ಜೂಜಾಟದ ವೇಳೆ ಗಲಾಟೆ; ದೊಣ್ಣೆ, ಕಲ್ಲುಗಳಿಂದ ಬಡಿದಾಡಿಕೊಂಡ ಎರಡು ಗುಂಪುಗಳು

ಜೂಜಾಟದ ವೇಳೆ ಗಲಾಟೆ; ದೊಣ್ಣೆ, ಕಲ್ಲುಗಳಿಂದ ಬಡಿದಾಡಿಕೊಂಡ ಎರಡು ಗುಂಪುಗಳು

ದಾವಣಗೆರೆ: ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಹರಪ್ಪನಹಳ್ಳಿ ತಾಲ್ಲೂಕಿನ ಅಡವಿಹಳ್ಳಿ ಗ್ರಾಮದಲ್ಲಿ ಎರಡು ಗುಂಪುಗಳು ಪರಸ್ಪರ ದೊಣ್ಣೆ, ಕಲ್ಲುಗಳಿಂದ ಹೊಡೆದಾಡಿಕೊಂಡಿದ್ದಾರೆ.

blank

 

ಪಂಚಮಿ ಹಬ್ಬದ ಜೂಜಾಟದ ಸಂದರ್ಭದಲ್ಲಿ ಎರಡು ಗುಂಪಗಳ‌ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ರಸ್ಪರ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿಕೊಂಡಿದ್ದ ಎರಡು ಗುಂಪುಗಳ ಸದಸ್ಯರು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ.

blank

ಮಹಿಳೆಯರು ಎಂದು ನೋಡದೆ ಹಲ್ಲೆ ನಡೆಸಿದ ಎರಡು ಗುಂಪಿನ ಯುವಕರನ್ನು ಹರಪ್ಪನಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದರು. ಬಳಿಕ ಸ್ಥಳೀಯ ಸ್ವಾಮೀಜಿಗಳ ಸೂಚನೆ ಮೇರೆಗೆ ಎರಡು ಗುಂಪಿನವರು ರಾಜಿ ಮಾಡಿಕೊಂಡಿದ್ದಾರೆ.

Source: newsfirstlive.com Source link