#BoycottRadhikaApte ಫುಲ್​ ಟ್ರೆಂಡ್​ -ಫೋಟೋ ವೈರಲ್​ ಆಗ್ತಿದ್ದಂತೆ ಆಪ್ಟೆ ವಿರುದ್ಧ ನೆಟ್ಟಿಗರು ಗರಂ

#BoycottRadhikaApte ಫುಲ್​ ಟ್ರೆಂಡ್​ -ಫೋಟೋ ವೈರಲ್​ ಆಗ್ತಿದ್ದಂತೆ ಆಪ್ಟೆ ವಿರುದ್ಧ ನೆಟ್ಟಿಗರು ಗರಂ

ಬಾಲಿವುಡ್​ ನಟಿ ರಾಧಿಕಾ ಆಪ್ಟೆ ವಿರುದ್ಧ ಸೋಷಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ಫುಲ್​ ಗರಂ ಆಗಿದ್ದಾರೆ. ರಾಧಿಕಾ ಆಪ್ಟೆ ಬಾಲಿವುಡ್​ನ ಬಹಳ ಪ್ರತಿಭಾವಂತ ನಟಿ ಆಗಿದ್ರು ಕೂಡ ನೆಟ್ಟಿಗರು ರಾಧಿಕಾ ಆಪ್ಟೆಯನ್ನು ಚಿತ್ರರಂಗದಿಂದ ಹೊರಹಾಕುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಧಿಕಾ ‘ಪರ್ಚೆಡ್’ ಎಂಬ ಸಿನಿಮಾದ ಇಂಟಿಮೇಟ್ ದೃಶ್ಯದಲ್ಲಿ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ದು. ಸದ್ಯ ಈ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಅಶ್ಲೀಲ ವಿಷಯವನ್ನು ಪ್ರಚಾರ ಮಾಡುತ್ತಿದೆ ಎಂದು ನೆಟ್ಟಿಗರು ರಾಧಿಕಾ ವಿರುದ್ಧ ಗರಂ ಆಗಿದ್ದಾರೆ. ಇಂತಹ ಅಶ್ಲೀಲ ಫೋಟೋ ನಮ್ಮ ಭಾರತೀಯ ಸಂಸ್ಕೃತಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ನೆಟ್ಟಿಗರು ರಾಧಿಕಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇನ್ನು ಬಹುಭಾಷಾ ನಟಿಯಾಗಿರುವ ರಾಧಿಕಾ ಆಪ್ಟೆಯನ್ನು ಚಿತ್ರ ರಂಗದಿಂದ ಹೊರಹಾಕಬೇಕೆಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ #boycottRadhikaApte ಎಂಬ ಹ್ಯಾಶ್​ಟ್ಯಾಗ್​ ಬಳಸುತ್ತಿದ್ದಾರೆ.

Source: newsfirstlive.com Source link