‘ತನಿಖೆ ಮಾಡ್ಲಿ, ನನ್ನದು ತಪ್ಪಿದ್ದರೆ ಸ್ಪಾಟಲ್ಲೇ ತೆರಿಗೆ ಕಟ್ತೀನಿ’ -ಆರೋಪಕ್ಕೆ ರಾಕ್​​ಲೈನ್ ಪ್ರತಿಕ್ರಿಯೆ

‘ತನಿಖೆ ಮಾಡ್ಲಿ, ನನ್ನದು ತಪ್ಪಿದ್ದರೆ ಸ್ಪಾಟಲ್ಲೇ ತೆರಿಗೆ ಕಟ್ತೀನಿ’ -ಆರೋಪಕ್ಕೆ ರಾಕ್​​ಲೈನ್ ಪ್ರತಿಕ್ರಿಯೆ

ಬೆಂಗಳೂರು: ಸ್ಯಾಂಡಲ್​ವುಡ್​ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ತಪ್ಪು ಆಸ್ತಿ ಲೆಕ್ಕ ನೀಡಿ ಪಾಲಿಕೆಗೆ ಕೋಟಿ ಕೋಟಿ ತೆರಿಗೆಯನ್ನ ವಂಚಿಸಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಮಾಡಿದ್ದ ಆರೋಪಕ್ಕೆ ರಾಕ್​​ಲೈನ್​ ವೆಂಕಟೇಶ್​ ಅವರು ಸ್ಪಷ್ಟನೆ ನೀಡಿದ್ದು, ತಮ್ಮ ಮೇಲಿನ ಆರೋಪದ ಬಗ್ಗೆ ತನಿಖೆ ಮಾಡಲಿ ಎಂದು ಸವಾಲು ಎಸೆದಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿದ ರಾಕ್​​ಲೈನ್​ ವೆಂಕಟೇಶ್​ ಅವರು, ಎನ್.ಆರ್.ರಮೇಶ್ ಯಾರು ಅನ್ನೋದೆ ನನಗೆ ಗೊತ್ತಿಲ್ಲ. ನನ್ನಿಂದ ತೆರೆಗೆ ವಂಚನೆಯಾಗಿದ್ದಲ್ಲಿ ನಮ್ಮ ಮಾಲ್ ಅನ್ನ ಸರ್ವೆ ಮಾಡಲಿ. ನಾನು ಯಾವುದೇ ತೆರೆಗೆ ವಂಚನೆ ಮಾಡಿಲ್ಲ, ನನ್ನ ಮೇಲೆ ಯಾಕೆ ಈ ರೀತಿ ಆರೋಪ ಮಾಡ್ತಿದ್ದಾರೆ ಗೊತ್ತಿಲ್ಲ ಎಂದರು.

blank

ನಾನು ಬಿಬಿಎಂಪಿ ನಿಯಮಗಳ ಅನ್ವಯವೇ ನಾನು ಕಟ್ಟಡ ನಿರ್ಮಾಣ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯಿಂದ ಅನುಮತಿ ಪಡೆದುಕೊಂಡಿದ್ದೇನೆ. ಈಗಲೂ ಇದರ ಬಗ್ಗೆ ತನಿಖೆ ಮಾಡಲಿ.. ನನ್ನದು ತಪ್ಪಿದ್ದರೆ ಅಥವಾ ನಾನು ತೆರೆಗೆ ಕಟ್ಟಿಲ್ಲ ಅನ್ನೋದು ಸಾಬೀತಾದರೇ ಆ ಸ್ಪಾಟಲ್ಲೇ ತೆರಿಗೆ ಕಟ್ಟುವೇ. ನನಗೆ ನೋಟಿಸ್​ ಕೊಟ್ಟಿರುವ ಬಗ್ಗೆ ಕೋರ್ಟ್​​ಗೆ ಕೊಟ್ಟು.. ಮಾಹಿತಿ ಕೂಡ ಕೊಟ್ಟಿದ್ದೇನೆ. ಈಗಲೂ ನಾನು ಕಾನೂನು ಪ್ರಕಾರ ತೆರಿಗೆ ಪಾವತಿ ಮಾಡುತ್ತಿದ್ದೇನೆ. ನಾನು ಕಷ್ಟಪಟ್ಟು ದುಡಿದ ಹಣವಿದು, ಯಾರೋ ಬಂದು ಹೆಚ್ಚುವರಿಯಾಗಿ ತೆರಿಕೆ ಕಟ್ಟಿ ಎಂದರೇ ನನ್ನಿಂದ ಆಗೋದಿಲ್ಲ ಎಂದರು.

blank

ಏನಿದು ಆರೋಪ..?
ರಾಕ್​​ಲೈನ್ ವೆಂಕಟೇಶ್​ ಅವರು ತಪ್ಪು ಮಾಹಿತಿ ನೀಡಿ ತೆರಿಗೆ ವಂಚನೆ ಮಾಡಿದ್ದಾರೆ ಅಂತಾ ದಾಖಲೆಗಳ ಸಮೇತ ಪಾಲಿಕೆ ಆಯುಕ್ತರಿಗೆ ಎನ್​ಆರ್​ ರಮೇಶ್ ದೂರು ಕೂಡ ಕೊಟ್ಟಿದ್ದಾರೆ. ಜಾಲಹಳ್ಳಿ ಕ್ರಾಸ್​​ ಬಳಿಯಿರುವ ರಾಕ್ ಲೈನ್ ಮಾಲ್​ನಿಂದ ತೆರಿಗೆ ವಂಚನೆ ಮಾಡಲಾಗಿದೆ. 2012-13 ರಿಂದ ಆಸ್ತಿಯ ವಿಸ್ತೀರ್ಣದಲ್ಲಿ ತಪ್ಪು ಲೆಕ್ಕ ತೋರಿಸಿ ಕೋಟಿಗಟ್ಟಲೇ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಎನ್​ಆರ್ ರಮೇಶ್ ಆರೋಪಿಸಿದ್ದಾರೆ.

ರಾಕ್ ಲೈನ್ ಮಾಲ್​ನ 1,22,743 ಚದರ ಅಡಿ ವಿಸ್ತೀರ್ಣದ ಬದಲು 48,500 ಚದರ ಅಳತೆಯನ್ನು ಮಾತ್ರ ತೋರಿಸಿ 2012-13 ರಿಂದಲೂ 48500 ಚದರಡಿಗೆ ಮಾತ್ರ ತೆರಿಗೆ ಪಾವತಿ ಮಾಡಿ ಮೋಸ ಮಾಡಿದ್ದಾರೆ. 48500 ಚದರಡಿಗೆ ವಾರ್ಷಿಕ ಕೇವಲ 3,78,016 ರೂ. ಮಾತ್ರ ತೆರಿಗೆ ಪಾವತಿ ಮಾಡ್ತಿದ್ದ ರಾಕ್ ಲೈನ್ 74243 ಚದರಡಿ ವಿಸ್ತೀರ್ಣದ ಲೆಕ್ಕ ತೋರಿಸದೇ ಕೋಟಿಗಟ್ಟಲೇ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಎನ್​ಆರ್ ರಮೇಶ್ ದೂರು ನೀಡಿದ್ದಾರೆ.

Source: newsfirstlive.com Source link