೆ ಇಲ್ಲ ಅನ್ಸುತ್ತೆ. ಆ ದೇಶದ ಪ್ರಜೆಗಳು ಒಂದಲ್ಲ ಒಂದು ಕೃತ್ಯವನ್ನು ಎಸಗಿ ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಎಷ್ಟು ಬಾರಿ ಕ್ಷಮಿಸಿದರು ಮತ್ತದೇ ತಪ್ಪು ಹೆಜ್ಜೆಗಳನ್ನು ಇಡೋದ್ರಲ್ಲಿ ಪಾಕ್‌ ಸದಾ ಮುಂದು. ಇವತ್ತು ಪಾಕ್ ಬಗ್ಗೆ ಮಾತನಾಡಲು ಕಾರಣ, ಜುಲೈ 16 ರಂದು ನಡೆದ ಘಟನೆ.

blank

 

ಅಂದು ಪಾಕಿಸ್ತಾನದಲ್ಲಿರುವ ಅಫ್ಘಾನಿಸ್ತಾನದ ರಾಯಭಾರಿಯ ಮಗಳನ್ನು ಪಾಕ್ ದುಷ್ಕರ್ಮಿಗಳು ಅಪಹರಿಸಿ ಹಿಂಸೆ ನೀಡಿ ತಂದು ಎಸೆದು ಹೋಗಿದ್ದರು. ಈ ಹೀನ ಕೃತ್ಯವನ್ನು ಕ್ಷಮಿಸಲು ಸಾಧ್ಯವೇ? ಇಡಿ ವಿಶ್ವವೇ ಈ ಪ್ರಕರಣವನ್ನು ಕೈ ನಲ್ಲಿ ಹಿಡಿದು, ಪಾಕ್ ನತ್ತ ಬೆರಳು ಮಾಡಿ ತೋರಿಸಿತ್ತು. ಆದ್ರೆ ಅಂದು ಆಗಿದ್ದೇನು? ಅನ್ನೋದನ್ನ ಈಗ ಆ ಯುವತಿಯೇ ವಿಸ್ತೃತವಾಗಿ ಹೇಳಿದ್ದಾಳೆ..

ಮನೆಗೆ ಮರಳುವಾಗ ಅಫ್ಘಾನ್ ಯುವತಿಯ ಕಿಡ್ನಾಪ್
ಇಸ್ಲಾಮಾಬಾದ್‌ನಲ್ಲಿ ದುಷ್ಕರ್ಮಿಗಳಿಂದ ಹೀನ ಕೃತ್ಯ

ಸಿಲ್ಸಿಲಾ ಅಲಿಖಿಲ್ ಈಕೆಯೇ ನೋಡಿ, ಪಾಕ್ ಕ್ರೂರ ಕಣ್ಣುಗಳಿಗೆ ಗುರಿಯಾದ ಯುವತಿ. ಪಾಕ್ ನಲ್ಲಿ ಅಫ್ಘಾನಿಯರನ್ನು ಪ್ರತಿನಿಧಿಸುವ ರಾಯಭಾರಿ ನಜೀಬುಲ್ಲಾ ಅಲಿಖಿಲಿಯವರ ಮಗಳು ಈಕೆ. ಕೆಲಸದ ಮೇಲೆ ಹೊರ ನಡೆದಿದ್ದ ಸಿಲ್ಸಿಲಾ ಅಲಿಖಿಲ್ ಮನೆಗೆ ಮರಳುತ್ತಿದ್ದವರನ್ನ ಅಪಹರಿಸಿ ಕೆಲವು ಗಂಟೆಗಳ ಕಾಲ ಒತ್ತೆ ಇರಿಸಿಕೊಳ್ಳಲಾಗಿತ್ತು. ಈ ವೇಳೆ ಅವರಿಗೆ ತೀವ್ರ ಚಿತ್ರಹಿಂಸೆ ನೀಡಲಾಗಿದೆ. ಅದೆಷ್ಟೋ ಗಂಟೆಗಳ ಕಾಲ ಆಕೆಯನ್ನು ಹೊತ್ತೋಯ್ದು ಚಿತ್ರ ಹಿಂಸೆ ಮಾಡಿದ್ದಾರೆ. ಅದೆಷ್ಟೊ ಹೊತ್ತಿನ ಬಳಿಕ ಜೀವ ವಿರುವಂತೆ ರೋಡ್ ಗೆ ತಳ್ಳಿ ಹೋಗಿದ್ದರು.. ಆ ಬಳಿಕ ಏನಾಗಿತ್ತು? ಆಕೆ ಮಾಡಿದ್ದಾದ್ರೂ ಏನು? ಅನ್ನೋದನ್ನು ಸಹ ಆ ಯುವತಿಯೇ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾಳೆ..

