ಇಂಡೋ-ಇಂಗ್ಲೆಂಡ್​ 2ನೇ ಟೆಸ್ಟ್​: ಮೊದಲ ಇನ್ನಿಂಗ್ಸ್​​​ನಲ್ಲಿ ಭಾರತ 364ರನ್​​ಗೆ ಆಲೌಟ್​

ಇಂಡೋ-ಇಂಗ್ಲೆಂಡ್​ 2ನೇ ಟೆಸ್ಟ್​: ಮೊದಲ ಇನ್ನಿಂಗ್ಸ್​​​ನಲ್ಲಿ ಭಾರತ 364ರನ್​​ಗೆ ಆಲೌಟ್​

ಇಂಗ್ಲೆಂಡ್​ ವಿರುದ್ಧದ ದ್ವಿತೀಯ ಟೆಸ್ಟ್​ನಲ್ಲಿ ಮೊದಲ ದಿನದಾಟ ಮೇಲುಗೈ ಸಾಧಿಸಿದ್ದ ಭಾರತ, ಎರಡನೇ ದಿನದಾಟ ಸಂಪೂರ್ಣ ಹಿಡಿತ ಕಳೆದುಕೊಂಡಿತು. ಇಂಗ್ಲೆಂಡ್​ ಬೌಲರ್​ಗಳ ಬಿಗಿ ದಾಳಿಯಿಂದ ಭಾರತ ಇಂದು 7 ವಿಕೆಟ್​ ಕಳೆದುಕೊಂಡು ಕೇವಲ 88 ರನ್​ ಅಷ್ಟೇ ಕಲೆಹಾಕಿತು. ಆ ಮೂಲಕ ವಿರಾಟ್​ ಸೇನೆ ಮೊದಲ ಇನ್ನಿಂಗ್ಸ್​​ನಲ್ಲಿ 364 ರನ್​​ಗಳಿಗೆ ಆಲೌಟ್​ ಆಯ್ತು.

ಮೊದಲ ದಿನದಾಟದ ಅಂತ್ಯಕ್ಕೆ 276ರನ್​ ಗಳಿಸಿ 3 ವಿಕೆಟ್​ ಕಳೆದುಕೊಂಡಿದ್ದ ಭಾರತ ಇಂದು ಎರಡನೇ ದಿನದಾಟವನ್ನ ಆರಂಭಿಸಿತು. ದಿನದಾಟದ ಆರಂಭದಲ್ಲೇ ಆಘಾತ ಎದುರಿಸಿದ ವಿರಾಟ್​ ಕೊಹ್ಲಿ ಪಡೆ, ಶತಕ ಸಿಡಿಸಿ 2ನೇ ದಿನದಾಟಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದ ಕೆ.ಎಲ್​.ರಾಹುಲ್​ ಮತ್ತು ಅಜಿಂಕ್ಯ ರಹಾನೆ ಬೇಗನೆ ವಿಕೆಟ್​ ಒಪ್ಪಿಸಿ ನಿರ್ಗಮಿಸಿದರು. ರಾಹುಲ್​ 129ರನ್​, ರಹಾನೆ 1 ರನ್​ಗೆ ಆಟವನ್ನು ಮುಗಿಸಿದರು.

blank

ಬಳಿಕ ರಿಷಭ್​ ಪಂತ್​ ಮತ್ತು ರವೀಂದ್ರ ಜಡೇಜಾ ತಂಡಕ್ಕೆ ಚೇತರಿಕೆ ನೀಡಿದರು. ಪಂತ್​​ 37ರನ್​ ಮತ್ತು ಜಡೇಜಾ 40 ರನ್​ ಕಲೆಹಾಕಿದರು. ಹೀಗಾಗಿ ತಂಡದ ಮೊತ್ತ 350 ತಲುಪಲು ನೆರವಾಯಿತು. ಇನ್ನು ಇಶಾಂತ್​ ಶರ್ಮಾ 8, ಮೊಹಮ್ಮದ್​ ಶಮಿ, ಜಸ್​ಪ್ರಿತ್​ ಬೂಮ್ರಾ ಸೊನ್ನೆ ಸುತ್ತಿ ಪೆವಿಲಿಯನ್​ ಸೇರಿದರು. ಇನ್ನು ಇಂಗ್ಲೆಂಡ್ ಪರ ಜೇಮ್ಸ್​ ಆ್ಯಂಡರ್​ಸನ್ 5, ಮಾರ್ಕ್​ವುಡ್​, ರಾಬಿನ್​ಸನ್​ ತಲಾ 2 ವಿಕೆಟ್​ ಮತ್ತು ಮೊಯಿನ್ ಅಲಿ 1 ವಿಕೆಟ್ ಕಬಳಿಸಿದರು. ಸದ್ಯ ಇಂಗ್ಲೆಂಡ್​ ಬ್ಯಾಟಿಂಗ್​ ಆರಂಭಿಸಿದೆ.

Source: newsfirstlive.com Source link