ಸ್ವಾತಂತ್ರ್ಯ ದಿನಾಚರಣೆಗೆ ಮುನ್ನವೇ ದೇಶದಲ್ಲಿ ಮಲ್ಟಿ ಟೆರರ್ ಅಟ್ಯಾಕ್​​ ಸಾಧ್ಯತೆ; ಕಟ್ಟೆಚ್ಚರದ ಸೂಚನೆ

ಸ್ವಾತಂತ್ರ್ಯ ದಿನಾಚರಣೆಗೆ ಮುನ್ನವೇ ದೇಶದಲ್ಲಿ ಮಲ್ಟಿ ಟೆರರ್ ಅಟ್ಯಾಕ್​​ ಸಾಧ್ಯತೆ; ಕಟ್ಟೆಚ್ಚರದ ಸೂಚನೆ

ನವದೆಹಲಿ: ದೇಶಾದ್ಯಂತ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಭಾರೀ ತಯಾರಿ ನಡೆಯುತ್ತಿದೆ. ಮಾರಕ ಕೊರೋನಾ ಮೂರನೇ ಅಲೆ ನಡುವೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಸ್ವಾತಂತ್ರ್ಯ ದಿನಾಚರಣೆ ಮಾಡುವಂತೆ ಎಲ್ಲಾ ರಾಜ್ಯಗಳಿಗೂ ಕೇಂದ್ರ ಸರ್ಕಾರ ಆದೇಶಿಸಿದೆ. ಹೀಗಿರುವಾಗಲೇ ಕೇಂದ್ರ ಗುಪ್ತಚರ ಸಂಸ್ಥೆಗಳು ದೇಶದಲ್ಲಿ ಮಲ್ಟಿ ಟೆರರ್​​​​ ಅಟ್ಯಾಕ್ ಸಾಧ್ಯತೆ ಇದೆ ಎಂದು​​​​ ಎಚ್ಚರಿಕೆ ನೀಡಿವೆ. ದೆಹಲಿ ಸೇರಿದಂತೆ ಎಲ್ಲಾ ರಾಜ್ಯಗಳಿಗೆ ಎಚ್ಚರಿಕಾ ಸಂದೇಶ ರವಾನಿಸಿರುವ ಕೇಂದ್ರ ಗುಪ್ತಚರ ಸಂಸ್ಥೆಗಳು, ಜೈಶ್ ಮತ್ತು ಲಷ್ಕರ್ ಭಯೋತ್ಪಾದಕ ಗುಂಪುಗಳು ದೇಶದ ಮೇಲೆ ದಾಳಿ ನಡೆಸಬಹುದು ಎಂದು ಹೇಳಿದೆ.

ದೆಹಲಿ ಪೊಲೀಸ್, ಜಿಆರ್‌ಪಿ, ಎಲ್ಲಾ ರಾಜ್ಯಗಳ ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳಿಗೆ ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಭಯೋತ್ಪಾದಕರು ಪ್ರಮುಖ ಭದ್ರತಾ ಸ್ಥಾಪನೆಗಳು, ಭಾರತದ ಯೋದರ ಮೇಲೆ ದಾಳಿ ನಡೆಸಬಹುದು ಎಂದು ತಿಳಿಸಿವೆ. ಸ್ವಾತಂತ್ರ್ಯ ದಿನಾಚರಣೆಯಂದೇ ಭಯೋತ್ಪಾದಕರು ಅತ್ಯಾಧುನಿಕ ಐಇಡಿಗಳನ್ನು ಬಳಸಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿವೆ.

ಭಯೋತ್ಪಾದಕರು ಅತ್ಯಾಧುನಿಕ ಐಇಡಿ ಬಳಸಿ ಸಾರ್ವಜನಿಕ ಸ್ಥಳಗಳಲ್ಲಿ ಸ್ಪೋಟ ನಡೆಸುತ್ತಾರೆ ಎಂದು ಎಲ್ಲಾ ಏಜೆನ್ಸಿಗಳಿಗೆ ವಿಶೇಷ ಎಚ್ಚರಿಕೆ ನೀಡಲಾಗಿದೆ. ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡು ಬಂದಲ್ಲಿ ಎಚ್ಚರಿಕೆಯಿಂದ ಇರಬೇಕು. ಅತ್ಯಾಧುನಿಕ ಐಇಡಿ ಪತ್ತೆ ಹಚ್ಚಲು ಮೆಟಲ್ ಡಿಟೆಕ್ಟರ್​​ಗೂ ಸಾಧ್ಯವಿಲ್ಲ. ಹಾಗಾಗಿ ಯಾವುದೇ ಅನಾಹುತವಾಗದಂತೆ ಪೊಲೀಸರು ವಿಶೇಷ ಕಾಳಜಿ ವಹಿಸಬೇಕು ಎಂದು ನಿರ್ದೇಶಿಸಲಾಗಿದೆ.

ಇದನ್ನೂ ಓದಿ: ಧಂ ಇದ್ರೆ ನಮ್​​ ಅಕೌಂಟೂ​ ಲಾಕ್ ಮಾಡಿ ಎಂದ ‘ಕೈ’ ನಾಯಕರ ಟ್ವಿಟರ್ ಅಕೌಂಟ್ ಲಾಕ್; ಮುಂದ?

ಲಷ್ಕರ್ ಗುಂಪು ಜಮ್ಮು ಮತ್ತು ಕಾಶ್ಮೀರದ ಮೂಲಕ ಭಾರತಕ್ಕೆ ನುಸುಳಲು ಸಿದ್ಧವಾಗಿದೆ. ಜೈಷ್-ಎ-ಮೊಹಮ್ಮದ್​​ ಭಯೋತ್ಪಾದಕ ಸಂಘಟನೆ ಈಗಾಗಲೇ ಪಾಕ್​​ ಆಕ್ರಮಿತ ಕಾಶ್ಮೀರದಲ್ಲಿ ಸಿದ್ಧತೆ ನಡೆಸಿಕೊಂಡಿದೆ ಎಂದು ತಿಳಿದು ಬಂದಿದೆ.

Source: newsfirstlive.com Source link