ಕಳಂಕಿತ ಸಚಿವೆ ಜೊಲ್ಲೆ ಪರ ಸಚಿವ ಗೋವಿಂದ ಕಾರಜೋಳ ಬ್ಯಾಟಿಂಗ್

ಕಳಂಕಿತ ಸಚಿವೆ ಜೊಲ್ಲೆ ಪರ ಸಚಿವ ಗೋವಿಂದ ಕಾರಜೋಳ ಬ್ಯಾಟಿಂಗ್

ತುಮಕೂರು: ನಿನ್ನೆಯಷ್ಟೇ ಕಳಂಕಿತ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಘನವೆತ್ತ ಸರ್ಕಾರ ಸಚಿವ ಕೆಎಸ್​ ಈಶ್ವರಪ್ಪ, ಸಿಸಿ ಪಾಟೀಲ್ ಅವರು ಬ್ಯಾಟ್ ಬೀಸಿದ್ದರು. ಇದೀಗ ರಾಜ್ಯ ಸರ್ಕಾರದ ಮತ್ತೋರ್ವ ಸಚಿವ ಗೋವಿಂದ ಕಾರಜೋಳ ಅವರು ಕೂಡ ಬ್ಯಾಟ್ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಗೋವಿಂದ ಕಾರಜೋಳ ಅವರು, ಸಾರ್ವಜನಿಕ ಜೀವನದಲ್ಲಿ ಆರೋಪಗಳು ಸರ್ವೆ ಸಾಮಾನ್ಯ ಅಂತ.. ಆರೋಪಗಳು ಬಂದ ತಕ್ಷಣ ಅವರು ಅಪರಾಧಿಯಾಗಲ್ಲ. ಆರೋಪಗಳು ಬಂದಾಗ ಅದನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಬೇಕು. ಒಬ್ಬ ವ್ಯಕ್ತಿಯನ್ನ ತಪ್ಪಿತಸ್ಥ ಅಂತ ಗುರುತಿಸುವುದಕ್ಕಿಂತ, ಅವರ ಹಿನ್ನೆಲೆ ಅರ್ಥ ಮಾಡಿಕೊಳ್ಳಬೇಕು. ಸಚಿವೆ ಶಶಿಕಲಾ ಜೊಲ್ಲೆ ಭ್ರಷ್ಟಾಚಾರ ವಿಚಾರವನ್ನು ಆರೋಪ ಅಂತ ಸಚಿವ ಕಾರಜೋಳ ಹೇಳಿದ್ದಾರೆ.

Source: newsfirstlive.com Source link