ಹಾವನ್ನು ಕಚ್ಚಿ ಸಾಯಿಸಿದ ವ್ಯಕ್ತಿ ಪ್ರಾಣಾಪಾಯದಿಂದ ಪಾರು

ಭುವನೇಶ್ವರ: ತನಗೆ ಕಡಿದ ಹಾವನ್ನು ವ್ಯಕ್ತಿ ಸಿಟ್ಟಿನಿಂದ ಹಾವನ್ನು ಹಿಡಿದು ಕಚ್ಚಿ ಕೊಂದಿರುವ ಘಟನೆ ಒಡಿಶಾ ರಾಜ್ಯದ ಜೈಪುರ ಜಿಲ್ಲೆಯಲ್ಲಿ ನಡೆದಿದೆ.

ಆದಿವಾಸಿ ವ್ಯಕ್ತಿ ಕಿಶೋರ್ ಬಾದ್ರಾ ವಿಷಕಾರಿ ಹಾವನ್ನು ಬಾಯಿಯಿಂದಲೇ ಕಚ್ಚಿ ಸಾಯಿಸಿದ್ದಾನೆ. ಗಂಭರೀಪಟಿಯಾ ಹಳ್ಳಿಯ ಸಲಿಜಂಗಾ ಪಂಚಾಯತಿ ವ್ಯಾಪ್ತಿಯ ದಂಗಡಿ ಎಂಬಲ್ಲಿ ಘಟನೆ ನಡೆದಿದ್ದು, ಹೊಲದಲ್ಲಿ ಕೆಲಸ ಮಾಡಿ ಬರುತ್ತಿದ್ದಾಗ ಹಾವು ಕಡಿಯಿತೆಂದು ಈ ವ್ಯಕ್ತಿ ಅದನ್ನು ಹಿಡಿದು ಸೇಡು ತೀರಿಸಿಕೊಂಡಿದ್ದಾನೆ. ಕಡಿದ ಹಾವು ಅತ್ಯಂತ ವಿಷಕಾರಿಯಾಗಿದ್ದು, ಈತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಹಾವನ್ನು ಕೊಂದಿದ್ದು ಹೇಗೆ ಎನ್ನುವ ಬಗ್ಗೆ ಸ್ವತಃ ಕಿಶೋರ್ ಬಾದ್ರಾ ವಿವರಣೆ ನೀಡಿದ್ದಾನೆ. ನಾನು ಹೊಲದಿಂದ ಕೆಲಸ ಮುಗಿಸಿಕೊಂಡು ಬರುತ್ತಿದ್ದ ವೇಳೆ ಕಾಲಿನ ಮೇಲೆ ಏನೋ ಹರಿದಾಡಿ ಕಡಿದ ಅನುಭವ ಆಯಿತು. ಆಗ ಕತ್ತಲಾಗಿತ್ತಾದ್ದರಿಂದ ಸೂಕ್ಷ್ಮವಾಗಿ ಗಮನಿಸಿದೆ. ತಕ್ಷಣ ಮೊಬೈಲ್ ಬೆಳಕಿನ ಸಹಾಯದಲ್ಲಿ ನೋಡಿದಾಗ ಅದೊಂದು ವಿಷಪೂರಿತ ಹಾವು ಎನ್ನುವುದು ಗಮನಕ್ಕೆ ಬಂತು ಎಂದಿದ್ದಾನೆ. ಇದನ್ನೂ ಓದಿ: 2ಎ ಮೀಸಲಾತಿ ಹೋರಾಟ ಮುಂದುವರಿಯುತ್ತದೆ: ಯತ್ನಾಳ್

ವಿಷಕಾರಿ ಹಾವು ಎಂದು ಗೊತ್ತಾದ ತಕ್ಷಣವೇ ಅದನ್ನು ಕೈಯಲ್ಲಿ ಹಿಡಿದುಕೊಂಡು ಮನಸೋ ಇಚ್ಛೆ ಕಡಿಯಲಾರಂಭಿಸಿದೆ. ಅದರ ಮೇಲೆ ಸೇಡು ತೀರಿಸಿಕೊಳ್ಳಲೆಂದು ಹಾಗೆ ಮಾಡಿದೆ. ಕೊನೆಗೆ ಅದು ಸತ್ತು ಹೋಯಿತು. ಬಳಿಕ ಸತ್ತ ಹಾವನ್ನು ಕೈಯಲ್ಲಿ ಹಿಡಿದುಕೊಂಡೇ ಮನೆಗೆ ಬಂದು ಹೆಂಡತಿಗೆ ನಡೆದಿರುವ ಘಟನೆಯನ್ನು ಹೇಳಿದೆ ಎಂದಿದ್ದಾನೆ. ಇದನ್ನೂ ಓದಿ: ಕನ್ನಡಿಗರು ಎಂಬುದನ್ನು ಸಿ.ಟಿ.ರವಿ ಮರೆತು ಭಾರತೀಯರಾಗಿದ್ದಾರೆ: ಹೆಚ್‍ಡಿಕೆ

blank

ಸುತ್ತಮುತ್ತಲಿನವರು ಕೆಲವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದಾರೆ. ಆದರೆ ಕಿಶೋರ್ ಬಾದ್ರಾ ಮಾತ್ರ ಅವರ ಮಾತಿಗೆ ಕಿವಿಗಡದೇ ನಾಟಿ ಔಷಧಿ ನೀಡುವವರ ಬಳಿ ಹೋಗಿದ್ದಾನೆ. ಅದೃಷ್ಟವಶಾತ್ ಹಾವು ಕಡಿದಾಗಲೂ, ಹಾವಿಗೆ ಈತ ತಿರುಗಿ ಕಡಿದಾಗಲೂ ವಿಷದ ಪ್ರಮಾಣ ದೇಹಕ್ಕೆ ಸೇರಿಲ್ಲವಾದ್ದರಿಂದ ಸಾವಿನ ದವಡೆಯಿಂದ ಆತ ಪಾರಾಗಿದ್ದಾನೆ.

Source: publictv.in Source link