28ನೇ ವಯಸ್ಸಿಗೆ ನಿವೃತ್ತಿ ಘೋಷಿಸಿ ಶಾಕ್ ಕೊಟ್ಟ U-19 ವಿಶ್ವಕಪ್​​ ಗೆದ್ದು ಕೊಟ್ಟ ನಾಯಕ

28ನೇ ವಯಸ್ಸಿಗೆ ನಿವೃತ್ತಿ ಘೋಷಿಸಿ ಶಾಕ್ ಕೊಟ್ಟ U-19 ವಿಶ್ವಕಪ್​​ ಗೆದ್ದು ಕೊಟ್ಟ ನಾಯಕ

ಅಂಡರ್​​​-19 ಕ್ರಿಕೆಟ್​​ನಲ್ಲಿ ವಿಶ್ವಕಪ್​​​ ಗೆದ್ದುಕೊಟ್ಟ ನಾಯಕ ಉನ್ಮುಕ್ತ್​ ಚಾಂದ್ ಟೀಮ್​​ ಇಂಡಿಯಾ ಕ್ರಿಕೆಟ್​​ಗೆ​ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ನಿವೃತ್ತಿ ಘೋಷಿಸಿರುವ ಚಾಂದ್​, ರಾಷ್ಟ್ರೀಯ ತಂಡದಲ್ಲಿ ಅವಕಾಶಕ್ಕಾಗಿ ಚಾತಕ ಪಕ್ಷಿಯಂತೆ ಎದುರು ನೋಡಿದ್ದರು. ಆದರೀಗ ಬೇರೆ ದೇಶಗಳ ತಂಡಗಳೊಂದಿಗೆ ಕಣಕ್ಕಿಳಿಯಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಅಮೆರಿಕಾದ ಯುನೈಟೆಡ್ ಸ್ಟೇಟ್ಸ್‌ ತಂಡವನ್ನ ಚಾಂದ್​ ಸೇರಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಚಾಂದ್​​ ವಯಸ್ಸು 28 ಆಗಿದ್ದು, ವಯಸ್ಸು ಮೀರುವ ಮುನ್ನವೇ ವಿದೇಶದಲ್ಲಿಯಾದರೂ ನೆಲೆ ಕಂಡುಕೊಳ್ಳಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ನಿವೃತ್ತಿ ಘೋಷಿಸಿದ ವಿಚಾರವನ್ನ ಉನ್ಮುಕ್ತ್ ಚಾಂದ್​​, ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಟೀಮ್​ ಇಂಡಿಯಾ ಪರ ಆಡಲು ಅವಕಾಶ ಸಿಕ್ಕಿಲ್ಲ. ಹಾಗಾಗಿ ಚಾನ್ಸ್​​ಗಾಗಿ ಬೇರೆಡೆ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇದುವರೆಗೂ ಉನ್ಮುಕ್ತ್ ಚಾಂದ್ ಭಾರತ ಅಂಡರ್-19, ಭಾರತ ‘ಎ’, ಭಾರತ ‘ಬಿ’, ದೆಹಲಿ, ಉತ್ತರ ವಲಯ, ರೆಸ್ಟ್ ಆಫ್ ಭಾರತ, ಭಾರತೀಯ ಮಂಡಳಿ ಅಧ್ಯಕ್ಷರ ಇಲೆವೆನ್, ಉತ್ತರಾಖಂಡ ಸೇರಿದಂತೆ ಐಪಿಎಲ್​​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ ರಾಯಲ್ಸ್, ಮುಂಬೈ ಇಂಡಿಯನ್ಸ್ ತಂಡಗಳ ಪರ ಆಡಿದ್ದಾರೆ. ಲಿಸ್ಟ್​ ಎ ಮಾದರಿಯಲ್ಲಿ 120 ಪಂದ್ಯಗಳಿಂದ 4505 ರನ್​ ಸಿಡಿಸಿದ್ದು, ಟಿ-20 ಮಾದರಿಯಲ್ಲಿ 77 ಪಂದ್ಯಗಳಲ್ಲಿ 1565 ರನ್​ಗಳಿಸಿದ್ದಾರೆ.

Source: newsfirstlive.com Source link