ಖಝಕಿಸ್ತಾನ್​​ಗೆ ಓಡಿ ಹೋದ ಅಫ್ಘಾನ್​ ಉಪಾಧ್ಯಕ್ಷ; ತಾಲಿಬಾನ್​​ ಮಧ್ಯಂತರ ಸರ್ಕಾರ ಸಾಧ್ಯತೆ

ಖಝಕಿಸ್ತಾನ್​​ಗೆ ಓಡಿ ಹೋದ ಅಫ್ಘಾನ್​ ಉಪಾಧ್ಯಕ್ಷ; ತಾಲಿಬಾನ್​​ ಮಧ್ಯಂತರ ಸರ್ಕಾರ ಸಾಧ್ಯತೆ

ಅಪ್ಘಾನ್​​: ತಾಲಿಬಾನ್​​​ ಸಂಘಟನೆ ಅಫ್ಘಾನಿಸ್ತಾನದ ಎರಡು ಪ್ರಮುಖ ನಗರಗಳಾದ ಕಂದಹಾರ್ ಮತ್ತು ಲಷ್ಕರ್ ಗಾಹ್ ಅನ್ನು ವಶಪಡಿಸಿಕೊಂಡಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಅಧ್ಯಕ್ಷ ಅಶ್ರಫ್ ಘನಿ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರ ಪತನವಾಗಲಿದೆ. ಬಳಿಕ ಅಫ್ಘಾನಿಸ್ತಾನದಲ್ಲಿ ತಾಲಿಬಾನ್​​ ನೇತೃತ್ವದ ಮಧ್ಯಂತರ ಸರ್ಕಾರ ಬರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಸರ್ಕಾರದ ಪತನದ ಭೀತಿ ಬೆನ್ನಲ್ಲೇ ಅಫ್ಘಾನಿಸ್ತಾನದ ಮೊದಲ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್​​ ಖಝಕಿಸ್ತಾನ್​​ಗೆ ಪರಾರಿಯಾಗಿದ್ದಾರೆ. ತಾಲಿಬಾನ್​​ಗೆ ಅಫ್ಘಾನ್ ಪಡೆಗಳು ದೇಶದ ಮೂರನೇ ಅತೀ ದೊಡ್ಡ ನಗರ ಎಂದೇ ಕರೆಯಲಾಗುವ ಹೆರಾತ್ ಅನ್ನು ಬಿಟ್ಟುಕೊಟ್ಟ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ.

ಇನ್ನು, ತಾಲಿಬಾನ್​​​ ತನ್ನ ದೇಶದ ಎರಡು ನಗರಗಳನ್ನು ವಶಪಡಿಸಿಕೊಂಡಿದೆ ಎಂದು ಖುದ್ದು ಅಫ್ಘಾನ್ ಪಡೆಗಳೇ ಸ್ಪಷ್ಟಪಡಿಸಿವೆ. ತಾಲಿಬಾನ್ ಹೆರಾತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಂಪೂರ್ಣ ನಿಯಂತ್ರಣ ತೆಗೆದುಕೊಂಡು ಇಡೀ ಅಫ್ಘಾನಿಸ್ತಾನ ವಶಕ್ಕೆ ಮುಂದಾಗಿದೆ.

ಇದನ್ನೂ ಓದಿ: ಆಫ್ಘಾನ್​​ನಲ್ಲಿ ಮುಂದುವರಿದ ತಾಲಿಬಾನಿಗಳ ವಿಕೃತಿ; ಕಂದಹಾರ್ ಆಯ್ತು.. ಕಾಬೂಲ್​ ಮೇಲೆ ಕಣ್ಣಿಟ್ಟ ಉಗ್ರರು

ಈ ಹಿಂದೆಯೇ ತಾಲಿಬಾನ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದ ವಾಷಿಂಗ್ಟನ್‌ ತನ್ನ ಸೇನೆಯನ್ನು ಅಫ್ಘಾನಿಸ್ತಾನದಿಂದ ಹಿಂದಕ್ಕೆ ತೆಗೆದುಕೊಂಡಿತ್ತು. ಈ ಬೆನ್ನಲ್ಲೇ ಅಮೆರಿಕಾ ಸೇನೆಯೂ ಅಫ್ಘಾನ್‌ ನೆಲ ತೊರೆಯುತ್ತಿದ್ದಂತೆ ತಾಲಿಬಾನ್‌ ಅಟ್ಟಹಾಸ ಶುರುವಾಯ್ತು. ಅಫ್ಘಾನಿಸ್ತಾನದ ಮೇಲೆ ತನ್ನ ದಾಳಿಯನ್ನು ಆರಂಭಿಸಿದ ತಾಲಿಬಾನ್​​ ಈಗ ಮಧ್ಯಂತರ ಸರ್ಕಾರ ರಚನೆ ಮಾಡಲು ಸಿದ್ಧತೆ ನಡೆಸಿಕೊಂಡಿದೆ ಎಂದು ತಿಳಿದು ಬಂದಿದೆ.

ಇನ್ನು ತನ್ನ ದೇಶದ ಜನರನ್ನು ರಕ್ಷಿಸಿ ಸುರಕ್ಷಿತವಾಗಿ ಕರೆತರಲು ಮತ್ತೊಮ್ಮೆ ಅಮೆರಿಕಾ 3 ಸಾವಿರ ಸೈನಿಕರನ್ನು ಅಫ್ಘಾನಿಸ್ತಾನಕ್ಕೆ ಕಳಿಸುತ್ತಿದೆ. ಅಲ್ಲದೇ ಇಂಗ್ಲೆಂಡ್ ಸಹ 600 ಸೈನಿಕರನ್ನು ಕಳಿಸುತ್ತಿರೋದಾಗಿ ತಿಳಿದು ಬಂದಿದೆ.

Source: newsfirstlive.com Source link