ಮದಲೂರು ಕೆರೆಗೆ ನೀರು: ಹೋರಾಟದ ಹಾದಿ ಹಿಡಿದ ಹಾಲಿ, ಮಾಜಿ ಶಾಸಕರು.. ಪಾದಯಾತ್ರೆ ಸಿದ್ಧತೆ

ಮದಲೂರು ಕೆರೆಗೆ ನೀರು: ಹೋರಾಟದ ಹಾದಿ ಹಿಡಿದ ಹಾಲಿ, ಮಾಜಿ ಶಾಸಕರು.. ಪಾದಯಾತ್ರೆ ಸಿದ್ಧತೆ

ತುಮಕೂರು: ಶಿರಾ ಕ್ಷೇತ್ರದ ಉಪಚುನಾವಣೆಯಲ್ಲಿ ಭಾರೀ ಸದ್ದು ಮಾಡಿದ್ದ ಮದಲೂರು ಕೆರೆ ನೀರಿನ ವಿಚಾರ ಈಗ ಮತ್ತೆ ಮುನ್ನೆಲೆ ಬಂದಿದೆ. ಕಳೆದ ಸೋಮವಾರ ಮದಲೂರು ಕೆರೆಗೆ ನೀರು ಹರಿಸುವ ಬಗ್ಗೆ ನ್ಯೂಸ್ ಫಸ್ಟ್ ವರದಿ ಮಾಡಿತ್ತು. ಇದೀಗಾ ಶಿರಾದ ಹಾಲಿ ಮತ್ತು ಮಾಜಿ ಶಾಸಕರು ಮದಲೂರು ಕೆರೆಗೆ ನೀರು ಹರಿಸದಿದ್ರೆ ಹೋರಾಟ ಮಾಡಲು ಮುಂದಾಗಿದ್ದಾರೆ. ಇದೆಲ್ಲದಕ್ಕೂ ಕಾರಣ ಹೇಮಾವತಿ ನೀರು ಹರಿಸಲು ಕಾನೂನಿನ ತೊಡಕಿದೆ ಎಂದಿದ್ದ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವರ ಹೇಳಿಕೆ.

blank

ಶಿರಾದ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲು ಕಾನೂನಿನ ತೊಡಕಿದೆ ಎಂದಿದ್ದ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹೇಳಿಕೆಯ ನಂತರ ಇದೀಗ ಹಾಲಿ ಮತ್ತು ಮಾಜಿ ಶಾಸಕರ ಹೋರಾಟಕ್ಕೆ ಕಾರಣವಾಗಿದೆ. ಶಿರಾ ಉಪ ಚುನಾವಣೆಯಲ್ಲಿ ರಾಜ್ಯ ರಾಜಕೀಯವನ್ನೇ ತಿರುಗಿ ನೋಡುವಂತೆ ಮಾಡಿದ್ದ ಮದಲೂರು ಕೆರೆ ವಿವಾದ ತಾರಕಕ್ಕೇರಿದೆ.

