ಟಾಲಿವುಡ್​ನಲ್ಲಿ ‘ಪುಷ್ಪ’ ಘರ್ಜನೆ -ಕನ್ನಡದಲ್ಲಿ ‘ಮೇಕೆ ಜೋಕೆ’ ಎಂದ ವಿಜಯ್​ ಪ್ರಕಾಶ್​

ಟಾಲಿವುಡ್​ನಲ್ಲಿ ‘ಪುಷ್ಪ’ ಘರ್ಜನೆ -ಕನ್ನಡದಲ್ಲಿ ‘ಮೇಕೆ ಜೋಕೆ’ ಎಂದ ವಿಜಯ್​ ಪ್ರಕಾಶ್​

ರಕ್ತಚಂದನ ಕಳ್ಳ ಸಾಗಣಿಯನ್ನ ಹೇಳುತ್ತಾ ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನ ರಂಜಿಸಲು ಪುಷ್ಪ ಫಿಲ್ಮ್ ಟೀಮ್ ಸನ್ನದ್ಧವಾಗಿದೆ.. ಒಂದೊಳ್ಳೆ ಹಾಡನ್ನ ನಿಮಗಾಗಿ ನೀಡಲಿದ್ದೇವೆ ಎನ್ನುತ್ತಿದ್ದ ಪುಷ್ಪ ಫಿಲ್ಮ್ ಟೀಮ್ ಮೇಕೆ ಮೇಕೆ ಜೋಕೆ ಅನ್ನೋ ಹಾಡನ್ನ ಹೊರ ಬಿಟ್ಟು ಇಂಪ್ರೇಸ್​​​​​​ ಮಾಡ್ತಿದೆ.. ಹೇಳಿದ ಸಮಯಕ್ಕೆ ಬರೋಕ್ಕೆ ಆಗ್ಲಿಲ್ಲ.. ಅದ್ರ ಬದ್ಲು ಈ ಹಾಡನ್ನ ನೋಡಿ ಅನ್ನೋ ಸಂದೇಶ ಸಾರ್ತಿದೆ.

ಏನೇ ಹೇಳಿ.. ಕೆಜಿಎಫ್ ಸಿನಿಮಾ ಎಲ್ಲಾ ಭಾಷೆಯ ಸಿನಿಮಾರಂಗದವರಿಗೆ ಬೇರೆ ಭಾಷೆಯ ಮಂದಿಗೆ ರೆಸ್ಪೆಕ್ಟ್ ಕೋಡೋದನ್ನ ಹೇಳಿಕೊಡ್ತು.. ಆಯಾ ಭಾಷೆಯ ಚಿತ್ರಪ್ರೇಮಿಗಳಿಗೆ ಆಯಾ ಭಾಷೆಯಲ್ಲೇ ಸಿನಿಮಾವನ್ನ ತೋರಿಸೋ ಹಾಡುಗಳನ್ನ ಕೇಳಿಸೋ ಪ್ರಯತ್ನದಲ್ಲಿ ಗೆದಿತ್ತು ಕೆಜಿಎಫ್​ ಪಡೆ.. ಈಗ ರಾಕಿ ಭಾಯ್ ನಡೆದ ದಾರಿಯನ್ನ ಹತ್ತಾರು ಪ್ಯಾನ್ ಇಂಡಿಯನ್ ಮೂವಿಸ್ ಮಾಡ್ತಿವೆ.. ಅದ್ರಲ್ಲೊಂದು ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ..

ಪುಷ್ಪ.. ಟಾಲಿವುಡ್ ಸಿನಿ ಲೋಕದ ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯನ್ ಮೂವಿ.. ಆರ್ಯ ಸಿನಿಮಾಗಳ ಬಳಿಕ ಮತ್ತೊಮ್ಮೆ ಸುಕುಮಾರ್ , ಅಲ್ಲು ಅರ್ಜುನ್ ಒಂದಾಗಿ ಪುಷ್ಪ ಸಿನಿಮಾವನ್ನ ಎರಡೆರಡು ಭಾಗಗಳಲ್ಲಿ ಐದೈದು ಭಾಷೆಗಳಲ್ಲಿ ಮಾಡಿ ಕೈ ಮುಗಿದಿದ್ದಾರೆ.. ಸಿನಿಮಾ ಕಾರ್ಯಗಳನೆಲ್ಲ ಮುಗಿಸಿರೋ ಪುಷ್ಪ ಫಿಲ್ಮ್ ಟೀಮ್ ಡಿಸೆಂಬರ್ ಕಡೆಯ ಶುಕ್ರವಾರ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಿಶ್ವಾದ್ಯಂತ ಪ್ರದರ್ಶನ ಕಾಣಲಿದೆ.