ರೋಡ್ ನಲ್ಲಿ ಇದ್ದ ಸಿಲ್ಸಿಲಾರನ್ನು ಆಸ್ಪತ್ರೆಗೆ ದಾಖಲು
ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಆದೇಶ

ಯುವತಿ ಸಿಲ್ಸಿಲಾ ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಸ್ಥಳಿಯರು ಗಮನಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಆಕೆ ಅಫ್ಘಾನ್ ರಾಯಭಾರಿಯ ಮಗಳು ಎಂದು ತಿಳಿದು ಬಂದಾಗ ಕೂಡಲೇ ಪೊಲೀಸರು ಸರ್ಕಾರಕ್ಕೆ ತಿಳಿಸಿದ್ದಾರೆ. ಅಪಹರಣಕಾರರ ಬಂಧನದಿಂದ ಬಿಡುಗಡೆಯಾದ ಬಳಿಕ ಅಲಿಖಿಲ್ ಅವರನ್ನು ಆಸ್ಪತ್ರೆಯಲ್ಲಿ ವೈದ್ಯಕೀಯ ಆರೈಕೆಗೆ ಒಳಪಡಿಸಲಾಗಿತ್ತು. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಮತ್ತು ಅಫ್ಘಾನಿಸ್ತಾನ ರಾಜತಾಂತ್ರಿಕರಿಗೆ ಸೂಕ್ತ ರಕ್ಷಣೆಗಳನ್ನು ಒದಗಿಸಬೇಕು, ಜೊತೆಗೆ ಆ ದುಷ್ಕರ್ಮಿಗಳನ್ನು 48 ಗಂಟೆಯಲ್ಲಿ ಬಂಧಿಸಬೇಕೆಂಬ ಆದೇಶವನ್ನು ಹೊರಡಿಸುವಂತೆ ಇಮ್ರಾನ್ ಖಾನ್ ಸರಕಾರವನ್ನು ಒತ್ತಾಯಿಸಿತ್ತು.. ಹೀಗಂತ ಆ ಯುವತಿಯೇ ವಿಡಿಯೋ ಒಂದನ್ನ ಮಾಡಿ ಹೇಳಿದ್ದಾಳೆ.. ಪಾಕಿಸ್ತಾನದ ಹೀನ ಮುಖವನ್ನ ಬೆತ್ತಲು ಮಾಡಿದ್ದಾಳೆ.

ಹಾಗೆ ನೋಡಿದ್ರೆ ಕೆಲವರನ್ನ ಬಂಧಿಸುವ ನಾಟಕವಾಡಿದ್ದ ಇಮ್ರಾನ್ ಖಾನ್ ಸರ್ಕಾರ, ನಿಷ್ಪಕ್ಷ ಪಾತ ತನಿಖೆ ನಡೆಸೋದಾಗಿ ಗಾಳಿಯಲ್ಲಿ ಶರಾ ಬರೆದಿತ್ತು. ಇಷ್ಟರ ಹೊತ್ತಿಗಾಗಲೇ, ಈ ಸುದ್ದಿ ಎಲ್ಲೆಲ್ಲೂ ಹಬ್ಬಿ ಬಿಟ್ಟಿತ್ತು. ವಿಶ್ವಾದ್ಯಂತ ಪಾಕ್ ನಲ್ಲಿ ಮಹಿಳೆಯರಿಗೆ ಸೇಫ್ ಇಲ್ಲ ಎನ್ನುವ ಮಾತುಗಳು ಶುರುವಾಗಿತ್ತು. ರಾಯಭಾರಿಯ ಮಗಳ ಅಪಹರಣವಾಗಿದೆ ಎಂದು ವಿಶ್ವದ ಮುಂದೆ ಪಾಕ್ ತಲೆ ತಗ್ಗಿಸುವಂತ ಸನ್ನೀವೇಶ ಎದುರಾಗಿತ್ತು. ಅಷ್ಟೆ ಅಲ್ಲ, ಪಾಕ್ ನೆಲದಲ್ಲಿ ಪ್ರತಿಭಟನೆಗಳು ಕೇಳ ತೊಡಗಿದವು. ಆಗಲೇ ನೋಡಿ ಪಾಕ್ ಒಂದು ಟ್ವಿಸ್ಟ್ ಕೊಟ್ಟಿದ್ದು.

