ಸತೀಶ್​​ ರೆಡ್ಡಿ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ಯಾಕೆ?; ಅಸಲಿ ಕಾರಣ ಬಿಚ್ಚಿಟ್ಟ ಕಮಲ್​​ ಪಂತ್​​

ಸತೀಶ್​​ ರೆಡ್ಡಿ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ಯಾಕೆ?; ಅಸಲಿ ಕಾರಣ ಬಿಚ್ಚಿಟ್ಟ ಕಮಲ್​​ ಪಂತ್​​

ಬೆಂಗಳೂರು: ಶಾಸಕ ಸತೀಶ್​​ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಶ್ರೀಧರ್, ಸಾಗರ್ ಮತ್ತು ನವೀನ್ ಎಂಬ ಮೂವರು ಬಂಧಿತ ಆರೋಪಿಗಳನ್ನು ಬಂಧಿಸಲಾಗಿದೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಬೆಂಗಳೂರು ಕಮೀಷನರ್​​ ಕಮಲ್ ಪಂತ್​​, ಆಗಸ್ಟ್​ 12ನೇ ತಾರೀಕು ಸತೀಶ್​​ ರೆಡ್ಡಿ 2 ಕಾರುಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಆರೋಪಿಗಳನ್ನು ಅರೆಸ್ಟ್​​ ಮಾಡಿದ್ದೇವೆ ಎಂದರು.

ಮೊದಲಿಗೆ ನಮಗೆ ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಕಾರಿಗೆ ಬೆಂಕಿ ಹಚ್ಚಿದ ಕೂಡಲೇ ನೈಟ್​​​ ಡ್ಯೂಟಿಯಲ್ಲಿದ್ದ ಪೊಲೀಸರು ಅಧಿಕಾರಿಗಳು ಸ್ಥಳಕ್ಕೆ ಹೋದರು. ಆಗ್ನೇಯ ಡಿಸಿಪಿ ಶ್ರೀನಾಥ್ ಜೋಷ್, ಹೆಚ್ಚುವರಿ ಆಯುಕ್ತ ಮುರುಗನ್ ಸ್ಥಳ ಪರಿಶೀಲಿಸಿ ಸ್ಥಳಿಯರಿಂದ ಮಾಹಿತಿ ಪಡೆದರು. ಬಳಿಕ ಎಸಿಪಿ ಕರಿಬಸವನಗೌಡ ನೇತೃತ್ವದಲ್ಲಿ 5 ಟೀಂ ರಚಿಸಲಾಗಿತ್ತು. ಬಳಿಕ ಸಿಸಿಟಿವಿ ದೃಶ್ಯ ಆಧಾರದ ಮೇರೆಗೆ ಸಂಜೆ ಮೂವರನ್ನು ಬಂಧಿಸಲಾಯ್ತು ಎಂದು ತಿಳಿಸಿದರು.

blank

ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಷಿ ನೇತೃತ್ವದಲ್ಲಿ ಟೆಕ್ನಿಕಲ್ ಎವಿಡೆನ್ಸ್ ಮೇಲೆ ಕಾರ್ಯಾಚರಣೆ ನಡೀತು. ಘಟನೆ ನಂತರ ಬೈಕ್ ಕಳುವಾಗಿದ್ದು ಗೊತ್ತಾಯ್ತು. ಬೈಕ್ ನಂಬರ್ ಪ್ಲೇಟ್ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಿದೆವು. ಮೂರು ಅಪರಾಧಿಗಳು ಅದೇ ಏರಿಯಾದಲ್ಲಿ ವಾಸವಿದ್ರು. ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿ ಮೂವರಿಗೆ ಇತ್ತು. ಮೂವರಲ್ಲಿ ಒಬ್ಬ ಎರಡು ಮೂರು ಬಾರಿ ಶಾಸಕರನ್ನ ಭೇಟಿಗೆ ಯತ್ನಿಸಿದ್ದ. ಆದರೆ ಆತನಿಗೆ ಭೇಟಿಯಾಗಲಿಕ್ಕೆ ಆಗಿರಲಿಲ್ಲ. ಪೊಲೀಸರು ಎಲ್ಲ ತರಹದ ಟೆಕ್ನಿಕಲ್ ಎವಿಡೆನ್ಸ್ ಕಲೆಕ್ಟ್ ಮಾಡಿದ್ದಾರೆ ಎಂದರು ಕಮಲ್ ಪಂತ್​​.

blank

ಇದನ್ನೂ ಓದಿ: ಸತೀಶ್ ರೆಡ್ಡಿ ಕಾರ್​ಗೆ ಬೆಂಕಿ; ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದ ಪೊಲೀಸರು

ಪೊಲೀಸ್ ಅಧಿಕಾರಿಗಳ ಕಾರ್ಯಕ್ಕೆ 1 ಲಕ್ಷ ಬಹುಮಾನ ಘೋಷಣೆ ಮಾಡಿದ್ದೇವೆ. ಆರೋಪಿಗಳನ್ನು ನಾಳೆಯಿಂದ ಪೊಲೀಸ್ ಕಸ್ಟಡಿಗೆ ಪಡೆಯುತ್ತೇವೆ. ಇದುವರೆಗಿನ ಮಾಹಿತಿ ಪ್ರಕಾರ ಮೂವರು ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿಲ್ಲ. ಶಾಸಕರ ಭೇಟಿಗೆ ಅವಕಾಶ ಸಿಕ್ಕಿಲ್ಲ ಅನ್ನೊ ಕಾರಣಕ್ಕೆ ಹೀಗೆ ಮಾಡಿದ್ದಾರೆ. ಘಟನೆಯ ನಂತರ ಸ್ವಲ್ಪ ದೂರದಲ್ಲಿ ಬೈಕ್ ಕಳುವಾಗಿತ್ತು. ಮೂವರು ಯಾವುದೇ ಕೆಲಸ ಮಾಡ್ತಿರಲಿಲ್ಲ. ಕೆಲಸ ಕೇಳಲಿಕ್ಕೆ ಶಾಸಕರ ಭೇಟಿಗೆ ಪ್ರಯತ್ನಿಸಿದ್ರು. ಅದ್ರೆ ಶಾಸಕರ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ ಎಂದು ಮಾಹಿತಿ ನೀಡಿದರು.

Source: newsfirstlive.com Source link