ಬೊಮ್ಮಾಯಿ ಹಚ್ಚಿದ ಮುಲಾಮಿಗೆ ಅರಳಿತು ‘ಆನಂದ’.. ಅಂಥದ್ದು ಏನ್ ಮಾಡಿದ್ರು CM..?

ಬೊಮ್ಮಾಯಿ ಹಚ್ಚಿದ ಮುಲಾಮಿಗೆ ಅರಳಿತು ‘ಆನಂದ’.. ಅಂಥದ್ದು ಏನ್ ಮಾಡಿದ್ರು CM..?

ಬೆಂಗಳೂರು: ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನಗೊಂಡಿದ್ದ ಆನಂದ್​​ ಸಿಂಗ್, ರಾಜೀನಾಮೆಗೂ ಮುಂದಾಗಿ ಈಗ ಫುಲ್ ಸೈಲೆಂಟ್ ಆಗಿದ್ದಾರೆ. ಪ್ರಮುಖ ಖಾತೆಗೆ ಬೇಡಿಕೆ ಇಟ್ಟಿದ್ದ ಆನಂದ್ ಸಿಂಗ್ ಅವರು ಯಾಕೆ ಸುಮ್ಮನಾಗಿಬಿಟ್ಟರು? ಅನ್ನೋ ಪ್ರಶ್ನೆ ರಾಜಕೀಯ ವಲಯದಲ್ಲಿ ಶುರುವಾಗಿದೆ. ಸಿಎಂ ಬೊಮ್ಮಾಯಿ ಅವರು ಮಾಡಿದ ರಾಜಕೀಯ ತಂತ್ರವಾದರೂ ಏನು ಅನ್ನೋ ಪ್ರಶ್ನೆ ಎದ್ದಿದೆ.

blank

ಸಿಎಂ ಹಚ್ಚಿದ ಮುಲಾಮು ಏನು..?
ಬಳ್ಳಾರಿಯಿಂದ ಆನಂದ್​ ಸಿಂಗ್ ಅವರನ್ನ ಕರೆಸಿಕೊಂಡಿದ್ದ ಸಿಎಂ ಬೊಮ್ಮಾಯಿ ಒಂದಿಷ್ಟು ಭರವಸೆಗಳನ್ನ ನೀಡಿದ್ದಾರೆ ಎನ್ನಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಖಾತೆ ಬದಲಾವಣೆ ಅಸಾಧ್ಯ. ಖಾತೆ ಬದಲಾವಣೆ ವಿಚಾರದಲ್ಲಿ ದೆಹಲಿ ವರಿಷ್ಠರ ಗಮನಕ್ಕೆ ತರುವುದು ಅನಿವಾರ್ಯವಾಗಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಲ್ಲಿ, ತಮ್ಮ ಉಸ್ತುವಾರಿ ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡಿ. ಆಗಸ್ಟ್ 15ರ ಬಳಿಕ ತಮ್ಮ ವಿಚಾರವನ್ನು ದೆಹಲಿ ವರಿಷ್ಠರ ಗಮನಕ್ಕೆ ತರಲಾಗುವುದು. ಖಂಡಿತ ತಮಗಿಷ್ಟದ ಖಾತೆ ಸಿಗುವಂತೆ ಪ್ರಾಮಾಣಿಕ ಪ್ರಯತ್ನ ಮಾಡ್ತೀವಿ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

blank

ಮತ್ತೆ ಸಿಡಿದೇಳುತ್ತಾರಾ ಆನಂದ್ ಸಿಂಗ್
ಸದ್ಯದ ಪರಿಸ್ಥಿತಿಯಲ್ಲಿ ಗೊಂದಲ ಬೇಡ, ರಾಜೀನಾಮೆ ಅಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಜೊತೆ ನಾವಿದ್ದೇವೆ, ಪಕ್ಷದ ವರಿಷ್ಠರು, ಯಡಿಯೂರಪ್ಪ ಕೂಡ ಇದ್ದಾರೆ ಎಂದು ಆನಂದ್​ಗೆ ವಿಶ್ವಾಸ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಮುಖ್ಯಮಂತ್ರಿ ಹಾಗೂ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರ ಮಾತಿಗೆ ಒಪ್ಪಿಗೆ ಸೂಚಿಸಿ ಸುಮ್ಮನಾಗಿದ್ದಾರೆ ಎನ್ನಲಾಗಿದೆ

ಇದನ್ನೂ ಒದಿ: ಕೃಷ್ಣ ಮಠಕ್ಕೆ ಭೇಟಿ ನೀಡಿ ಪರ್ಯಾಯ ಶ್ರೀಗಳ ಆಶೀರ್ವಾದ ಪಡೆದ ಸಿಎಂ ಬೊಮ್ಮಾಯಿ

ಮೂಲಗಳ ಪ್ರಕಾರ ಆಗಸ್ಟ್ 15ರ ಬಳಿಕ ಖಾತೆ ಬದಲಾವಣೆಯ ನಿರೀಕ್ಷೆಯಲ್ಲಿ ಆನಂದ್ ಸಿಂಗ್ ಇದ್ದಾರೆ. ಅಲ್ಲದೆ ಹೊಸ ಖಾತೆ ಸಿಗುವ ತನಕ ಪ್ರವಾಸೋದ್ಯಮ ಇಲಾಖೆಯಲ್ಲೇ ಮುಂದುವರಿಯುವ ನಿರ್ಧಾರ ಮಾಡಿ ವಿವಾದಕ್ಕೆ ತೆರೆ ಎಳೆದಿದ್ದಾರೆ ಅಂತಾ ಹೇಳಲಾಗುತ್ತಿದೆ.

ಇದನ್ನೂ ಓದಿ: ಬೊಮ್ಮಾಯಿ-ದೇವೇಗೌಡ ಭೇಟಿ; ಸಿಎಂಗೆ ಸಂದೇಶ, ಪ್ರೀತಂಗೌಡಗೆ ಸಿಟಿ ರವಿ ಪಾಠ

Source: newsfirstlive.com Source link