3 ಡೋಸ್​​​ ಲಸಿಕೆ ಪಡೆದ ಸೀರಂ ಸಂಸ್ಥೆ ಮುಖ್ಯಸ್ಥ..! ಅವರು ಕೊಟ್ಟ ಕಾರಣ ಏನು ಗೊತ್ತಾ..?

3 ಡೋಸ್​​​ ಲಸಿಕೆ ಪಡೆದ ಸೀರಂ ಸಂಸ್ಥೆ ಮುಖ್ಯಸ್ಥ..! ಅವರು ಕೊಟ್ಟ ಕಾರಣ ಏನು ಗೊತ್ತಾ..?

ನವದೆಹಲಿ: ದೇಶದಲ್ಲಿ ಕೊರೊನಾ ಮೂರನೇ ಅಲೆಯ ಭೀತಿ ಎದುರಾಗಿದೆ. 2ನೇ ಅಲೆಯಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಕಾಣದ ಜೀವಿಯ ಉಪಟಳ ಮತ್ತೆ ಹೆಚ್ಚಾಗ ತೊಡಗಿದೆ. ಹೇಗಾದ್ರೂ ಮಾಡಿ ಈ ಮಹಾಮಾರಿಯನ್ನ ಕಟ್ಟಿ ಹಾಕಲು ಸರ್ಕಾರಗಳು ಸರ್ಕಸ್ ಮಾಡುತ್ತಿವೆ. ಜೊತೆಗೆ ವ್ಯಾಕ್ಸಿನೇಷನ್‌ಗೆ ವೇಗವನ್ನೂ ನೀಡ್ತಿವೆ. ಈ ಮಧ್ಯೆ ಕೊರೊನಾ ವ್ಯಾಕ್ಸಿನ್‌ ಬಗ್ಗೆ ಕೆಲವು ಚರ್ಚೆಗಳೂ ನಡೆಯುತ್ತಿವೆ.

ಕೊರೊನಾ ವೈರಸ್‌ ನಿಯಂತ್ರಣದಲ್ಲಿಡಲು ವ್ಯಾಕ್ಸಿನ್‌ ಮೊದಲ ಆಯ್ಕೆಯಾಗಿದೆ. ವ್ಯಾಕ್ಸಿನ್‌ನಿಂದ ಕೊರೊನಾ ವೈರಸ್‌ನ ಅಟ್ಟಹಾಸವನ್ನ ಕೊಂಚ ಕಂಟ್ರೋಲ್‌ ಮಾಡ್ಬಹುದಾಗಿದೆ. ಹೀಗಾಗಿ ಎಲ್ಲಾ ರಾಜ್ಯ ಸರ್ಕಾರಗಳು ವ್ಯಾಕ್ಸಿನೇಷನ್‌ ವೇಗ ಹೆಚ್ಚಿಸಲು ಮುಂದಾಗಿವೆ. ಪ್ರತಿ ವ್ಯಕ್ತಿಗೂ ಕೊರೊನಾ ಲಸಿಕೆಯನ್ನ ನೀಡುತ್ತಿವೆ. ಸದ್ಯ ಕೋವಿಶೀಲ್ಡ್, ಕೋವ್ಯಾಕ್ಸಿನ್‌ ಲಸಿಕೆಗಳ 2 ಡೋಸ್‌ ನೀಡಲಾಗುತ್ತಿದೆ. ಇದೀಗ ಲಸಿಕೆಯ ಮೂರನೇ ಡೋಸ್‌ನ ಪಡೆಯಬಹುದು ಎಂಬ ಮಾಹಿತಿ ಹೊರಬಿದ್ದಿದೆ.

blank

ಕೋವಿಶೀಲ್ಡ್ 3ನೇ ಡೋಸ್‌ ಪಡೆದ ಸೈರಸ್‌ ಪೂನಾವಾಲಾ
ಬೂಸ್ಟರ್‌ ಡೋಸ್ ಪಡೆದ್ರೆ ಭಾರೀ ಲಾಭ ಅಂತಿದೆ ಸೀರಂ

ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಕೋವಿಶೀಲ್ಡ್ ಲಸಿಕೆ ಬಗ್ಗೆ ಮತ್ತೊಂದು ಮಾಹಿತಿಯನ್ನ ನೀಡಿದೆ. ಸೀರಂ ಇನ್ಸ್‌ಸ್ಟಿಟ್ಯೂಟ್‌ ಅಧ್ಯಕ್ಷ ಸೈರಸ್ ಪೂನಾವಾಲಾ ಕೋವಿಶೀಲ್ಡ್‌ನ ಮೂರನೇ ಡೋಸ್‌ ಪಡೆದಿದ್ದಾರೆ. ಈ ಮೂಲಕ 2 ಡೋಸ್‌ ಅಲ್ಲ, ಮೂರನೇ ಡೋಸ್‌ ಲಸಿಕೆ ಪಡೆದ್ರೆ ಇನ್ನೂ ಹೆಚ್ಚಿನ ಲಾಭವಾಗಲಿದೆ ಎಂದಿದ್ದಾರೆ. ಅಲ್ಲದೇ ಸ್ವತಃ ಸೈರಸ್ ಪೂನಾವಾಲಾ 3 ನೇ ಡೋಸ್‌ ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ.

ಕೋವಿಶೀಲ್ಡ್ 3ನೇ ಡೋಸ್‌
ಕೋವಿಶೀಲ್ಡ್ ಲಸಿಕೆಯನ್ನ 2 ಡೋಸ್‌ಗಳಲ್ಲಿ ಈಗ ನೀಡಲಾಗುತ್ತಿದೆ. ಆದ್ರೆ, ಲಸಿಕೆ ಪಡೆದ 6 ತಿಂಗಳ ಬಳಿಕ ಆ್ಯಂಟಿಬಾಡೀಸ್‌ ಕಡಿಮೆಯಾಗುತ್ತವೆ. ಹೀಗಾಗಿ ನಾನು ಕೋವಿಶೀಲ್ಡ್ ಲಸಿಕೆಯ 3ನೇ ಡೋಸ್‌ ಪಡೆದಿದ್ದೇನೆ. ಅಲ್ಲದೇ ನಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸುಮಾರು ಏಳರಿಂದ ಎಂಟು ಸಾವಿರ ಉದ್ಯೋಗಿಗಳಿಗೆ ಮೂರನೇ ಡೋಸ್‌ ಲಸಿಕೆ ನೀಡಲಾಗಿದೆ. ಹೀಗಾಗಿ 2ನೇ ಡೋಸ್‌ ಪಡೆದ 6 ತಿಂಗಳ ನಂತರ ಬೂಸ್ಟರ್ ಡೋಸ್‌ ಪಡೆಯುವಂತೆ ನಾನು ಮನವಿ ಮಾಡುತ್ತಿದ್ದೇನೆ.

ಸೈರಸ್ ಪೂನಾವಾಲಾ, ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಅಧ್ಯಕ್ಷ

ಲಸಿಕೆಗಳ ಮಿಶ್ರಣ ತಪ್ಪು ನಿರ್ಧಾರ
ಎರಡು ಕೊರೊನಾ ಲಸಿಕೆಗಳ ಮಿಶ್ರಣವನ್ನು ನೀಡುವುದು ತುಂಬಾ ತಪ್ಪು ನಿರ್ಧಾರ. ಒಂದ್ವೇಳೆ ಲಸಿಕೆಗಳ ಮಿಶ್ರಣದಿಂದ ಜೀವಕ್ಕೆ ಅಪಾಯ ಎದುರಾದ್ರೆ ಲಸಿಕೆ ಉತ್ಪಾದಿಸುವ ಎರಡು ಕಂಪನಿಗಳು ಪರಸ್ಪರ ದೂಷಿಸಿಕೊಳ್ಳುವಂತಾ ಸನ್ನಿವೇಶ ಸೃಷ್ಟಿಯಾಗುತ್ತೆ ಅಂತಲೂ ಸೈರಸ್ ಪೂನಾವಾಲಾ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ವ್ಯಾಕ್ಸಿನ್‌ನ ಜನರಿಗೆ ನೀಡ್ತಿದ್ರೂ, ಈ ಬಗ್ಗೆ ಕೆಲವು ಗೊಂದಲಗಳು ಉಂಟಾಗುತ್ತಲೇ ಇವೆ. ಅದೇನೆ ಇರಲಿ ಕೊರೊನಾ ಮಹಾಮಾರಿಯ ಹುಟ್ಟಡಗಿಸಲು ಲಸಿಕೆ ಸಹಕಾರಿಯಾದ್ರೆ ಸಾಕು ಅಂತಿದ್ದಾರೆ ಜನ.

Source: newsfirstlive.com Source link