‘ಅಪಹರಣ ನಡೆದೇ ಇಲ್ಲ’ ಅಂತ ರಾಗ ಬದಲಿಸಿದ ಪಾಕ್

ಇದೇ ನೋಡಿ ಟ್ವಿಸ್ಟ್… ಯಾವಾಗ ಪಾಕ್ ಮರ್ಯಾದೆ ತಲೆ ತಗ್ಗಿಸುವಂತೆ ಆಗ್ತಾ ಬಂತೋ, ಕೂಡಲೇ ಪಾಕ್ ತನ್ನ ತನಿಖೆಯ ಹಾದಿಯನ್ನೆ ಬದಲಿಸಿ ಬಿಡ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಗೆ ಯಾವುದೆ ಅಹಿತಕರ ಸಂಭವಿಸಿರುವುದು ಕಂಡು ಬಂದಿಲ್ಲ. ಸಿಲ್ಸಿಲಾರವರ ಅಪಹರಣ ನಡದೇ ಇಲ್ಲ, ಆಕೆ ಸ್ನೇಹಿತರ ಜೊತೆ ಹೊರ ಹೋಗಿದ್ದಳು ಎಂದು ತನಿಖೆಯ ಮುಖಾಂತರ ತಿಳಿದು ಬಂದಿದೆ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ ಇದು ಕೇವಲ ಪಾಕ್ ಮರ್ಯಾದೆಯನ್ನು ಕಡಿಮೆಗೊಳಿಸುವ ಪ್ಲಾನ್. ಈ ಪ್ಲಾನ್ ಗಳಿಗೆ ಪಾಕ್ ತಲೆ ಭಾಗುವುದಿಲ್ಲ. ಜೊತೆಗೆ ಬೆಂಬಲವನ್ನು ನೀಡುವುದಿಲ್ಲ ಎಂದು ಹೇಳಿತ್ತು. ಜೊತೆಗೆ ಅಫ್ಘಾನ್ ಸರ್ಕಾರದಿಂದ ವಿಶೇಷ ತನಿಖಾಧಿಕಾರಿಗಳು ಬಂದರೂ, ಅವರಿಗೆ ಬೆಂಬಲಿಸದೆ.. ಪ್ರಕರಣವನ್ನು ಅರ್ಧಕ್ಕೆ ನಿಲ್ಲಿಸಲು ಸೂಚಿಸಿದಂತಿತ್ತು.

ಇಷ್ಟೆಲ್ಲ ನಡೆಯುತ್ತಲಿದ್ದರು, ಅಪಹರಣಕ್ಕೆ ಒಳಗಾದ ಸಿಲ್ಸಿಲಾ ಮಾತ್ರ ಎಲ್ಲೂ ಮಾತನಾಡಿರಲಿಲ್ಲ. ಅಂದು ಏನಾಗಿತ್ತು.. ಆಕೆಯ ವೈಧ್ಯಕೀಯ ಪರೀಕ್ಷೆ ಹೇಗೆ ನಡೆಯಿತು. ಇದರ ಬಗ್ಗೆ ಪಾಕ್ ಅಧೀಕಾರಿಗ ಹೇಳಿಕೆ ಬಿಟ್ಟರೇ ಬೇರೇನು ಇರಲೇ ಇಲ್ಲ. ಆದರೆ ಸ್ವತಃ ಸಿಲ್ಸಿಲಾರವರೇ ಇಂದು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅಪಹರಣದ ಇಂಚಿಂಚು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಆಕೆಯನ್ನು ಕಾರ್ ನಲ್ಲಿ ಅಪಹರಣ ಮಾಡಿದ ದುಷ್ಕರ್ಮಿಗಳು, ಕೈಗಳನ್ನು ಕಟ್ಟಿ, ಕಾಲುಗಳನ್ನು ಕಟ್ಟಿ ಮೂರ್ಛೆ ಹೋಗುವ ಮತ್ತನ್ನು ಕೊಟ್ಟಿದ್ದರು. ಆದರೆ ಆಸ್ಪತ್ರೆಯ ವೈದ್ಯರು 12 ಗಂಟೆ, 18 ಗಂಟೆ ಗಳು ಕಳೇದರೂ ಆಕೆಯ ರಕ್ತ ಪರೀಕ್ಷೆಯನ್ನು ಮಾಡಲೇ ಇಲ್ಲ. ಆಕೆ ಹಾಕಿದ ಬಟ್ಟೆಗಳ ಮೇಲೆ ಇದ್ದ ಗುರುತುಗಳನ್ನು ತನಿಖೆಗಾಗಿ ಪಡೆಯಲೇ ಇಲ್ಲ. ಇದು ಅಸಲಿಗೆ ವೈದ್ಯಕೀಯ ಪರೀಕ್ಷೆ ಅನ್ನೋದೆ ಸುಳ್ಳು ಎಂದು ಹೇಳಿದ್ದಾರೆ ಸಿಲ್ಸಿಲಾ.

