‘ಸಾರ್.. ಮಗನ ಕೈ ಕಟ್​ ಆಗಿದೆ..’ ‘ಅದಕ್ಕೆ ನಾನೇನ್​ ಮಾಡ್ಲಪ್ಪಾ’ ಅಂದ್ರು ಸಿದ್ದರಾಮಯ್ಯ

‘ಸಾರ್.. ಮಗನ ಕೈ ಕಟ್​ ಆಗಿದೆ..’ ‘ಅದಕ್ಕೆ ನಾನೇನ್​ ಮಾಡ್ಲಪ್ಪಾ’ ಅಂದ್ರು ಸಿದ್ದರಾಮಯ್ಯ

ಬೆಂಗಳೂರು: ಸಹಾಯ ಕೇಳಿ ಬಂದ ಕೈಕಟ್ ಆದ ಬಾಲಕನಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ನಾನೇನ್​ ಮಾಡ್ಲಪ್ಪ ಎಂದು ಖಾರವಾಗಿ ಪ್ರತಿಕ್ರಿಯಿಸಿರೋದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ನಗರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರ್ಯಕ್ರಮವೊಂದಕ್ಕೆ ತೆರಳುತ್ತಿರುವ ವೇಳೆ ಮುಂಗೈ ಕಟ್​ ಆದ ಬಾಲಕನ ತಂದೆ ಕಾರಿನಲ್ಲಿ ತೆರಳುತ್ತಿದ್ದ ಸಿದ್ದರಾಮಯ್ಯನವರ ಹತ್ತಿರ ಬಂದು.. ಸರ್​ ನನ್ನ ಮಗನ ಕೈ ಕಟ್​ ಆಗಿದೆ ಅನ್ನುವುದರೊಳಗೇ ಅದಕ್ಕೆ ‘ನಾನೇನ್​ ಮಾಡ್ಲಪ್ಪಾ’ ಎಂದು ಉತ್ತರಿಸಿ ಹೋಗಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗುತ್ತಿದ್ದು, ಮಾಜಿ ಸಿಎಂ ಅವರ ಈ ನಡೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ರಾಹುಲ್​ ಗಾಂಧಿ ಟ್ವಿಟರ್ ಅಮಾನತು: ‘ನಮ್ಮ ನಾಯಕ ರಾಹುಲ್​’ ಹೆಸರಿನಲ್ಲಿ ಅಭಿಯಾನ ಶುರು

Source: newsfirstlive.com Source link