ಟ್ವಿಟರ್​​ ಬಿಡಿ ರಾಹುಲ್​​ ಗಾಂಧಿಗೆ ನೆಲದ ಕಾನೂನು ಗೌರವಿಸೋದೂ ಗೊತ್ತಿಲ್ಲ -ತೇಜಸ್ವಿ ಸೂರ್ಯ

ಟ್ವಿಟರ್​​ ಬಿಡಿ ರಾಹುಲ್​​ ಗಾಂಧಿಗೆ ನೆಲದ ಕಾನೂನು ಗೌರವಿಸೋದೂ ಗೊತ್ತಿಲ್ಲ -ತೇಜಸ್ವಿ ಸೂರ್ಯ

ನವದೆಹಲಿ: ಇತ್ತೀಚೆಗೆ ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಬಾಲಕಿಯ ಮನೆಗೆ ಕಾಂಗ್ರೆಸ್​​ ವರಿಷ್ಠ ರಾಹುಲ್​​ ಗಾಂಧಿ ಭೇಟಿ ನೀಡಿದ್ದರು. ಈ ಕುರಿತು ತನ್ನ ಬಾಲಕಿಯ ಪೋಷಕರ ಜತೆಗಿನ ಚಿತ್ರ ಹಂಚಿಕೊಂಡು ಟ್ವೀಟ್​​ ಮಾಡಿದ್ದರು. ಇದರ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಟ್ವಿಟರ್​​ಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿತ್ತು. ಇದರ ಬೆನ್ನಲ್ಲೇ ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ ಬಾಲಕಿಯ ಕುರಿತು ಮಾಹಿತಿ ನೀಡಿ ಪೋಕ್ಸೋ ಕಾಯ್ದೆ ಉಲ್ಲಂಘಿಸಿ ಟ್ವೀಟ್​​ ಮಾಡಿದ್ದಾರೆ ಎಂದು ರಾಹುಲ್​​ ಗಾಂಧಿ ಖಾತೆಯನ್ನು ಸಸ್ಪೆಂಡ್​​ ಮಾಡಿತ್ತು. ಈ ವಿಚಾರವಾಗಿ ಈಗ ರಾಜಕೀಯ ನಾಯಕರು ಪರ-ವಿರೋಧ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ, ರಾಹುಲ್​​​​ ಗಾಂಧಿ ಆ್ಯಕ್ಟೀವ್​​​ ಆಗಿ ಇದ್ದದ್ದೇ ಟ್ವಿಟರ್​​​ನಲ್ಲಿ ಮಾತ್ರ. ಈಗ ಇದನ್ನು ಬಂದ್​​​​ ಮಾಡಲಾಗಿದೆ ಎಂದು ವ್ಯಂಗ್ಯವಾಡಿದರು.

ರಾಹುಲ್​​ ಗಾಂಧಿ ರಾಜಕೀಯಕ್ಕಾಗಿ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿ ಕುಟುಂಬಸ್ಥರ ಜತೆ ಪೋಟೋ ತೆಗೆಸಿ ಟ್ವೀಟ್​​ ಮಾಡಿದ್ದರು. ಇದರಿಂದ ಪೋಕ್ಸೋ ಕಾಯ್ದೆ ನಿಯಮ ಉಲ್ಲಂಘನೆಯಾಗಿದೆ. ಹಾಗಾಗಿ ರಾಹುಲ್​​ ಗಾಂಧಿ ಟ್ವಿಟರ್​​ ಅಕೌಂಟ್​​​ ಸಸ್ಪೆಂಡ್​​ ಮಾಡಿರಬಹುದು ಎಂದರು.

blank

ಟ್ವಿಟರ್​​​ ನಿಯಮಗಳು ಬಿಡಿ ರಾಹುಲ್​​​ಗೆ ಈ ನೆಲದ ಕಾನೂನಿಗೆ ಗೌರವ ನೀಡೋದೆ ಗೊತ್ತಿಲ್ಲ. ಅತ್ಯಾಚಾರ ಸಂತ್ರಸ್ತೆ ಕುಟುಂಬಸ್ಥರ ಫೋಟೋ ಹಾಕೋದು ನೀಚ ಮತ್ತು ಹೀನ ಕೆಲಸ. ಕೇಂದ್ರ ಸರ್ಕಾರ ಸಾಮಾಜಿಕ ಜಾಲತಾಣದ ಮೇಲೆ ನಿಯಂತ್ರಣ ತರಲು ಹೊರಟಾಗ ವಿರೋಧ ಮಾಡಿದ್ದರು ರಾಹುಲ್​​​. ಈಗ ಕಾನೂನು ಮೂಲಕವೇ ತನ್ನ ಖಾತೆಯನ್ನು ರಾಹುಲ್​​​ ಗಾಂಧಿ ಆ್ಯಕ್ಟೀವ್​​ ಮಾಡಿಕೊಳ್ಳಲಿ ಎಂದು ಕುಟುಕಿದರು.

ಇದನ್ನೂ ಓದಿ: ಧಂ ಇದ್ರೆ ನಮ್​​ ಅಕೌಂಟೂ​ ಲಾಕ್ ಮಾಡಿ ಎಂದ ‘ಕೈ’ ನಾಯಕರ ಟ್ವಿಟರ್ ಅಕೌಂಟ್ ಲಾಕ್; ಮುಂದ?

Source: newsfirstlive.com Source link