ಈಗಿನಿಂದಲೇ ಪುಷ್ಪ ಸಿನಿಮಾ ಪ್ರಚಾರದ ಕಹಳೆಯನ್ನ ಊದಿರೋ ಫಿಲ್ಮ್ ಟೀಮ್ ಮೊಟ್ಟ ಮೊದಲ ಹಾಡನ್ನ ಐದೈದು ಭಾಷೆಗಳಲ್ಲಿ ಐದೈದು ಬೆಸ್ಟ್ ಸಿಂಗರ್ಸ್ ಬಳಿ ಹಾಡಿಸಿ ಕುಣಿಸಿ ಸಮಸ್ತ ಸಿನಿ ಪ್ರೇಕ್ಷಕರ ಮುಂದೆ ಹಾಡನ್ನ ಸಮರ್ಪಿಸಿದೆ ಪುಷ್ಪ ಫಿಲ್ಮ್ ಟೀಮ್.

blank

ದೇವಿ ಶ್ರೀ ಪ್ರಸಾದ್ ಅವರ ರಾಕ್ ಬ್ಯಾಂಡ್ ಮ್ಯೂಸಿಕ್ ನಲ್ಲಿ ‘‘ಜೋಕೆ ಜೋಕೆ ಮೇಕೆ’’ ಅನ್ನೋ ಹಾಡನ್ನ ನಮ್ಮ ಜೈಹೋ ವಿಜಯ ಪ್ರಕಾಶ್ ಬಳಿ ಹಾಡಿಸಿ ಕನ್ನಡಿಗರಿಗೆ ಸಮರ್ಪಿಸಿದೆ ಪುಷ್ಪ ಪಿಕ್ಚರ್ ಬಳಗ.

ಐದೈದು ಭಾಷೆಗಳಲ್ಲಿ ಪುಷ್ಪ ಸಿನಿಮಾದ ಹಾಡನ್ನ ಬಿಡುಗಡೆ ಮಾಡಿರೋ ಚಿತ್ರತಂಡ ಕನ್ನಡದ ಹಾಡಿನ ಸಾಹಿತ್ಯವನ್ನ ವರದರಾಜ್ ಚಿಕ್ಕಬಳ್ಳಾಪುರ ಎಂಬುವರ ಕೈಯಲ್ಲಿ ಬರಿಸಿದೆ.. ಬೆಳಕನ್ನು ತಿನ್ನುತ್ತದೆ ಎಲೆ , ಎಲೆಯನು ತಿನ್ನುತ್ತದೆ ಮೇಕೆ , ಮೇಕಿಯನ್ನು ತಿನ್ನುತ್ತದೆ ಹುಲಿ , ಇದು ಹಸಿವಿನ ಹಾವಳಿ ಈ ರೀತಿಯ ಆಹಾರ ಸರಪಳಿಯನ್ನ ಹೇಳೋ ಸಾಹಿತ್ಯವನ್ನ ಬರೆಸಿ ಗೆಲ್ಲುತ್ತಿದೆ ಪುಷ್ಪ ಟೀಮ್.

ದೊಡ್ಡ ಮಟ್ಟ ಪ್ರಚಾರವನ್ನ ಮಾಡುತ್ತಾ ಒಂದೊಳ್ಳೆ ಕಮರ್ಶಿಯಲ್ ಎಂಟರ್​​​ಟೈನ್ಮೆಂಟ್ ನೀಡಲು ಪುಷ್ಪ ಟೀಮ್ ಶ್ರಮಿಸುತ್ತಿದೆ.. ಮುಂದ್ಯಾವ ಹಾಡು ಪುಷ್ಪನ ಅಂಗಳದಿಂದ ಬರುತ್ತೆ ಅನ್ನೋದನ್ನ ವೇಟ್ ಆಂಡ್ ವಾಚ್​​.

Source: newsfirstlive.com Source link