ತಮಿಳುನಾಡಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹3 ಇಳಿಕೆ; ಕರ್ನಾಟಕದಲ್ಲಿ ಯಾವಾಗ? ಎಂದ್ರು ಸಿದ್ದರಾಮಯ್ಯ

ತಮಿಳುನಾಡಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹3 ಇಳಿಕೆ; ಕರ್ನಾಟಕದಲ್ಲಿ ಯಾವಾಗ? ಎಂದ್ರು ಸಿದ್ದರಾಮಯ್ಯ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 3 ರೂಪಾಯಿ ಕಡಿಮೆ ಮಾಡಿ ಆದೇಶಿಸಿದೆ. ಈ ಬಗ್ಗೆ ಖುದ್ದು ತಮಿಳುನಾಡು ಹಣಕಾಸು ಮತ್ತು ಮಾನವ ಸಂಪನ್ಮೂಲ ಸಚಿವ ಪಿಟಿಆರ್ ಪಳನಿವೇಲ್ ತ್ಯಾಗರಾಜನ್​​ ತಮ್ಮ ಬಜೆಟ್ ಭಾಷಣದಲ್ಲಿ ಘೋಷಣೆ ಮಾಡಿದ್ದಾರೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 1,160 ಕೋಟಿ ರೂಪಾಯಿ ನಷ್ಟವಾಗಲಿದೆ. ಆದರೆ, ನಮ್ಮ ಸರ್ಕಾರ ದುಡಿಯುವ ವರ್ಗಕ್ಕೆ ಸ್ವಲ್ಪ ಸಮಾಧಾನ ನೀಡುವ ಪ್ರಯತ್ನವಾಗಿ ಪೆಟ್ರೋಲ್ ಮೇಲಿನ ರಾಜ್ಯದ ಸುಂಕವನ್ನು ಪ್ರತೀ ಲೀಟರ್​ಗೆ 3 ರೂಪಾಯಿ ಕಡಿಮೆ ಮಾಡಿದ್ದೇವೆ ಎಂದಿದ್ದಾರೆ. ತಮಿಳುನಾಡು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್​​ ಮಾಡಿದ್ದಾರೆ.

ಪೆಟ್ರೋಲ್​​ ಮೇಲಿನ ಸುಂಕವನ್ನು 3 ರೂಪಾಯಿ ಇಳಿಸಿ ತಮಿಳುನಾಡು ಸರ್ಕಾರ ಲಕ್ಷಾಂತರ ಜನರಿಗೆ ಸಹಾಯ ಮಾಡಿದೆ. ನಾನು ಸಿಎಂ ಬಸವರಾಜ್​​​ ಅವರಿಗೆ ತಮಿಳುನಾಡು ಸರ್ಕಾರದಂತೆಯೇ ನಮ್ಮ ರಾಜ್ಯದಲ್ಲೂ ಲೀಟರ್ ಪೆಟ್ರೋಲ್ ಬೆಲೆ 3 ರೂಪಾಯಿ ಇಳಿಕೆ ಮಾಡಿ ಮನವಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಟ್ವೀಟ್​​ನಲ್ಲಿ ಬರೆದುಕೊಂಡಿದ್ದಾರೆ.

ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಇಂಧನ ಬೆಲೆ ಗಗನಕ್ಕೇರಿದೆ. ಮೇ 3ರ ನಂತರವಂತೂ ಬಹುತೇಕ ಎಲ್ಲಾ ಕಡೆ ಪೆಟ್ರೋಲ್ ಬೆಲೆ ಒಂದು ಲೀಟರ್​​ಗೆ 100 ರೂಪಾಯಿಯ ಗಡಿ ದಾಟಿದೆ. ಮಧ್ಯ ಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಒಡಿಶಾ, ತಮಿಳುನಾಡು, ಕೇರಳ, ಬಿಹಾರ, ಪಂಜಾಬ್, ಉತ್ತರ ಪ್ರದೇಶ, ಹರಿಯಾಣ ರಾಜಸ್ಥಾನ ಸೇರಿದಂತೆ 15 ರಾಜ್ಯಗಳಲ್ಲಿ ಈ ಬೆಲೆಯೇರಿಕೆ ಬಿಸಿ ತಟ್ಟಿದೆ.

ಇದನ್ನೂ ಓದಿ: ‘ಮನಸ್ಸಿನಲ್ಲಿ ಏನೇನೋ ಇಟ್ಕೊಂಡು ಮಾತನಾಡುತ್ತಿದ್ದಾರೆ’ -ಸ್ವಪಕ್ಷದ ಶಾಸಕನಿಗೆ ಸಿ.ಟಿ.ರವಿ ಸವಾಲ್

Source: newsfirstlive.com Source link