ಅಕ್ರಮ ಅಂಗಡಿ ತೆರವು ವೇಳೆ ಸೀಮೆಎಣ್ಣೆ ಸುರಿದುಕೊಂಡು ನ್ಯಾಯಾವಾದಿ ಹೈಡ್ರಾಮಾ

ಧಾರವಾಡ: ಹುಬ್ಬಳ್ಳಿ-ಧಾರವಾಡ ಸೂಪರ್ ಮಾರುಕಟ್ಟೆಯಲ್ಲಿ ಅಕ್ರಮ ಅಂಗಡಿ ತೆರವುಗೊಳಿಸುವ ವೇಳೆ ನ್ಯಾಯವಾದಿಯೊಬ್ಬ ತನ್ನ ಮೇಲೆ ಸೀಮೆಎಣ್ಣೆ ಸುರಿದುಕೊಂಡಿದ್ದಲ್ಲದೇ ಎಸಿಪಿ ಮೇಲೆಯೂ ಎರಚುವ ಮೂಲಕ ಭಾರೀ ಹೈಡ್ರಾಮಾ ಮಾಡಿದ ಘಟನೆಯೊಂದು ನಡೆದಿದೆ.

ಗುರುವಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಧಾರವಾಡ ನಗರದ ಸೂಪರ್ ಮಾರುಕಟ್ಟೆಗೆ ಅಕ್ರಮ ಅಂಗಡಿ ತೆರವು ಕಾರ್ಯಾಚರಣೆಗೆ ಬಂದಿದ್ದರು. ಈ ವೇಳೆ ಜೆಸಿಬಿ ತಂದು ಅಂಗಡಿ ತೆರವು ಮಾಡುತಿದ್ದಂತೆಯೇ ಮಧ್ಯಪ್ರವೇಶ ಮಾಡಿದ ನ್ಯಾಯವಾದಿ ಎಂ.ಎಂ. ಚೌಧರಿ, ತನ್ನ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಅಂಗಡಿ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದಾರೆ.

ಈ ವೇಳೆ ಸ್ಥಳದಲ್ಲಿದ್ದ ಎಸಿಪಿ ಅನುಷಾ ಅವರ ಮೇಲೂ ಸೀಮೆಎಣ್ಣೆ ಎರಚಿದ ನ್ಯಾಯವಾದಿ ಚೌಧರಿಯನ್ನು ಪೊಲೀಸರು ತಕ್ಷಣ ವಶಕ್ಕೆ ಪಡೆದಿದ್ದಾರೆ. ಸದ್ಯ ಶಹರ ಪೊಲೀಸ್ ಠಾಣೆಯಲ್ಲಿ ಚೌಧರಿ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೂಪರ್ ಮಾರುಕಟ್ಟೆಯ ಅಂಗಡಿಗಳ ನ್ಯಾಯ, ನ್ಯಾಯಾಲಯದಲ್ಲಿ ನಡೆದಿದೆ. ಸದ್ಯ ನ್ಯಾಯಾವಾದಿ ಚೌಧರಿ ಕೂಡ ಪೊಲೀಸರು ಹೊಡೆದಿದ್ದಾರೆ ಎಂದು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲು ಮುಂದಾಗಿದ್ದಾರೆ. ಇದನ್ನೂ ಓದಿ:ನಮ್ಮನ್ನು ಬೆಂಬಲಿಸಿದ್ದರೆ ಸಿ.ಟಿ ರವಿ ದೊಡ್ಡವರಾಗುತ್ತಿದ್ದರು: ಎಂ.ಪಿ ಕುಮಾರಸ್ವಾಮಿ

Source: publictv.in Source link