‘ಸಿಎಂ ಬಗ್ಗೆ ಹಗುರವಾಗಿ ಮಾತನಾಡ್ತಿರೋದನ್ನು ಖಂಡಿಸುತ್ತೇವೆ’ -ಬೊಮ್ಮಾಯಿ ಪರ ಖಾದರ್ ಬ್ಯಾಟಿಂಗ್​

‘ಸಿಎಂ ಬಗ್ಗೆ ಹಗುರವಾಗಿ ಮಾತನಾಡ್ತಿರೋದನ್ನು ಖಂಡಿಸುತ್ತೇವೆ’ -ಬೊಮ್ಮಾಯಿ ಪರ ಖಾದರ್ ಬ್ಯಾಟಿಂಗ್​

ಮಂಗಳೂರು: ಸಿ‌ಎಂ ಬಸವರಾಜ ಬೊಮ್ಮಾಯಿ ಕೇರಳ ಗಡಿ ಭೇಟಿ ರದ್ದು ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಯು.ಟಿ ಖಾದರ್​, ಸಾಮಾಜಿಕ ಜಾಲತಾಣದಲ್ಲಿ ಸಿಎಂ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಖಾದರ್​, ಕೇರಳದ ಕೆಲವು ಮಂದಿ ತಮಗೆ ಹೆದರಿ ಗಡಿಗೆ ಸಿಎಂ ಬಂದಿಲ್ಲ ಅಂತಾ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಎಂ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಕರ್ನಾಟಕ ಸಿಎಂ ಯಾರ ಬೆದೆರಿಕೆಗೂ ಬಗ್ಗೆ ಗಡಿ ಭೇಟಿ ರದ್ದು ಮಾಡಿಲ್ಲ ಎಂದು ಹೇಳಿದರು.

blank

ಗಡಿಯ ಬಗ್ಗೆ ಕೇರಳದಿಂದ ಬರುವವರಿಗೆ RTPCR ನೆಗೆಟಿವ್ ರಿಪೋರ್ಟ್ ಇರಲೇಬೇಕು ಅಂತ ಸಿಎಂ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದಾರೆ. ಗಡಿಯಲ್ಲಿ ಬಂದೋಬಸ್ತ್​, ಚೆಕ್ ಪೋಸ್ಟ್ ನಿರ್ವಹಣೆ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಕನ್ನಡಿಗರು ಒಟ್ಟಾದರೇ ಸಿಎಂ ಅವರನ್ನು ಪಾದಯಾತ್ರೆ ಮೂಲಕ ಕರೆದುಕೊಂಡು ಹೋಗುತ್ತೇವೆ. ತಲಪಾಡಿ ಗಡಿಯಿಂದ ತಿರುವನಂತಪುರದ ತನಕ ಪಾದಯಾತ್ರೆ ಮಾಡುತ್ತೇವೆ. ಅಷ್ಟು ಧೈರ್ಯ ಕರ್ನಾಟಕದ ಜನರಲ್ಲಿದೆ.

ರಾಜ್ಯದ ಜನರ ಆರೋಗ್ಯ ದೃಷ್ಟಿಯಿಂದ ಸಿಎಂ ಆದೇಶ ಮಾಡಿದ್ದಾರೆ. ಗಡಿ ಭಾಗದ ನಿರ್ಧಾರಗಳನ್ನು ಅಧಿಕಾರಿಗಳು ಚರ್ಚಿಸಿ ತೀರ್ಮಾನ ಮಾಡುತ್ತಾರೆ. ಈ ಹಿಂದೆ ಕಾಸರಗೋಡಿನ ಜನರ‌ನ್ನೇ ಕೇರಳದ ಬೇರೆ ಜಿಲ್ಲೆಗೆ ಹೋಗಲು ಬಿಟ್ಟಿಲ್ಲ. ಈಗ ಕರ್ನಾಟಕ ಸರ್ಕಾರದ ವಿರುದ್ಧ ಮಾತನಾಡೋರು ಆಗ ಎಲ್ಲಿ ಹೋಗಿದ್ದರು. ಇದರ ಬಗ್ಗೆ ಯಾರೂ ಕರ್ನಾಟಕ ಸರ್ಕಾರದ ವಿರುದ್ಧ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದರು.

Source: newsfirstlive.com Source link