ಕೊನೊಗೆ ಅಂದುಕೊಂಡದನ್ನು ಸಾಧಿಸಿಯೇ ಬಿಟ್ಟರು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ

ಕೊನೊಗೆ ಅಂದುಕೊಂಡದನ್ನು ಸಾಧಿಸಿಯೇ ಬಿಟ್ಟರು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ

ಸಿನಿಮಾ ರಂಗದಲ್ಲಿ ದೊಡ್ಡ ಸಾಧನೆ ಮಾಡಬೇಕು, ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಸಿನಿಮಾಗಳನ್ನ ಕೊಡಬೇಕು ಅಂದುಕೊಂಡು ಚಿತ್ರರಂಗಕ್ಕೆ ಬಂದವರು ನಿರ್ಮಾಪಕ ಉಮಾಪತಿ ಶ್ರಿನಿವಾಸ್​ ಗೌಡ. ಆದ್ರೆ ಕೆಲ ದಿನಗಳ ಹಿಂದೆ ಅವರ ಸಿನಿಮಾಗಳಿಗಿಂತ ಕಾಂಟ್ರವರ್ಸಿಗಳಲ್ಲೇ ಅವರ ಹೆಸರು ಹೆಚ್ಚಾಗಿ ಕೇಳಿಬಂದಿತ್ತು.

ಕೆಲ ದಿನಗಳ ಹಿಂದೆ ತನ್ನ ಹೆಸರಿಗೆ ಬಂದ ಆರೋಪದಿಂದ ಕೊಂಚ ಬೇಸರದಲ್ಲಿದ ಉಮಾಪತಿಯವರು ಆದ ನೋವನೆಲ್ಲ ಮರೆತು ತಾನು ಕೂಡ ರಾಮೋಜಿರಾವ್​ ಫಿಲ್ಮ್​ ಸಿಟಿಯ ರೀತಿ ಮತ್ತೊಂದು ಫಿಲ್ಮ್ ಸಿಟಿಯನ್ನ ಕಟ್ಟಬೇಕೆಂಬ ಎಂಬ ಕನಸನ್ನು ಹೊತ್ತುಕೊಂಡಿದ್ದರು. ಅದ್ರೆ ಕಾಂಟ್ರವರ್ಸಿ ಬಳಿಕ ಉಮಾಪತಿ ಮತ್ತೆ ಫಿಲ್ಮ್​ ಸಿಟಿ ಕಟ್ಟೊದಿಲ್ಲ ಹಾಗೇ ಈಗೇ ಅಂತಾ ಒಂದಿಷ್ಟು ಮಾತು ಗಾಂಧಿನಗರದಲ್ಲಿ ಕೇಳಿಬಂದಿತ್ತು. ಅದ್ರೆ ಆದಕೆಲ್ಲ ತಲೆಕೆಡಿಸಿಕೊಳ್ಳದ ಉಮಾಪತಿ ಕೊನೆಗೂ ತಾನು ಅಂದುಕೊಂಡಂತೆ ತನ್ನ ಡ್ರಿಮ್​ ಪ್ರಾಜೆಕ್ಟ್​ ಕಟ್ಟುವ ಕೆಲಸವನ್ನ ಪ್ರಾರಂಭಿಸಿದ್ದಾರೆ.

ಬೆಂಗಳೂರಿನ ಕನಕಪುರ ರೋಡ್​ ಬಳಿ ಇರುವ ಉತ್ರಿಯಲ್ಲಿ ಇಂದು ಉಮಾಪತಿ ಭೂಮಿಪೂಜೆ ನೆರವೆರಿಸಿದ್ದಾರೆ. ಅಂದಾಜು 25 ಏಕ್ಕರೆ ಜಾಗದಲ್ಲಿ ಸುಮಾರು 175 ಕೋಟಿ ವೆಚ್ಚದಲ್ಲಿ ಉಮಾಪತಿ ಫಿಲ್ಮ್​ ಸಿಟಿ ನಿರ್ಮಾಣವಾಗಲಿದು. ಎಲ್ಲವು ಅಂದುಕೊಂಡಂತೆ ಅದರೆ ಮುಂದಿನ ವರ್ಷದಿಂದಲ್ಲೆ ಚಿತ್ರಿಕರಣಕ್ಕೆ ಲಭ್ಯವಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

Source: newsfirstlive.com Source link