ಪೊಲೀಸ್​​ ಕೆಲ್ಸ ಗಿಟ್ಟಿಸಿಕೊಳ್ಳಲು ‘ಕಿಲಾಡಿ ಕುಳ್ಳ’ರ ಖತರ್ನಾಕ್​ ಕರಾಮತ್ತು.. ಜೈಲು ಸೇರಿದ ಯುವಕರು..!

ಪೊಲೀಸ್​​ ಕೆಲ್ಸ ಗಿಟ್ಟಿಸಿಕೊಳ್ಳಲು ‘ಕಿಲಾಡಿ ಕುಳ್ಳ’ರ ಖತರ್ನಾಕ್​ ಕರಾಮತ್ತು.. ಜೈಲು ಸೇರಿದ ಯುವಕರು..!

ಬೆಳಗಾವಿ: ಪ್ರತಿಯೊಬ್ಬ ಯುವಕ ಕೂಡ ತಾನು ಪೊಲೀಸ್ ಆಗಬೇಕು, ಆ ಮೂಲಕ ಖಡಕ್ ಆಫೀಸರ್ ಆಗಬೇಕು ಎನ್ನುವ ಕನಸ್ಸು ಕಂಡಿರುತ್ತಾರೆ. ಹೀಗಾಗಿ ಇಲಾಖೆಯಲ್ಲಿ ಹುದ್ದೆ ಗಿಟ್ಟಿಸಿಕೊಳ್ಳಲು ವಿದ್ಯಾವಂತ ಯುವಕರು ನಾನಾ ಕಸರತ್ತು ಮಾಡಿ ಸಿದ್ಧತೆ ಮಾಡುತ್ತಾರೆ. ಆದರೆ ಇಲ್ಲಿಬ್ಬರು ಯುವಕರು ಹೇಗಾದ್ರು ಮಾಡಿ ಪೊಲೀಸ್ ಕೆಲಸ ಗಿಟ್ಟಿಸಿಕೊಳ್ಳಲೇ ಬೇಕು ಅಂತಾ ಖತರ್ನಾಕ್ ಪ್ಲಾನ್ ಮಾಡಿ ಕಂಬಿ ಹಿಂದೆ ಸೇರಿರುವ ಘಟನೆ ಕುಂದಾನಗರಿಯಲ್ಲಿ ನಡೆದಿದೆ.

blank

ಅಂದ ಹಾಗೇ.. ಈ ಫೋಟೋದಲ್ಲಿರುವ ಟೇಬಲ್ ಮೇಲೆ ಹೀಗೆ ಒಂದು ವಿಗ್ ಮೂರು ತರ್ಮಾಕುಲ್ ತುಣುಕುಗಳನ್ನು ನೋಡಿ. ಇದೇನಪ್ಪಾ ಯುವಕರ ಖತರ್ನಾಕ್​ ಪ್ಲಾನ್​ ಅಂತ ಹೇಳ್ತೀವಿ ಅಂತಾ ಇದ್ಯಾವುದೋ ನಾಟಕ ಕಂಪನಿಯ ಡ್ರಾಮಾಕ್ಕೆ ತಯಾರಿ ಮಾಡಿಕೊಳ್ಳುತ್ತಿರುವುದನ್ನು ತೋರಿಸುತ್ತಿದ್ದಾರೆ ಎಂದು ಕೊಳ್ಳಬೇಡಿ. ಈ ವಿಗ್ ತರ್ಮಾಕೂಲ್ ಹಿಂದೆ ಇಬ್ಬರ ದೊಡ್ಡ ಕಹಾನಿಯೇ ಇದೆ.

ಅಂದಹಾಗೇ.. ಪೊಲೀಸ್​ ಕೆಲಸ ಗಿಟ್ಟಿಸಿಕೊಳ್ಳಲು ಖತರ್ನಾಕ್​ ಕೆಲಸ ಪ್ಲಾನ್​ ಮಾಡಿ ಸಿಕ್ಕಿಬಿದ್ದಿರುವ ಯುವಕರ ಹೆಸರು ಉವೇಶ್ (28), ಬಾಳೇಶ್. ಈ ಇಬ್ಬರು ಯುವಕರು ಪಿಎಸ್​ಐ ಆಗುವ ಕನಸು ಹೊತ್ತು ಬೆಳಗಾವಿಯಲ್ಲಿ ಕಳೆದ ಮೂರು ನಾಲ್ಕು ದಿನದಿಂದ ನಡೆಯುತ್ತಿರುವ ಪಿಎಸ್‌ಐ ನೇಮಕಾತಿಯ ದೈಹಿಕ ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಲು ಅಗತ್ಯವಿರುವ ಎತ್ತರ ಇಲ್ಲದ ಕಾರಣ ಪರೀಕ್ಷೆಯಲ್ಲಿ ಪಾಸ್​ ಆಗಲು ಖತರ್ನಾಕ್​ ಪ್ಲಾನ್​ ಮಾಡಿದ್ದರು.

ಇಬ್ಬರು ಆರೋಪಿಗಳು ದೈಹಿಕ ಪರೀಕ್ಷೆ ವೇಳೆ ಎತ್ತರ ಹೆಚ್ಚಿಸಿಕೊಳ್ಳಲು ತರ್ಮಾಕೋಲ್ ಕಟ್ ಮಾಡಿ ತಮ್ಮ ತಲೆಯ ಮೇಲೆ ಇಟ್ಟುಕೊಂಡು ಅದರ ಮೇಲೆ ವಿಗ್ ಹಾಕಿಕೊಂಡು ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಯುವಕರ ಬಗ್ಗೆ ಅನುಮಾನಗೊಂಡ ಪೊಲೀಸರು ಪರೀಕ್ಷೆ ನಡೆಸಿದ ವೇಳೆ ಆರೋಪಿಗಳ ಖತರ್ನಾಕ್ ಪ್ಲಾನ್​ ಬೆಳಕಿಗೆ ಬಂದಿದ್ದು, ಪೊಲೀಸರೇ ಕ್ಷಣ ಕಾಲ ಶಾಕ್​ ಆಗಿದ್ದರು. ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ದೈಹಿಕ ಪರೀಕ್ಷೆ ಪಾಸಾಗಲು ಕೇವಲ ಮೂರು ಇಂಚು ಎತ್ತರ ಕಡಿಮೆ ಇತ್ತು. ಹೀಗಾಗಿ ಮೂರು ಇಂಚು ಎತ್ತರವಾಗಲು ಈ ರೀತಿ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಘಟನೆ ಕುರಿತಂತೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಮತ್ತು ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Source: newsfirstlive.com Source link