ರಾಜ್ಯ ಕಾಂಗ್ರೆಸ್​ನ ಯುವ ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಕ್ಷ ರಾಮಯ್ಯ

ರಾಜ್ಯ ಕಾಂಗ್ರೆಸ್​ನ ಯುವ ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಕ್ಷ ರಾಮಯ್ಯ

ಬೆಂಗಳೂರು: ರಾಜ್ಯ ಕಾಂಗ್ರೆಸ್​ನ ಯುವ ಘಟಕದ ಅಧ್ಯಕ್ಷರಾಗಿ ರಕ್ಷ ರಾಮಯ್ಯ ಅವರು ಇಂದು ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡಿದರು.

ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್​ ಅವರು ರಕ್ಷ ರಾಮಯ್ಯಗೆ ಧ್ವಜ ನೀಡುವ ಮೂಲಕ ಅಧಿಕಾರವನ್ನ ನೀಡಿದರು. ಈ ವೇಳೆ ಮಾಜಿ ಸಿಎಂ ಸಿದ್ದಾರಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಚಿವರಾದ ಸೀತಾರಾಮ್, ಹೆಚ್​ ಆಂಜನೇಯ ಸೇರಿದಂತೆ ರಾಜ್ಯದ ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

blank

ಅಧಿಕಾರ ಸ್ವೀಕರಿಸಿ ಮಾತನಾಡಿದ ರಕ್ಷ ರಾಮಯ್ಯ.. ಕೋವಿಡ್ ಸಮಯದಲ್ಲಿ ಯೂತ್ ಕಾಂಗ್ರೆಸ್ ಸಾಕಷ್ಟು ಕೆಲಸ ಮಾಡಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವೈಫಲ್ಯ ಸಾಬೀತಾಗಿದೆ. 25 ಜನ ಸಂಸದರಿದ್ದಾರೆ. ಕಾಂಗ್ರೆಸ್ ಕುಟುಂಬದ ರೀತಿ ಕೆಲಸ ಮಾಡ್ತಿದೆ.

blank

ಕೊವಿಡ್ ಸಮಯದಲ್ಲಿ ಬೆಡ್ ವಿಚಾರದಲ್ಲೂ ಹಗರಣ ಮಾಡಿದ್ದಾರೆ. ದ್ವೇಷದ ರಾಜಕಾರಣಕ್ಕೆ ಕೊವಿಡ್ ಅಲೆ ಶುರುವಾಗಿದೆ. ಮೋದಿ ಅಲೆ ದೇಶದಲ್ಲಿಲ್ಲ, ಕೋವಿಡ್ ಅಲೆ ಇದೆ. IT, ED ಎಲ್ಲಾ ಪರ್ಸನಲ್ ಪ್ರಾಪರ್ಟಿ ಆಗಿವೆ. ಆದಷ್ಟು ಬೇಗ ಈ ಸರ್ಕಾರವನ್ನು ಕಿತ್ತು ತಗೆಯಬೇಕು. ಡಿಜಿಟಲ್ ಇಂಡಿಯಾ ಅಂತಾರೆ ಆದರೆ ಯಾವುದೇ ಡಿಜಿಟಲ್ ಆಗಿಲ್ಲ ಎಂದರು.

Source: newsfirstlive.com Source link