‘ನಾವೆಲ್ಲ ಸೀಟ್​ಗಾಗಿ ಕಚ್ಚಾಡ್ತಿದ್ದೀವಿ.. ರಕ್ಷಾಗೆ ಇನ್ನೂ ಚೇರ್ ಬೆಲೆ ಗೊತ್ತಿಲ್ಲ’ -DKS ಕಿವಿಮಾತು

‘ನಾವೆಲ್ಲ ಸೀಟ್​ಗಾಗಿ ಕಚ್ಚಾಡ್ತಿದ್ದೀವಿ.. ರಕ್ಷಾಗೆ ಇನ್ನೂ ಚೇರ್ ಬೆಲೆ ಗೊತ್ತಿಲ್ಲ’ -DKS ಕಿವಿಮಾತು

ಬೆಂಗಳೂರು: ರಾಜ್ಯ ಯೂತ್​ ಕಾಂಗ್ರೆಸ್​ನ ಚುಕ್ಕಾಣಿ ಹಿಡಿದಿರುವ ರಕ್ಷಾ ರಾಮಯ್ಯ ನವರ ಪದಗ್ರಹಣ ಸಮಾರಂಭ ಇಂದು ನಗರದಲ್ಲಿ ನಡೆಯಿತು.

ನಗರದ ಪಿಟೀಲು ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ನೂತನ ಯೂತ್​ ಕಾಂಗ್ರೆಸ್​ ರಾಜ್ಯಾಧ್ಯಕ್ಷನಾಗಿ ಆಯ್ಕೆ ಆಗಿರುವ ರಕ್ಷಾ ರಾಮಯ್ಯನವರಿಗೆ ಪಕ್ಷದ ಹಿರಿಯ ನಾಯಕರು, ಮುಖಂಡರ ಸಮ್ಮುಖದಲ್ಲಿ ಪದಗ್ರಹಣ ಮಾಡಲಾಯಿತು. ಈ ವೇಳೆ ಭಾಷಣಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಕುಳಿತಿಕೊಳ್ಳದೆ ಅತ್ತಿಂದಿತ್ತ ಅಲೆದಾಡುತ್ತಿದ್ದ ರಕ್ಷಾ ರಾಮಯ್ಯರನ್ನು ಕಂಡು ‘ರಕ್ಷಾಗೆ ಇನ್ನೂ ಚೇರ್ ಬೆಲೆ ಗೊತ್ತಿಲ್ಲ ಹೋಗಿ ಕುಳಿತುಕೊ’ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಇದನ್ನೂ ಓದಿ:  ರಾಜ್ಯ ಕಾಂಗ್ರೆಸ್​ನ ಯುವ ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಕ್ಷಾ ರಾಮಯ್ಯ

ಅಷ್ಟೇ ಅಲ್ಲದೇ ಕಾರ್ಯಕರ್ತರಿಗೂ ಈ ವೇಳೆ ಕಿವಿಮಾತು ಹೇಳಿದ ಶಿವಕುಮಾರ್​ ‘ನಾವೆಲ್ಲಾ ಚೇರ್ ಗೆ ಬಡಿದಾಡ್ತಿದೀವಿ, ನೀವು ಎಲ್ಲರೂ ಖಾಲಿ ಚೇರ್ ಗೆ ಹೋಗಿ ಕೂರಿ ಎಂದು ಕಾರ್ಯಕ್ರದಲ್ಲಿದ್ದವರನ್ನು ನಗೆಗಡಲಲ್ಲಿ ತೇಲಿಸಿದ ಪ್ರಸಂಗ ನಡೆದಿದೆ.

Source: newsfirstlive.com Source link