ಮಹಾರಾಷ್ಟ್ರದಲ್ಲಿ ಮುಂದುವರಿದ ಕೊರೊನಾ ಆರ್ಭಟ; ಡೆಲ್ಟಾ ಪ್ಲಸ್ ವೈರಸ್​​ಗೆ ಮೂವರು ಬಲಿ

ಮಹಾರಾಷ್ಟ್ರದಲ್ಲಿ ಮುಂದುವರಿದ ಕೊರೊನಾ ಆರ್ಭಟ; ಡೆಲ್ಟಾ ಪ್ಲಸ್ ವೈರಸ್​​ಗೆ ಮೂವರು ಬಲಿ

ಮುಂಬೈ: ಮಹಾರಾಷ್ಟ್ರದಲ್ಲಿ ಮಾರಕ ಕೊರೊನಾ ವೈರಸ್​​ ಹಾವಳಿ ಮುಂದುವರಿದಿದೆ. ಈಗ ಕೊರೊನಾ ವೈರಸ್​​​ ಹೊಸ ತಳಿ ಡೆಲ್ಟಾ ಪ್ಲಸ್​​​ಗೆ ಮೂವರು ಬಲಿಯಾಗಿದ್ದಾರೆ. ಈ ಪೈಕಿ ಮುಂಬೈ ಮೂಲದ ಕೋವಿಡ್​​-19 ರೋಗಿ ಒಬ್ಬರು ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಮಹಾರಾಷ್ಟ್ರದಲ್ಲಿ ಕೋವಿಡ್​​-19 ಲಾಕ್ಡೌನ್​​ ಸಡಿಲಗೊಳಿಸಿದೆ. ಕೊರೊನಾ ತೀವ್ರಗತಿಯಲ್ಲಿ ಏರುತ್ತಿರುವಾಗಲೇ ಮಹಾರಾಷ್ಟ್ರದಲ್ಲಿ ಹಲವು ತಿಂಗಳಿನಿಂದ ಜಾರಿಯಲ್ಲಿದ್ದ ನಿರ್ಬಂಧಗಳನ್ನು ಸಡಿಲಗೊಳಿ ಆದೇಶಿಸಲಾಗಿತ್ತು. ಈ ಹೊತ್ತಲ್ಲೇ ಡೆಲ್ಟಾ ಪ್ಲಸ್​​ ಸೋಂಕಿಗೆ ಮೂವರು ಬಲಿಯಾಗಿರುವುದು ಮಹಾರಾಷ್ಟ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಮುಂಬೈ ಮೂಲದ 63 ವರ್ಷದ ಮಹಿಳೆಯೊಬ್ಬರು ಮಧುಮೇಹ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇವರಿಗೆ ಎರಡು ಡೋಸ್ ಲಸಿಕೆಯೂ ನೀಡಲಾಗಿತ್ತು. ನಗರದ ಡೆಲ್ಟಾ ಪ್ಲಸ್ ಪಾಸಿಟಿವ್ ಕಂಡು ಬಂದ ಏಳು ರೋಗಿಗಳಲ್ಲಿ ಒಬ್ಬರಾಗಿದ್ದ ಇವರು, ಜುಲೈ 27ನೇ ತಾರೀಕಿನಂದು ಮೃತಪಟ್ಟರು.

ರಾಯಗಢದ 69 ವರ್ಷದ ವೃದ್ಧ ಹಾಗೂ ರತ್ನಗಿರಿಯ 80 ವರ್ಷದ ವೃದ್ಧರೊಬ್ಬರು ಡೆಲ್ಟಾ ಪ್ಲಸ್​​ನಿಂದ ಮೃತಪಟ್ಟಿದ್ದಾರೆ. ಇವರ ಸಂಪರ್ಕಕ್ಕೆ ಬಂದ ಹಲವರಿಗೆ ಈಗ ಕೊರೊನಾ ಪಾಸಿಟಿವ್​​ ಆಗಿದೆ. ಈ ಪೈಕಿ 63 ವರ್ಷದ ಮಹಿಳೆ ಸಂಪರ್ಕದಲ್ಲಿದ್ದ ಇಬ್ಬರಿಗೆ ಡೆಲ್ಟಾ ಪ್ಲಸ್ ಸೋಂಕು ಪತ್ತೆಯಾಗಿದೆ.

ಇದನ್ನೂ ಓದಿ: ಕೊರೊನಾ ಕರಿಛಾಯೆ: ದೇಶದಲ್ಲಿ ನಿನ್ನೆ 41,195 ಮಂದಿಗೆ ಪಾಸಿಟಿವ್ ; ರಾಜ್ಯದಲ್ಲೂ 1,857 ಕೇಸ್​!

ಮಹಾರಾಷ್ಟ್ರದ ವಿವಿಧೆಡೆ 13 ಮಂದಿಯಲ್ಲಿ ಡೆಲ್ಟಾ ಪ್ಲಸ್ ಸೋಂಕು ಪತ್ತೆಯಾಗಿತ್ತು. ಇದರಿಂದ ಒಟ್ಟು ಡೆಲ್ಟಾ ಪ್ಲಸ್ ಪ್ರಕರಣಗಳ ಸಂಖ್ಯೆ 65ಕ್ಕೇರಿದೆ.

Source: newsfirstlive.com Source link