ತಪ್ಪು ಲೆಕ್ಕ ತೋರಿಸಿ ಪಾಲಿಕೆಗೆ ಕೋಟಿ ಕೋಟಿ ವಂಚಿಸಿದ್ರಾ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್​?

ತಪ್ಪು ಲೆಕ್ಕ ತೋರಿಸಿ ಪಾಲಿಕೆಗೆ ಕೋಟಿ ಕೋಟಿ ವಂಚಿಸಿದ್ರಾ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್​?

ಬೆಂಗಳೂರು: ಸ್ಯಾಂಡಲ್​ವುಡ್​ನ ಹೆಸರಾಂತ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ತಪ್ಪು ಆಸ್ತಿ ಲೆಕ್ಕ ನೀಡಿ ಪಾಲಿಕೆಗೆ ಕೋಟಿ ಕೋಟಿ ತೆರಿಗೆಯನ್ನ ವಂಚಿಸಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.

blank

ಈ ಕುರಿತು ದಾಖಲೆಗಳ ಸಮೇತ ಪಾಲಿಕೆ ಆಯುಕ್ತರಿಗೆ ಎನ್​ಆರ್​ ರಮೇಶ್ ದೂರು ಕೂಡ ಕೊಟ್ಟಿದ್ದಾರೆ. ಜಾಲಹಳ್ಳಿ ಕ್ರಾಸ್​​ ಬಳಿಯಿರುವ ರಾಕ್ ಲೈನ್ ಮಾಲ್​ನಿಂದ ತೆರಿಗೆ ವಂಚನೆ ಮಾಡಲಾಗಿದೆ. 2012-13 ರಿಂದ ಆಸ್ತಿಯ ವಿಸ್ತೀರ್ಣದಲ್ಲಿ ತಪ್ಪು ಲೆಕ್ಕ ತೋರಿಸಿ ಕೋಟಿಗಟ್ಟಲೇ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಎನ್​ಆರ್ ರಮೇಶ್ ಆರೋಪಿಸಿದ್ದಾರೆ.

ರಾಕ್ ಲೈನ್ ಮಾಲ್​ನ 1,22,743 ಚದರ ಅಡಿ ವಿಸ್ತೀರ್ಣದ ಬದಲು 48,500 ಚದರ ಅಳತೆಯನ್ನು ಮಾತ್ರ ತೋರಿಸಿ 2012-13 ರಿಂದಲೂ 48500 ಚದರಡಿಗೆ ಮಾತ್ರ ತೆರಿಗೆ ಪಾವತಿ ಮಾಡಿ ಮೋಸ ಮಾಡಿದ್ದಾರೆ. 48500 ಚದರಡಿಗೆ ವಾರ್ಷಿಕ ಕೇವಲ 3,78,016 ರೂ. ಮಾತ್ರ ತೆರಿಗೆ ಪಾವತಿ ಮಾಡ್ತಿದ್ದ ರಾಕ್ ಲೈನ್ 74243 ಚದರಡಿ ವಿಸ್ತೀರ್ಣದ ಲೆಕ್ಕ ತೋರಿಸದೇ ಕೋಟಿಗಟ್ಟಲೇ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಎನ್​ಆರ್ ರಮೇಶ್ ದೂರು ನೀಡಿದ್ದಾರೆ.

blank

ಅಷ್ಟೇ ಅಲ್ಲದೇ ಟಾಪ್ 100 ತೆರಿಗೆ ವಂಚಕರ ಪಟ್ಟಿಯಲ್ಲೂ ರಾಕ್ ಲೈನ್ ಹೆಸರು ಕಂಡು ಬಂದಿಲ್ಲ ಎಂದು ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದು, ರಾಕ್​ಲೈನ್​ ತೆರಿಗೆ ವಂಚನೆ ಮಾಡಿರುವ ಕುರಿತ ದಾಖಲೆಗಳನ್ನ ಬಿಡುಗಡೆ ಮಾಡಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತರಿಗೆ ದಾಖಲೆಗಳ ಸಮೇತ ದೂರು ನೀಡಿದ್ದಾರೆ.

Source: newsfirstlive.com Source link