ಸತೀಶ್​ ರೆಡ್ಡಿ ಕಾರು ಧ್ವಂಸ ಪ್ರಕರಣ: ಕಿಡಿ ಹಿಂದೆ ಬೆಡ್​ ಬ್ಲಾಕಿಂಗ್​ ದಂಧೆ?

ಸತೀಶ್​ ರೆಡ್ಡಿ ಕಾರು ಧ್ವಂಸ ಪ್ರಕರಣ: ಕಿಡಿ ಹಿಂದೆ ಬೆಡ್​ ಬ್ಲಾಕಿಂಗ್​ ದಂಧೆ?

ಬೆಂಗಳೂರು: ಮೊನ್ನೆ ಬೊಮ್ಮನಳ್ಳಿ ಬಿಜೆಪಿ ಶಾಸಕ ಸತೀಶ್​ ರೆಡ್ಡಿಗೆ ಸಂಬಂಧಿಸಿದ ಕಾರುಗಳಿಗೆ ಬೆಂಕಿ ಪ್ರಕರಣ ಈಗ ರೋಚಕ ತಿರುವುಗಳಿಗೆ ಕಾರಣವಾಗುತ್ತಿದ್ದು ಈ ಕೃತ್ಯದ ಹಿಂದೆ ಈ ಮೊದಲು ನಡೆದಿದ್ದ ಬೆಡ್ ಬ್ಲಾಕಿಂಗ್ ದಂಧೆ ಬಯಲು ಮಾಡಿದ್ದೆ ಕಾರಣ ಎನ್ನಲಾಗ್ತಿದೆ.

ಹೌದು ಕೋವಿಡ್​ ಸಮಯದಲ್ಲಿ ಸಂಸದ ತೇಜಸ್ವಿ‌ ಸೂರ್ಯ ಮತ್ತು ಶಾಸಕ‌ ಸತೀಶ್ ರೆಡ್ಡಿ ನೇತೃತ್ವದಲ್ಲಿ ನಗರದಲ್ಲಿ ನಡೆಯುತ್ತಿದ್ದ ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆದಿದ್ದರು. ಈ‌ ದಂಧೆಯಲ್ಲಿ ಸತೀಶ್ ರೆಡ್ಡಿ ಆಪ್ತ ಬಾಬು ಸೇರಿದಂತೆ ಹಲವರ ಬಂಧನ ಆಗಿತ್ತು. ಈ‌ ದಂಧೆಯಲ್ಲಿ ಸತೀಶ್ ರೆಡ್ಡಿ ಕೂಡ ಇದ್ದರು ಅನ್ನೋ ಆರೋಪ‌ ಕೂಡ ಕೇಳಿಬಂದಿತ್ತು.. ಈ ಪ್ರಕರಣದಲ್ಲಿ ಹೆಸರೂ ಕೇಳಿ ಬಂದಿದ್ದರೂ ಕೂಡ ಶಾಸಕ ಆರೋಪ ತಳ್ಳಿ ಹಾಕಿದ್ದರು.

blank

ಇದನ್ನೂ ಓದಿ: ಸತೀಶ್​ ರೆಡ್ಡಿ ಕಾರು ಧ್ವಂಸ ಪ್ರಕರಣ: 50-60 ಸಿಸಿಟಿವಿ ವಿಡಿಯೋ ಆಧರಿಸಿ ಆರೋಪಿಗಳ ಬೆನ್ನತ್ತಿದ CCB

ಆದರೆ ಸತೀಶ್​ ರೆಡ್ಡಿ ಬಚಾವ್​ ಆಗಲು ತಮ್ಮ ಆಪ್ತನನ್ನು ಜೈಲಿಗೆ ಕಳಿಸಿದ್ದರು ಎನ್ನುವ ಆರೋಪ ಕೇಳಿ ಬಂದಿದ್ದು, ಆಪ್ತನನ್ನೇ ಜೈಲಿಗೆ ಕಳಿಸಿದ್ದಕ್ಕಾಗಿ ಆಪ್ತನ ಸಂಬಂಧಿಕರಿಂದಲೇ ಈ ಕೃತ್ಯ ಮಾಡಿಸಿರೋ ಶಂಕೆ ವ್ಯಕ್ತವಾಗಿದೆ ಎಂದು ಹೇಳಲಾಗ್ತಿದೆ.

ಸದ್ಯ ತನಿಖೆ ಆರಂಭಿಸಿರುವ ಪೊಲೀಸರು ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಆಪ್ತರ ಕೈವಾಡ ಇರೋ ಶಂಕೆ, ಮತ್ತು ಬೇಗೂರು ಕೆರೆಯ ಶಿವನ‌ ವಿಗ್ರಹ ವಿಚಾರವಾಗಿಯೂ ನಡೆದ ಘಟನೆ ವಿಚಾರವಾಗಿ ಈ ಎರಡು ಆಯಾಮದಲ್ಲಿ ತನಿಖೆ ನಡೆಸುತ್ತಿರುವದಾಗಿ ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿಯ ಫಾರ್ಚೂನರ್ ಸೇರಿ 2 ಕಾರಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು

Source: newsfirstlive.com Source link