‘ಸ್ವಲ್ಪ ಬುದ್ಧಿ ಖರ್ಚು ಮಾಡಿದಿದ್ದರೆ..’ ರಾಜ್ಯ ಬಿಜೆಪಿಯಲ್ಲೀಗ ಹೊಸ ಆತಂಕದ ಚರ್ಚೆ..!

‘ಸ್ವಲ್ಪ ಬುದ್ಧಿ ಖರ್ಚು ಮಾಡಿದಿದ್ದರೆ..’ ರಾಜ್ಯ ಬಿಜೆಪಿಯಲ್ಲೀಗ ಹೊಸ ಆತಂಕದ ಚರ್ಚೆ..!

ಬೆಂಗಳೂರು: ರಾಜ್ಯದಲ್ಲಿ ಶುರುವಾಗಿದ್ದ ನಾಯಕತ್ವ ಬದಲಾವಣೆ ಕೂಗಿಗೆ ಎಚ್ಚೆತ್ತಿದ್ದ ಬಿಜೆಪಿ ಹೈಕಮಾಂಡ್​ ಕೊನೆಗೂ ಬಿ.ಎಸ್.ಯಡಿಯೂರಪ್ಪ ಅವರನ್ನ ಕಳಗೆ ಇಳಿಸಿ, ಆ ಜಾಗಕ್ಕೆ ಬಸವರಾಜ ಬೊಮ್ಮಾಯಿ ಅವರನ್ನ ಕೂರಿಸಿತು. ಸಿಎಂ ಆದ ಹೊಸಥರದಲ್ಲೇ ಬೊಮ್ಮಾಯಿ ಕ್ಯಾಬಿನೆಟ್ ಕೂಡ ರಚನೆ ಮಾಡಿದ್ದಾರೆ. ಸಚಿವಾಕಾಂಕ್ಷಿಗಳ ಅಸಮಾಧಾನ ಹಾಗೂ ಖಾತೆ ಹಂಚಿಕೆಯಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯಗಳ ಜೊತೆ ಬಿಜೆಪಿಗೆ ಇದೀಗ ಮತ್ತೊಂದು ಆತಂಕ ಎದುರಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯರ ಹುಟ್ಟುಹಬ್ಬ ಜಮೀರ್​ ಪಾಲಿಗೆ ಹ್ಯಾಪಿ ಟೈಂ; ಗುರು-ಶಿಷ್ಯರ ಹೊಸ ಬೆಸುಗೆ

ವೋಟ್ ಬ್ಯಾಂಕ್ ಕಳೆದುಕೊಳ್ಳುವ ಆತಂಕ
ಅದುವೇ ಸಚಿವ ಸಂಪುಟದಲ್ಲಿ 13 ಜಿಲ್ಲೆಗಳಿಗೆ ಪ್ರಾತಿನಿಧ್ಯತೆ ನೀಡದಿರೋದು. ಹೌದು.. 2023ರ ಚುನಾವಣೆಯನ್ನ ಎದುರು ನೋಡುತ್ತಿರುವ ಬಿಜೆಪಿಗೆ ಬೊಮ್ಮಾಯಿ ಅವರು ರಚಿಸಿರುವ ಸಂಪುಟ ಕೊಂಚ ಹೊಡೆತಕೊಡುವ ಸಾಧ್ಯತೆ ಇದೆ. ಯಾಕಂದರೆ ಹಳೆಯ ಮೈಸೂರು ಭಾಗಕ್ಕೆ ಬರುವ ಚಾಮರಾಜನಗರ, ಮೈಸೂರು, ಕೊಡಗು, ರಾಮನಗರ, ಹಾಸನ, ಕೋಲಾರ ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಹೀಗಾಗಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ವೋಟ್ ಬ್ಯಾಂಕ್ ಕಳೆದುಕೊಳ್ಳುವ ಆತಂಕ ಎದುರಾಗಿದೆ.

blank

ಇದನನೂ ಓದಿ: ಬೊಮ್ಮಾಯಿ-ದೇವೇಗೌಡ ಭೇಟಿ; ಸಿಎಂಗೆ ಸಂದೇಶ, ಪ್ರೀತಂಗೌಡಗೆ ಸಿಟಿ ರವಿ ಪಾಠ

ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಜಿಲ್ಲೆಗಳಿಗೂ ಪ್ರಾತಿನಿಧ್ಯತೆ ನೀಡಬೇಕಾಗಿದೆ. ಸದ್ಯ ರಾಜ್ಯದ 13 ಜಿಲ್ಲೆಗಳಿಗೆ ಪ್ರಾತಿನಿಧ್ಯತೆ ಸಿಕ್ಕಿಲ್ಲ. ಈ ಜಿಲ್ಲೆಗಳಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಿಯೇ ಇಲ್ಲ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ ಜಿಲ್ಲೆಗಳಿಗೆ ಸಂಪುಟದಲ್ಲಿ ಸ್ಥಾನಮಾನ ಸಿಕ್ಕಿದೆ. ಆದರೆ ಸಿಕ್ಕಿರುವ ಸ್ಥಾನಮಾನಕ್ಕೆ ಸಂತಸ ಪಡುವ ಪರಿಸ್ಥಿತಿಯಲ್ಲಿ ರಾಜ್ಯ ಬಿಜೆಪಿ ಇಲ್ಲ.

ಬಿಜೆಪಿಯಲ್ಲಿನ ಟಾಕ್ ಏನು..?
ಕ್ಯಾಬಿನೆಟ್ ರಚನೆಗೂ ಮುನ್ನಾ ಸ್ವಲ್ಪ ಬುದ್ಧಿ ಖರ್ಚು ಮಾಡಿದ್ರೆ, ಹಳೆಯ ಮೈಸೂರು ಭಾಗದ ವೋಟ್ ಬ್ಯಾಂಕ್ ಸಂಪೂರ್ಣವಾಗಿ ಬಿಜೆಪಿ ತನ್ನ ತೆಕ್ಕೆಯಲ್ಲಿಟ್ಟುಕೊಳ್ಳಬಹುದಿತ್ತು. ಜೆಡಿಎಸ್‌ ಹಳೆಯ ಮೈಸೂರು ಭಾಗದಲ್ಲಿ ಒಂದು ಹಂತದಲ್ಲಿ ಎಡವಿತ್ತು. ಕಾಂಗ್ರೆಸ್‌ ಕೂಡ ವೋಟ್ ಬ್ಯಾಂಕ್ ಕಳೆದುಕೊಂಡಿತ್ತು. ಅಂದ್ಹಾಗೆ ಹಳೆಯ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

blank

ಈಗ ಹೊಸದಾಗಿ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯಾದ ಕಾರಣ ಸ್ವಲ್ಪ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ರೆ, ಒಕ್ಕಲಿಗ ಸಮುದಾಯದ ಮತಗಳನ್ನು ಸಲೀಸಾಗಿ ಸೆಳೆಯಬಹುದಾಗಿತ್ತು. ಆದರೆ ಹಳೆಯ ಮೈಸೂರು ಭಾಗದಲ್ಲಿ ಬಿಜೆಪಿ ಮತ ಬ್ಯಾಂಕ್ ಮರೆತಿದೆ ಎಂಬ ಚರ್ಚೆ ಬಿಜೆಪಿಯಲ್ಲಿ ಶುರುವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ಮರುನಾಮಕರಣಕ್ಕೆ ಆಗ್ರಹಿಸಿದ ಮತ್ತೊಬ್ಬ ನಾಯಕ

Source: newsfirstlive.com Source link