ಮದುವೆಗೆ ಮನೆಯವರ ವಿರೋಧ; ಕಾರಿನಲ್ಲೇ ಬೆಂಕಿ ಹಂಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

ಮದುವೆಗೆ ಮನೆಯವರ ವಿರೋಧ; ಕಾರಿನಲ್ಲೇ ಬೆಂಕಿ ಹಂಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

ಚಾಮರಾಜನಗರ: ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಪ್ರೇಮಿಗಳ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಕೊಳ್ಳೇಗಾಲ ತಾಲೂಕು ತೇರಂಬಳ್ಳಿ ಕೆರೆ ಬಳಿ ಇಬ್ಬರು ಪ್ರೇಮಿಗಳು ಕಾರಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯಳಂದೂರು ತಾಲ್ಲೂಕು ಮಾಂಬಳ್ಳಿ ಗ್ರಾಮದ ಕಾಂಚನಾ (20) ಹಾಗು ಶ್ರೀನಿವಾಸ್(26) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಮದುವೆಗೆ ಮನೆಯವರು ಒಪ್ಪದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಾರಿನೊಳಗೆ ಸೀಮೆ ಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ‘ನಾವೆಲ್ಲ ಸೀಟ್​ಗಾಗಿ ಕಚ್ಚಾಡ್ತಿದ್ದೀವಿ.. ರಕ್ಷಾಗೆ ಇನ್ನೂ ಚೇರ್ ಬೆಲೆ ಗೊತ್ತಿಲ್ಲ’ -DKS ಕಿವಿಮಾತು

Source: newsfirstlive.com Source link