ಪರ್ಸನಲ್​ ಟಾರ್ಗೆಟ್​ ಮಾಡ್ತೀರಾ.. ನನ್ನ ಕ್ಯಾಪಸಿಟಿ ಏನು ಅಂತಾ ತೋರಿಸ್ತೀನಿ -ರಾಕ್​​ಲೈನ್ ವೆಂಕಟೇಶ್​

ಪರ್ಸನಲ್​ ಟಾರ್ಗೆಟ್​ ಮಾಡ್ತೀರಾ.. ನನ್ನ ಕ್ಯಾಪಸಿಟಿ ಏನು ಅಂತಾ ತೋರಿಸ್ತೀನಿ -ರಾಕ್​​ಲೈನ್ ವೆಂಕಟೇಶ್​

ಬೆಂಗಳೂರು: ಸ್ಯಾಂಡಲ್​ವುಡ್​ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ತಪ್ಪು ಆಸ್ತಿ ಲೆಕ್ಕ ನೀಡಿ ಪಾಲಿಕೆಗೆ ಕೋಟಿ ಕೋಟಿ ತೆರಿಗೆಯನ್ನ ವಂಚಿಸಿದ್ದಾರೆ ಎಂದು ಆರೋಪ ಮಾಡಿದ್ದ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅರೋಪಕ್ಕೆ ಪ್ರತಿಕ್ರಿಯೆ ನೀಡಿರುವ ರಾಕ್​​ಲೈನ್ ವೆಂಕಟೇಶ್​ ಅವರು, ನನಗೆ ರಮೇಶ್​ ಯಾರು ಅಂತಾ ಗೊತ್ತಿಲ್ಲ. ಯಾರೇ ಆದ್ರು ನನ್ನನ್ನು ಪರ್ಸನಲ್​​ ಆಗಿ ಟಾರ್ಗೆಟ್​ ಮಾಡ್ತೀರಾ ಅಂದರೇ ನನ್ನ ಕ್ಯಾಪಸಿಟಿ ಏನು ಅಂತಾ ತೋರಿಸ್ತೀನಿ ಎಂದು ನಿರ್ಮಾಪಕ ರಾಕ್​​ಲೈನ್​ ವೆಂಕಟೇಶ್​ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಕ್​​ಲೈನ್ ವೆಂಕಟೇಶ್​ ಅವರು, ರಾಜ್​​ ಕುಮಾರ್ ಅವರ ಹೆಸರು ಹೇಳಿಕೊಂಡು ಡೊನೇಷನ್ ಕೇಳಲು ಬಂದಿದ್ದರು. ಅದರಲ್ಲಿ ರಮೇಶ್ ಅಂತಾ ಹೆಸರಿನವರು ಇದ್ರು. ಆದರೆ ಈ ರಮೇಶ್​ ಅವರೋ ಬೇರೆ ಯಾರೋ ಅಂತಾ ಗೊತ್ತಿಲ್ಲ. ಆದ್ದರಿಂದಲೇ ನನಗೆ ತೊಂದರೆ ಕೊಡಲು ಆರಂಭ ಮಾಡಿದ್ದಾರಾ ಅಂತಾ ಅನ್ಸುತ್ತು. ಆದ್ರೆ ಸಡನ್​ ಆಗಿ ಬಿಬಿಎಂಪಿಯಿಂದ ಎಷ್ಟೋ ಜನರ ಹೆಸರು ರಿಲೀಸ್ ಆಗಿದ್ರು.. ನನ್ನನ್ನೇ ರಮೇಶ್​ ಟಾರ್ಗೆಟ್ ಏಕೆ ಮಾಡಿದ್ರು ಗೊತ್ತಿಲ್ಲ. ನನ್ನ ವಿರುದ್ಧ ಯಾರೋ ಆರೋಪ ಮಾಡಿದರೆ ನಾನು ತಲೆ ಕೆಡಿಸಿಕೊಳ್ಳೋದಿಲ್ಲ.

ಇದನ್ನೂ ಓದಿ: ‘ತನಿಖೆ ಮಾಡ್ಲಿ, ನನ್ನದು ತಪ್ಪಿದ್ದರೆ ಸ್ಪಾಟಲ್ಲೇ ತೆರಿಗೆ ಕಟ್ತೀನಿ’ -ಆರೋಪಕ್ಕೆ ರಾಕ್​​ಲೈನ್ ಪ್ರತಿಕ್ರಿಯೆ

ಆದರೆ ನನ್ನನ್ನು ಪರ್ಸನಲ್​ ಆಗಿ ಟಾರ್ಗೆಟ್​ ಮಾಡ್ತೀರಾ.. ಮಾಡಿ. ನಿಮ್ಮ ಕ್ಯಾಪಸಿಟಿ ಏನೂ ನೀವು ತೋರಿಸಿ. ನನ್ನ ಕ್ಯಾಪಸಿಟಿ ಏನೂ ಅಂತಾ ನಾನು ತೋರಿಸುತ್ತೇನೆ. ಈ ವಿಚಾರಕ್ಕೆ ಕೋರ್ಟ್ ತಡೆಯಾಜ್ಞೆ ಕೊಟ್ಟಿದೆ. ಯಾರೇ ಬಂದರೂ ಅದನ್ನು ನಾವು ಕೊಡುತ್ತೇನೆ. ನಾನು ತಪ್ಪು ಮಾಡಿರೋದು ಸಾಬೀತು ಮಾಡಿದ್ರೆ ಅಷ್ಟು ದುಡ್ಡು ಬಿಬಿಎಂಪಿಗೆ ಕೊಡ್ತೀನಿ. ನನ್ನನ್ನು ಯಾರು ಟಾರ್ಗೆಟ್ ಮಾಡ್ತಾರೋ ಅವರಿಗೆ ಕಾನೂನು ಪ್ರಕಾರವಾಗಿಯೇ ಬುದ್ಧಿ ಕಲಿಸುತ್ತೇನೆ ಎಂದರು.

Source: newsfirstlive.com Source link