75ನೇ ಸ್ವಾತಂತ್ರೋತ್ಸವಕ್ಕೆ ಕ್ಷಣಗಣನೆ: ಮಾಣಿಕ್ ಶಾ ಪರೇಡ್ ಗ್ರೌಂಡ್ ಸುತ್ತ ಕಟ್ಟೆಚ್ಚರ

75ನೇ ಸ್ವಾತಂತ್ರೋತ್ಸವಕ್ಕೆ ಕ್ಷಣಗಣನೆ: ಮಾಣಿಕ್ ಶಾ ಪರೇಡ್ ಗ್ರೌಂಡ್ ಸುತ್ತ ಕಟ್ಟೆಚ್ಚರ

ಬೆಂಗಳೂರು: ಲಿಕಾನ್​ ಸಿಟಿ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗಿದ್ದು, ಕ್ಷಣಗಣನೆ ಆರಂಭವಾಗಿದೆ. ರಾಜಧಾನಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭಕ್ಕಾಗಿ ಮಾಣಿಕ್ ಶಾ ಪರೆಡ್ ಗ್ರೌಂಡ್ ಸಂಪೂರ್ಣ ಸಜ್ಜಾಗಿದ್ದು ಈ ಬಾರಿ ಕೊರೊನಾ ಕಾರಣದಿಂದಾಗಿ SOP ಮಾರ್ಗಸೂಚಿಗಳಂತೆ  ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಗೌರವ ಗುಪ್ತಾ ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಪೂರ್ವ ತಯಾರಿ ಕುರಿತು ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಾಣಿಕ್ ಶಾ ಪರೇಡ್ ಗ್ರೌಂಡ್ ಸುತ್ತ ಕಟ್ಟೆಚ್ಚರ ವಹಿಸಲಾಗಿದ್ದು, ಒಟ್ಟು 20 ಪೊಲೀಸ್ ತುಕಡಿಗಳಲ್ಲಿ 470 ಪೊಲೀಸ್ ರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ ಎಂದಿದ್ದಾರೆ.

blank

ಇದನ್ನೂ ಓದಿ: ತಪ್ಪು ಲೆಕ್ಕ ತೋರಿಸಿ ಪಾಲಿಕೆಗೆ ಕೋಟಿ ಕೋಟಿ ವಂಚಿಸಿದ್ರಾ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್​?

ಆಗಸ್ಟ್​ 15ರ ಬೆಳಗ್ಗೆ 8:55 ಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೈದಾನಕ್ಕೆ ಆಗಮಿಸಲಿದ್ದು, 9 ಗಂಟೆಗೆ ಮುಖ್ಯಮಂತ್ರಿಗಳಿಂದ ರಾಷ್ಟ್ರ ಧ್ವಜಾರೋಹಣ ನಡೆಯಲಿದೆ. ಧ್ವಜಾರೋಹಣ ಬಳಿಕ ಬಸವರಾಜ್ ಬೊಮ್ಮಾಯಿ ತೆರೆದ ಜೀಪಿನಲ್ಲಿ ಪರೇಡ್ ವೀಕ್ಷಣೆ ನಡೆಸಲಿದ್ದಾರೆ. ಬಳಿಕ ಗೌರವ ರಕ್ಷೆ ಸ್ವೀಕಾರ ನಡೆಯಲಿದ್ದು, ಗೌರವರಕ್ಷೆ ಸ್ವೀಕರಿಸಲು KSRP,CRPF,BSF,CAR,KSISF, TRAFFIC POLICE, ಸೇರಿದಂತೆ ಇನ್ನಿತರ ತಂಡಗಳು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

blank

ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಮಾತನಾಡಿ, ಸ್ವಾತಂತ್ರೋತ್ಸವ ಹಿನ್ನೆಲೆ ಕಳೆದ 10 ದಿನಗಳಿಂದ ಎಲ್ಲಾ ರೀತಿಯ ಭದ್ರತೆ ಕೈಗೊಳ್ಳಲಾಗಿದ್ದು, ಸಾಕಷ್ಟು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದರು. ಮೈದಾನಕ್ಕೆ ಪಾಸ್ ಇರುವವರಿಗೆ ಮಾತ್ರ ಅವಕಾಶ ಎಂದಿರುವ ಅವರುಬಿಗಿ ಭದ್ರತೆಗೆ ಶ್ವಾನದಳ, ಕೆ.ಎಸ್.ಆರ್.ಪಿ, ಬೆಂಗಳೂರು ನಗರ ಪೊಲೀಸರು, ಬಾಂಬ್ ಸ್ಕ್ವಾಡ್, ನಿಯೋಜನೆ ಮಾಡಲಾಗಿದೆ. ಮತ್ತು ಮೈದಾನಕ್ಕೆ ಆಗಮಿಸುವವರು ಊಟದ ಡಬ್ಬಿ, ಸಿಗರೇಟ್, ಬೆಂಕಿ ಕಡ್ಡಿ, ತರದಂತೆ ಸೂಚನೆ ನೀಡಿದ್ದಾರೆ.

Source: newsfirstlive.com Source link