ಒಂದೊಳ್ಳೆ ಕೆಲಸಕ್ಕೆ ಲಾರ್ಡ್ಸ್​​​ ಅಂಗಳದಲ್ಲಿ ರೆಡ್ ಕ್ಯಾಪ್‌ ಧರಿಸಿ ಕಣಕ್ಕಿಳಿದ ಕೊಹ್ಲಿ ಬಾಯ್ಸ್

ಒಂದೊಳ್ಳೆ ಕೆಲಸಕ್ಕೆ ಲಾರ್ಡ್ಸ್​​​ ಅಂಗಳದಲ್ಲಿ ರೆಡ್ ಕ್ಯಾಪ್‌ ಧರಿಸಿ ಕಣಕ್ಕಿಳಿದ ಕೊಹ್ಲಿ ಬಾಯ್ಸ್

ಲಾರ್ಡ್ಸ್​​​ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್​ನ 2ನೇ ದಿನದಂದು ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ತೋರಿದೆ. ಆದರೆ 2ನೇ ದಿನದಾಟದ ಆರಂಭಕ್ಕೂ ಮುನ್ನ ಇಂಗ್ಲೆಂಡ್​​-ಟೀಮ್ ಇಂಡಿಯಾ ಆಟಗಾರರು, ರೆಡ್ ಕ್ಯಾಪ್ ಧರಿಸಿ ಅಚ್ಚರಿ ಮೂಡಿಸಿದ್ರು.

ಇಂಗ್ಲೆಂಡ್​ ತಂಡದ ಮಾಜಿ ನಾಯಕ ಆಂಡ್ರ್ಯೂ ಸ್ಟ್ರಾಸ್ ಅವರು ರುತ್ ಸ್ಟ್ರಾಸ್ ಕ್ಯಾನ್ಸರ್ ಫೌಂಡೇಷನ್ ಆರಂಭಿಸಿದ್ದು, ಅದಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಉಭಯ ತಂಡಗಳು ಆಟಗಾರರು ರೆಡ್ ಕ್ಯಾಪ್‌ಗಳನ್ನು ಧರಿಸಿದ್ರು. ಸ್ಟ್ರಾಸ್ ಅವರ ಪತ್ನಿ ರುತ್ ಸ್ಟ್ರಾಸ್ 2018ರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನೊಂದಿಗೆ ಸುದೀರ್ಘ ಹೋರಾಟ ನಡೆಸಿ ನಿಧನರಾದ್ರು. ಆಕೆಯ ಮರಣಾ ನಂತರ ಸ್ಟ್ರಾಸ್ ಈ ಉದಾತ್ತ ಹೆಜ್ಜೆ ಇಟ್ಟಿದ್ದಾರೆ.

ಫೌಂಡೇಷನ್​ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾತ್ ಅವರನ್ನು ಸಂಪರ್ಕಿಸಿದ್ರು. ಏಕೆಂದರೆ ಮೆಗ್ರಾತ್​ ಅವರ ಪತ್ನಿ ಜೇನ್ ಕೂಡ ಸ್ತನ ಕ್ಯಾನ್ಸರ್​ನಿಂದ ಕೊನೆಯುಸಿರೆಳೆದಿದ್ರು. ಹೀಗಾಗಿ ಅವರಿಂದ ಸಲಹೆಗಳನ್ನ ಪಡೆದು ಸ್ಟ್ರಾಸ್ ತನ್ನ ಪತ್ನಿಯ ಹೆಸರಿನ ಮೇಲೆ ಫೌಂಡೇಷನ್​​​ಗೆ ಅಡಿಪಾಯ ಹಾಕಿದ್ದಾರೆ. ಇದು ಕ್ಯಾನ್ಸರ್​​​ಗೆ ಒಳಗಾದವರಿಗೆ ಇಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತೆ. ಲಾರ್ಡ್ಸ್​​​ ಟೆಸ್ಟ್​ನ 2ನೇ ದಿನವನ್ನ ‘ರೆಡ್ ಫಾರ್ ರೂತ್’ ದಿನವನ್ನಾಗಿ ಆಚರಿಸಲಾಗುತ್ತಿದೆ. ಆಟಗಾರರಲ್ಲದೆ, ಪ್ರಸಾರಕರು ಮತ್ತು ಪ್ರೆಸೆಂಟರ್‌ಗಳು ಕೆಂಪು ಉಡುಪುಗಳನ್ನು ಧರಿಸಿದ್ರು.

Source: newsfirstlive.com Source link