ಇತಿಹಾಸದಲ್ಲಿಯೇ ಮೊದಲ ಬಾರಿಗೆ ಶಿರಾ ಕ್ಷೇತ್ರದಲ್ಲಿ ಖಾತೆ ತೆರೆದಿದ್ದ ಬಿಜೆಪಿ ಮದಲೂರು ಕೆರೆಯ ನೀರಿನ ವಿಚಾರವನ್ನೆ ಅಸ್ತ್ರವಾಗಿಸಿಕೊಂಡಿತ್ತು. ಮದಲೂರು ಕೆರೆಗೆ ಹೇಮಾವತಿ ನೀರನ್ನು ತುಂಬಿಸುತ್ತೇವೆ ಎಂದು ವಾಗ್ದಾನ ಮಾಡಿದ್ರು ಅಂದಿನ ಸಿಎಂ ಯಡಿಯೂರಪ್ಪ. ಶಿರಾ ಕ್ಷೇತ್ರ ಗೆದ್ದ ಬಳಿಕ ಕಳೆದ ಡಿಸೆಂಬರ್‌ನಲ್ಲಿ ಮದಲೂರು ಕೆರೆಗೆ ನೀರು ಹರಿಸಲಾಗಿತ್ತು. ಆದರೆ ಈ ಬಾರಿ ಕಾನೂನಿನಲ್ಲಿ ಮದಲೂರು ಕೆರೆಗೆ ನೀರು ಹರಿಸಲು ಅವಕಾಶವಿಲ್ಲ ಎಂಬ ಕಾರಣ ನೀಡಿರುವ ಸಚಿವ ಮಾಧುಸ್ವಾಮಿ ವಿರುದ್ಧ ಕಾಂಗ್ರೆಸ್ ಮಾಜಿ ಸಚಿವ ಜಯಚಂದ್ರ ಸಿಡಿದೆದ್ದಿದ್ದಾರೆ. ಒಂದು ವೇಳೆ ನೀರು ಹರಿಸದೇ ಹೋದರೆ ಮದಲೂರು ಕೆರೆಯಿಂದ ಆಗಸ್ಟ್‌ 21 ರಂದು ತುಮಕೂರು ಕಾವೇರಿ ನೀರಾವರಿ ನಿಗಮ ಕಚೇರಿವರೆಗೆ ಪಾದಯಾತ್ರೆ ಮಾಡಿ ಮುತ್ತಿಗೆ‌ ಎಚ್ಚರಿಕೆ ನೀಡಿದ್ದಾರೆ.

blank

ಆದರೆ ಈ ವರ್ಷ ಮದಲೂರು ಕೆರೆಗೆ ನೀರು ಹರಿಸಲು ಕಾನೂನಿನ ತೊಡಕಿದೆ ಎಂದು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹೇಳಿದ ಬಳಿಕ ಶಿರಾ ಬಿಜೆಪಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಇದೀಗ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅದಲ್ಲದೆ ತುಮಕೂರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ರವರನ್ನು ಭೇಟಿ ಮಾಡಿ ಮದಲೂರು ಕೆರೆಗೆ ನೀರು ಹರಿಸುವಂತೆ ಮನವಿ ಮಾಡಿದ್ದಾರೆ. ಇಲ್ಲವಾದಲ್ಲಿ ಶಿರಾ ಜನರಿಗೋಸ್ಕರ ಹೋರಾಟ ಮಾಡಲು ಮುಂದಾಗಿದ್ದಾರೆ.

blank

ಒಟ್ಟಾರೆ ಶಿರಾ ತಾಲೂಕು ಅತ್ಯಂತ ಹಿಂದುಳಿದ ಪ್ರದೇಶ. ಸಂಪೂರ್ಣ ಒಣ ಪ್ರದೇಶವಾಗಿದ್ದು, ಈ ಭಾಗದ ಜನರಿಗೆ ಕುಡಿಯಲು ನೀರು ಬಿಡಬೇಕೆಂದು ಶಾಸಕರ ಮನವಿ. ಆದರೆ ಮದಲೂರು ಕೆರೆ ನೀರು ಹರಿಸಲು ಕಾನೂನು ತೊಡಕಿದೆ ಎಂಬ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಕಾಂಗ್ರೆಸ್ ಪಾದಯಾತ್ರೆ ಮಾಡಲು ಮುಂದಾಗಿದೆ. ಇದೆಲ್ಲದರ ನಡುವೆ ಪಟ್ರಾವತನಹಳ್ಳಿಯ ಮೂಲಕ ಶಿರಾ ಭಾಗದ ಕಡೆ ಹರಿದ ಹೇಮೆ ನೀರು, ಶಿರಾ ಮತ್ತು ಕಳ್ಳಂಬೆಳ್ಳ ಕೆರೆಗಳಿಗೆ ಮಾತ್ರ ಸಿಮೀತವಾಗುತ್ತಾ ಅಥವಾ ಮದಲೂರು ಕೆರೆಗೂ ಹರಿಯುತ್ತಾ ಕಾದು ನೋಡ ಬೇಕಿದೆ.

Source: newsfirstlive.com Source link