blank

ಇದಿಷ್ಟೆ ಅಲ್ಲ, ಅಪಹರಣ ಸಂದರ್ಭದಲ್ಲಿ ತಾನು ಮೂರ್ಛೆ ಹೋದ ಸ್ಥಿತಿಯಲ್ಲಿದ್ದೆ. ಅವರು ಅಪಹರಣ ಮಾಡಿದ ಬಳಿಕ ಏನು ಮಾಡಿದ್ದಾರೆ ಗೊತ್ತಿಲ್ಲ. ಆದರೆ ಪಾಕ್ ವೈದ್ಯರು ಈ ಪ್ರಕರಣಕ್ಕೆ ಸಬಂಧಿಸಿದ ಯಾವುದೇ ಪ್ರತ್ಯೇಕ ಪರೀಕ್ಷೆಗಳನ್ನು ಮಾಡಲೇ ಇಲ್ಲ. ತನ್ನ ಮೈ-ಕೈ ಮೇಲಿದ್ದ ಗಾಯಗಳನ್ನು ಪರಿಗಣಿಸಲಿಲ್ಲ ಎನ್ನುತ್ತಾರೆ. ಈ ರೀತಿ ಪಾಕ್ ಹೇಗೆ ಮಾಡಲು ಸಾಧ್ಯ ? ಎಂದು ಗಂಭೀರವಾದ ಆರೋಪವನ್ನು ಮಾಡಿದ್ದಾರೆ.

ಒಟ್ಟಿನಲ್ಲಿ, ನೊಂದ ಯುವತಿ.. ನಡೆದ ಘಟನೆಯನ್ನು ವಿಶ್ವಕ್ಕೆ ತಿಳಿಸಿದ್ದಾಳೆ. ಆದ್ರೆ ಪಾಕ್ ಮಾತ್ರ, ಅಪಹರಣವಾಗಿರುವ ಒಂದೇ ಒಂದು ದಾಖಲೆಗಳು ನಮ್ಮ ಬಳಿ ಬಂದೇ ಇಲ್ಲ.. ಇದೆಲ್ಲ ಅಫ್ಘಾನ್ ಹಾಗೂ ಪಾಕ್ ನಡುವಿನ ಸಂಬಂಧವನ್ನು ಕಡಿದು ಹಾಕುವ ಮತ್ತು ಪಾಕ್ ಮರ್ಯಾದೆಯನ್ನು ಬೀದಿಗಿಳಿಸುವ ಪ್ಲಾನ್ ಎಂದು ಹೇಳುತ್ತಿದ್ದಾರೆ. ಇದೆಲ್ಲದ್ದಿಕ್ಕಿಂತ ಹೆಚ್ಚಾಗಿ ರಾಯಭಾರಿ ಮಗಳಿಗೆ ಹೀಗಾದರೆ, ಇನ್ನು ಅಲ್ಲಿನ ಜನ ಸಾಮಾನ್ಯರ ಸ್ಥಿತಿ ಏನು ಅನ್ನೋದು, ವಿಶ್ವದ ಮುಂದಿರುವ ಪ್ರಶ್ನೆ.

ಒಮ್ಮೆ ಹಾಗೆ, ಇನ್ನೊಮ್ಮೆ ಹೀಗೆ ಹೇಳೋದು ಪಾಕ್ ಗೆ ಮುಂಚಿಂದಲೂ ಅಭ್ಯಾಸವಾಗಿದೆ. ಅಪಹರಣವಾಗಿ ನೋವನ್ನು ಅನುಭವಿಸಿದ ಯುವತಿಯ ಮಾತುಗಳನ್ನು ಕೇಳಿದರೆ., ಪಾಕ್ ನ ಕುತಂತ್ರ ಬುದ್ಧಿ ಮತ್ತೆ ಮತ್ತೆ ಪ್ರೂವ್ ಆಗುತ್ತೆ. ರಾಯಭಾರಿಯ ಮಗಳಿಗೆ ಹೀಗಾದರೆ, ಅಲ್ಲಿನ ಉಳಿದ ಯುವತಿಯರ ಪರಿಸ್ಥಿತಿ ಊಹಿಸಲಾರದು.

ವಿಶೇಷ ಬರಹ: ಸುಮುಖ, ಸ್ಪೆಷಲ್ ಡೆಸ್ಕ್​

Source: newsfirstlive.com Source link