‘ಮನಸ್ಸಿನಲ್ಲಿ ಏನೇನೋ ಇಟ್ಕೊಂಡು ಮಾತನಾಡುತ್ತಿದ್ದಾರೆ’ -ಸ್ವಪಕ್ಷದ ಶಾಸಕನಿಗೆ ಸಿ.ಟಿ.ರವಿ ಸವಾಲ್

‘ಮನಸ್ಸಿನಲ್ಲಿ ಏನೇನೋ ಇಟ್ಕೊಂಡು ಮಾತನಾಡುತ್ತಿದ್ದಾರೆ’ -ಸ್ವಪಕ್ಷದ ಶಾಸಕನಿಗೆ ಸಿ.ಟಿ.ರವಿ ಸವಾಲ್

ಚಿಕ್ಕಮಗಳೂರು: ಬಿ.ಎಸ್​ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದಲ್ಲಿ ನಾನು ಸಚಿವನಾಗಿದ್ದಾಗ ಮೂಡಿಗೆರೆಗೆ ಅತೀಹೆಚ್ಚು ಅನುದಾನ ಕೊಡಿಸಿದ್ದೆ. ಈ ನನ್ನ ಮಾತು ಸುಳ್ಳಾದ್ರೆ ಕೂಡಲೇ ಅವರು ನನ್ನನ್ನು ಪ್ರಶ್ನೆ ಮಾಡಲಿ ಎಂದು ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಬಿಜೆಪಿ ಶಾಸಕ ಕುಮಾರಸ್ವಾಮಿಗೆ ಸವಾಲ್​​ ಹಾಕಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಸಿ.ಟಿ ರವಿ, ನಾನು ಅಧಿಕಾರ ಬಿಟ್ಟು ಪಕ್ಷದ ಕೆಲಸಕ್ಕೆ ಹೋಗಿದ್ದೇನೆ. ನನಗೆ ಅಧಿಕಾರದ ಆಸೆ ಇದಿದ್ರೆ ನಾನು ಸಚಿವನಾಗಿಯೇ ಇರುತ್ತಿದೆ. ನಾನು ಸಚಿನಾಗಿದ್ದಾಗ ಮೂಡಿಗೆರೆಗೆ ಅತೀ ಹೆಚ್ಚು ಅನುದಾನ ಕೊಡಿಸಿದ್ದೇನೆ. ಎಂ.ಪಿ ಕುಮಾರಸ್ವಾಮಿ ಏನೇನೋ ಮನಸ್ಸಿನಲ್ಲಿ ಇಟ್ಕೊಂಡು ಮಾತಾಡುತ್ತಿದ್ದಾರೆ. ನಾನು ಅನುದಾನ ಕೊಟ್ಟಿಲ್ಲ ಅಂದ್ರೆ ತೋರಿಸಲಿ.. ಅವರ ಗೆಲುವಿಗೆ ನಮ್ಮ ಶ್ರಮ ಕೂಡ ಇದೆ ಎಂದರು.

ಕುಮಾರಸ್ವಾಮಿ ಮೊದಲು ತಮ್ಮ ಕ್ಷೇತ್ರದ ವ್ಯಾಪ್ತಿಯನ್ನ ತಿಳಿದುಕೊಳ್ಳಲಿ. ನಾನು ಅನುದಾನಕ್ಕೆ ನೀಡಿದ್ದನ್ನು ಜಿಲ್ಲಾಧಿಕಾರಿಗಳ ಬಳಿ ದಾಖಲೆ ತೆಗೆಸಿ ನೋಡಲಿ. ಅವರಿಗೆ ಶಕ್ತಿ ಮೀರಿ ಅನುದಾನವನ್ನು ಕೊಟ್ಟಿದ್ದೇನೆ. ಎಂ.ಪಿ ಕುಮಾರಸ್ವಾಮಿ ಬೇರೆಯದ್ದೇ ಉದ್ದೇಶ ಇಡ್ಕೊಂಡು ಮಾತಾಡಿದ್ದಾರೆ ಎಂದು ಕುಟುಕಿದ್ದರು.

ಇದನ್ನೂ ಓದಿ: ‘ಮುಖ್ಯಮಂತ್ರಿ ಆಗ್ಬೇಕು ಅಂತಾ ನಾನು ಗಡ್ಡ ಬಿಟ್ಟಿಲ್ಲ’ -ಸಿ.ಟಿ ರವಿ

Source: newsfirstlive.com Source link