ಕೈ ತುಂಬ ದುಡ್​ ಸಿಗುತ್ತೆ ಎಂಬ ಆಸೇಲಿ ಬ್ಯಾಂಕಿಗೆ ಹೋದ ಕಳ್ಳನಿಗೆ ಆಗಿದ್ದೇನು ಗೊತ್ತಾ?

ಕೈ ತುಂಬ ದುಡ್​ ಸಿಗುತ್ತೆ ಎಂಬ ಆಸೇಲಿ ಬ್ಯಾಂಕಿಗೆ ಹೋದ ಕಳ್ಳನಿಗೆ ಆಗಿದ್ದೇನು ಗೊತ್ತಾ?

ನಾವು ಚಿಕ್ಕವರಿದ್ದಾಗ, ನಮ್ಮ ಅಪ್ಪ ಅಮ್ಮ ನಮಗೆ ಕೈಗೆ ಹೊಡ್ದು ಹೊಡ್ದು, ಬರೆಯೋದನ್ನ ಕಲ್ಸಿರ್ತಾರೆ. ಅಷ್ಟ್​ ಕಲ್ಸಿ ಕೂಡ ಅದೆಷ್ಟೋ ಜನರ ಹ್ಯಾಂಡ್​ರೈಟಿಂಗ್​ ಅಷ್ಟೇ ಕೆಟ್ದಾಗಿರುತ್ತೆ. ಏನಿಕ್ಕೆ ಈಗ ಹ್ಯಾಂಡ್​ರೈಟಿಂಗ್​ ಬಗ್ಗೆ ಮಾತಾಡ್ತಾಯಿದ್ದೀವಿ ಅಂದ್ರೆ, ಒಬ್ಬ ಮಹಾನ್​ ಚಾಲಾಕಿ, ಕಳ್ಳತನ ಮಾಡೋದಕ್ಕೆ ಹೋಗಿ ಸಿಕ್ಕಿಬಿದ್ದಿದ್ದಾನೆ. ಅದು, ಹ್ಯಾಂಡ್​ರೈಂಟಿಂಗ್​ನಿಂದ.

blank

ಇಂಗ್ಲಾಂಡ್​ನಲ್ಲಿ ಒಬ್ಬ ಕಳ್ಳ, ಬ್ಯಾಂಕ್​ನ ಕಳ್ಳತನ ಮಾಡಲು ಹೋಗಿ, ಸಿಕ್ಕಿಬಿದ್ದಿದ್ದಾನೆ. ತಾನು ಬ್ಯಾಂಕ್​ ಎಂಪ್ಲಾಯಿ ಬಳಿ, ತನ್ನ ಕೆಟ್​ ಹ್ಯಾಂಡ್ ​ರೈಟಿಂಗ್​ನಿಂದ ಸಿಕ್ಕಿಬಿದ್ದಿದ್ದಾನೆ. ಕಳ್ಳ, ಕೈಯಲ್ಲಿ ಒಂದು ಥ್ರೆಟನ್​ ನೊಟ್​ನ ಹಿಡಿದು, ಅದರಲ್ಲಿ ತನಗೆ ದುಡ್ಡು ಬೇಕು ಅಂತ ಬರೆದು, ಅದನ್ನ ಒಬ್ಬ ಸ್ಟಾಫ್​ ಕೈಗೆ ಕೊಟ್ಟಿದ್ದಾನೆ. ಆ ಕಳ್ಳ ಕೊಟ್ಟಿದ್ದ ನೋಟ್​ನಲ್ಲಿ “ನಾನು ಪಡೆದುಕೊಂಡದ್ದನ್ನು ನಿಮ್ಮ ಪರದೆಯು ನಿಲ್ಲಿಸುವುದಿಲ್ಲ, ಕೇವಲ 10 ಮತ್ತು 20 ಗಳನ್ನು ನೀಡಿ. ಇತರ ಗ್ರಾಹಕರ ಬಗ್ಗೆ ಯೋಚಿಸಿ”.ಆದ್ರೆ, ಆತ, ಬರೆದಿರೋದು ಏನು ಅಂತ ಸ್ಟಾಫ್​ಗೆ ಗೊತ್ತಾಗದೇ, ಆ ಕಳ್ಳ ಬರೀ ಕೈನಲ್ಲಿ ಅಲ್ಲಿಂದ ಆಚೆ ಬಂದಿದ್ದಾನೆ. ಅದಕ್ಕೆ ಹೇಳೋದು, ಬರೆಯೋದನ್ನ ಕ್ಲೀನ್​ ಆಗಿ ಕಲಿತುಕೊಳ್ಳಿ ಅಂತ.

Source: newsfirstlive.com Source link